Andre Russell: ಬರೋಬ್ಬರಿ 255 ರನ್: ಅಬ್ಬರ, ಸಿಡಿಲಬ್ಬರ…ಅತೀ ವೇಗದ ಅರ್ಧಶತಕ ಸಿಡಿಸಿದ ಆ್ಯಂಡ್ರೆ ರಸೆಲ್
Caribbean Premier League (CPL 2021): ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಸೇಂಟ್ ಲೂಸಿಯಾ ಕಿಂಗ್ಸ್ ತಂಡ ರನ್ಗಳಿಸಲು ಪರದಾಡಿದರು.
Caribbean Premier League (CPL 2021): ಕೆರಿಬಿಯನ್ ಪ್ರೀಮಿಯರ್ ಲೀಗ್ 2021 (CPL 2021) ಅಬ್ಬರ ಶುರುವಾಗಿದೆ. ಟಿ20 ಕ್ರಿಕೆಟ್ನ ಬಲಿಷ್ಠರ ಸಮಾಗಮ ಎಂಬಂತಿರುವ ಸಿಪಿಎಲ್ನ 3ನೇ ದಿನದಲ್ಲೇ ಸ್ಪೋಟಕ ಬ್ಯಾಟ್ಸ್ಮನ್ ಆ್ಯಂಡ್ರೆ ರಸೆಲ್ (Andre Russell )ಹೊಸ ದಾಖಲೆ ಬರೆದಿದ್ದಾರೆ. ವಾರ್ನರ್ ಪಾರ್ಕ್ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಜಮೈಕಾ ತಲ್ಲವಾಸ್ (Jamaica Tallawahs) ಹಾಗೂ ಸೇಂಟ್ ಲೂಸಿಯಾ ಕಿಂಗ್ಸ್ (Saint Lucia Kings) ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಲೂಸಿಯಾ ಕಿಂಗ್ಸ್ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ತಲ್ಲವಾಸ್ ತಂಡಕ್ಕೆ ವಾಲ್ಟನ್ (47) ಹಾಗೂ ಕೆನ್ನರ್ ಲೇವಿಸ್ (48) ಉತ್ತಮ ಆರಂಭ ಒದಗಿಸಿದ್ದರು. ಈ ಜೋಡಿ ಮೊದಲ 6 ಓವರ್‌ನಲ್ಲಿ 81 ರನ್ ಬಾರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಆ ಬಳಿಕ ಕ್ರೀಸ್ಗಿಳಿದ ಯುವ ಬ್ಯಾಟ್ಸ್ಮನ್ ಹೈದರ್ ಅಲಿ 45 ರನ್ ಬಾರಿಸಿದರು. ಇನ್ನು ನಾಯಕ ರೋವ್ಮನ್ ಪೊವೆಲ್ 38 ರನ್ ಸಿಡಿಸಿದರು. ಇದಾಗ್ಯೂ ತಂಡದ ಮೊತ್ತ 200ರ ಅಸುಪಾಸಿಗೇರಲಿದೆ ಎಂದು ಊಹಿಸಲಾಗಿತ್ತು. ಆದರೆ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆ್ಯಂಡ್ರೆ ರಸೆಲ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಕ್ರೀಸ್ಗಿಳಿಯುತ್ತಿದ್ದಂತೆ ಸಿಡಿಲಬ್ಬರ ಶುರು ಮಾಡಿದ್ದರು.
ಸೇಂಟ್ ಲೂಸಿಯಾ ತಂಡದ ಪಾಕ್ ವೇಗಿ ವಹಾಬ್ ರಿಯಾಜ್ರ ಒಂದೇ ಓವರ್‌ನಲ್ಲಿ 32 ರನ್ ಬಾರಿಸಿದರು. ಈ ಓವರ್‌ನಲ್ಲಿ ರಸೆಲ್ ನಾಲ್ಕು ಸಿಕ್ಸರ್ ಮತ್ತು ಒಂದು ಫೋರ್ ಸಿಡಿಸಿದ್ದರು. ಇನ್ನು ಒಟ್ಟು 6 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ ಆ್ಯಂಡ್ರೆ ರಸೆಲ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಕೆರಿಬಿಯನ್ ಪ್ರೀಮಿಯರ್ ಲೀಗ್ನ ಅತ್ಯಂತ ವೇಗದ ಅರ್ಧಶತಕ ಎಂಬ ದಾಖಲೆಗೆ ಪಾತ್ರವಾಯಿತು. ಈ ಹಿಂದೆ ಜೆಪಿ ಡುಮಿನಿ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಕೆರಿಬಿಯನ್ ಕಿಂಗ್ ಆ್ಯಂಡ್ರೆ ರಸೆಲ್ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
Record breaker @Russell12A smashes a 14 ball fifty and takes the @fun88eng magic moment for match 3. #CPL21 #JTvSLK #CricketPlayedLouder #FUN88 pic.twitter.com/qAQjy80jRg
— CPL T20 (@CPL) August 27, 2021
ಇನ್ನು ಈ ಪಂದ್ಯದಲ್ಲಿ ರಸೆಲ್ ಅಜೇಯ 50 ರನ್ ಬಾರಿಸುವುದರೊಂದಿಗೆ ಜಮೈಕಾ ತಲ್ಲವಾಸ್ ತಂಡದ ಸ್ಕೋರ್ ನಿಗದಿತ 20 ಓವರ್‌ನಲ್ಲಿ 5 ವಿಕೆಟ್ ಕಳೆದುಕೊಂಡು 255 ಕ್ಕೆ ಬಂದು ನಿಂತಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಸೇಂಟ್ ಲೂಸಿಯಾ ಕಿಂಗ್ಸ್ ತಂಡ ರನ್ಗಳಿಸಲು ಪರದಾಡಿದರು. ಇತ್ತೀಚೆಗೆ ಆರ್ಸಿಬಿಗೆ ಸೇರ್ಪಡೆಯಾದ ಟಿಮ್ ಡೇವಿಡ್ ಅವರ ಅರ್ಧಶತಕ (28 ಎಸೆತ 56 ರನ್)ದ ಹೊರತಾಗಿ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಜಮೈಕಾ ಬೌಲರುಗಳ ಮುಂದೆ ನೆಲೆಯೂರಲಿಲ್ಲ. ಪರಿಣಾಮ ಸೇಂಟ್ ಲೂಸಿಯಾ ಕಿಂಗ್ಸ್ 135 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಜಮೈಕಾ ತಲ್ಲವಾಸ್ 125 ರನ್ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ: T20 ವಿಶ್ವಕಪ್ ಅರ್ಹತಾ ಪಂದ್ಯ: 20 ಓವರ್‌ನಲ್ಲಿ ಕೇವಲ 32 ರನ್..!
ಇದನ್ನೂ ಓದಿ: India vs England 3rd test: ಸಿರಾಜ್ ಮೇಲೆ ಚೆಂಡಿನ ದಾಳಿ: ಮುಂದುವರೆದ ಇಂಗ್ಲೆಂಡ್ ಪ್ರೇಕ್ಷಕರ ಪುಂಡಾಟ
ಇದನ್ನೂ ಓದಿ: IPL 2021: ಮಾಜಿ RCB ಆಟಗಾರ, ವಿಶ್ವದ ನಂಬರ್ 1 ಬೌಲರ್ ರಾಜಸ್ಥಾನ್ ರಾಯಲ್ಸ್ ಪಾಲು
ಇದನ್ನೂ ಓದಿ: George Garton: RCB ತಂಡಕ್ಕೆ ಎಂಟ್ರಿ ಕೊಟ್ಟಿರುವ ಜಾರ್ಜ್ ಗಾರ್ಟನ್ ಯಾರು..?
(CPL 2021: Andre Russell Smashes Record-Breaking Fifty)