ನೌಕಾಪಡೆಯ ಗುಂಡಿನ ದಾಳಿಯಲ್ಲಿ 5 ಮೀನುಗಾರರಿಗೆ ಗಾಯ; ಶ್ರೀಲಂಕಾದ ರಾಯಭಾರಿಗೆ ಭಾರತ ಸಮನ್ಸ್ ಜಾರಿ

|

Updated on: Jan 28, 2025 | 8:58 PM

ನೌಕಾಪಡೆಯ ಗುಂಡಿನ ದಾಳಿಯಲ್ಲಿ ಐವರು ಮೀನುಗಾರರಿಗೆ ಗಾಯವಾಗಿದೆ. ಹೀಗಾಗಿ, ಶ್ರೀಲಂಕಾದ ರಾಯಭಾರಿಗೆ ಭಾರತ ಸಮನ್ಸ್ ಜಾರಿ ಮಾಡಿದೆ. ಮೀನುಗಾರಿಕೆ ದೋಣಿಯಲ್ಲಿ 243 ಭಾರತೀಯ ಮೀನುಗಾರರಿದ್ದರು. ಅದರಲ್ಲಿ ಐವರು ಗಾಯಗೊಂಡಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರೆ, ಮೂವರು ಸಣ್ಣಪುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ನವದೆಹಲಿಯಲ್ಲಿರುವ ಶ್ರೀಲಂಕಾದ ಹಂಗಾಮಿ ಹೈಕಮಿಷನರ್ ಅವರನ್ನು ಕರೆಸಿ ಈ ಘಟನೆಯ ಬಗ್ಗೆ ಸಮನ್ಸ್​ ಜಾರಿ ಮಾಡಲಾಗಿದೆ.

ನೌಕಾಪಡೆಯ ಗುಂಡಿನ ದಾಳಿಯಲ್ಲಿ 5 ಮೀನುಗಾರರಿಗೆ ಗಾಯ; ಶ್ರೀಲಂಕಾದ ರಾಯಭಾರಿಗೆ ಭಾರತ ಸಮನ್ಸ್ ಜಾರಿ
Navy
Follow us on

ನವದೆಹಲಿ: ಶ್ರೀಲಂಕಾ ನೌಕಾಪಡೆಯು ಭಾರತೀಯ ಮೀನುಗಾರರ ಮೀನುಗಾರಿಕಾ ದೋಣಿಯ ಮೇಲೆ ಗುಂಡು ಹಾರಿಸಿ 5 ಮಂದಿ ಗಾಯಗೊಂಡಿದ್ದಾರೆ. ಇದಾದ ನಂತರ ಭಾರತ ಇಂದು ನವದೆಹಲಿಯಲ್ಲಿರುವ ಶ್ರೀಲಂಕಾದ ಹಂಗಾಮಿ ಹೈಕಮಿಷನರ್‌ಗೆ ಸಮನ್ಸ್ ಜಾರಿ ಮಾಡಿದೆ. ಅವರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾಗ ಶ್ರೀಲಂಕಾ ನೌಕಾಪಡೆ ಗುಂಡು ಹಾರಿಸಿತ್ತು. ಡೆಫ್ಟ್ ದ್ವೀಪದ ಬಳಿ ಶ್ರೀಲಂಕಾ ನೌಕಾಪಡೆಯ ಗುಂಡಿನ ದಾಳಿಯಲ್ಲಿ ಐವರು ಭಾರತೀಯ ಮೀನುಗಾರರು ಗಾಯಗೊಂಡಿದ್ದಾರೆ. ಈ ಘಟನೆಗೆ ಭಾರತವು ಶ್ರೀಲಂಕಾ ನೌಕಾಪಡೆಯನ್ನು ಖಂಡಿಸಿದೆ. ಭಾರತ ಶ್ರೀಲಂಕಾ ರಾಯಭಾರಿಗೆ ಸಮನ್ಸ್ ಜಾರಿ ಮಾಡಿ, ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಡೆಲ್ಫ್ಟ್ ದ್ವೀಪದ ಸಮೀಪದಲ್ಲಿ 13 ಭಾರತೀಯ ಮೀನುಗಾರರನ್ನು ಬಂಧಿಸಿದಾಗ ಶ್ರೀಲಂಕಾ ನೌಕಾಪಡೆಯಿಂದ ಗುಂಡು ಹಾರಿಸಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಮೀನುಗಾರಿಕಾ ದೋಣಿಯಲ್ಲಿದ್ದ 13 ಮೀನುಗಾರರಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಪ್ರಸ್ತುತ ಜಾಫ್ನಾ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಚಿನ್ ಆತ್ಮಹತ್ಯೆ ಕೇಸ್​: ಇಬ್ಬರಿಗೆ ಜಾಮೀನು, ಐವರಿಗೆ 14 ದಿನ ನ್ಯಾಯಾಂಗ ಬಂಧನ

ಇದರಿಂದ ಗಾಯಗೊಂಡ ಮೀನುಗಾರರಿಗೆ ಭಾರತ ಸರ್ಕಾರ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇತರ ಮೂವರು ಮೀನುಗಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

“ಮೀನುಗಾರಿಕೆ ದೋಣಿಯಲ್ಲಿದ್ದ 13 ಮೀನುಗಾರರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಜಾಫ್ನಾ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಇತರ ಮೂವರು ಮೀನುಗಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ