AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಈ ಒಂದು ರಾಜ್ಯಕ್ಕೆ ಬ್ರಿಟಿಷರಿಗೆ ಎಂಟ್ರಿ ಸಿಗಲೇ ಇಲ್ಲ; ಯಾವುದಿದು?

Interesting Facts: ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಆಳ್ವಿಕೆಯಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಎಂದಿಗೂ ಬ್ರಿಟಿಷರ ಆಳ್ವಿಕೆಗೆ ಒಳಪಡದ ಏಕೈಕ ರಾಜ್ಯವೊಂದಿದೆ. ಈ ರಾಜ್ಯದಲ್ಲಿ ಪೋರ್ಚಗೀಸರು ಆಳ್ವಿಕೆ ನಡೆಸುತ್ತಿದ್ದುದರಿಂದ ಬ್ರಿಟಿಷರಿಗೆ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ. ಹಾಗಾದರೆ, ಆ ರಾಜ್ಯ ಯಾವುದು? ಎಂಬ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಭಾರತದ ಈ ಒಂದು ರಾಜ್ಯಕ್ಕೆ ಬ್ರಿಟಿಷರಿಗೆ ಎಂಟ್ರಿ ಸಿಗಲೇ ಇಲ್ಲ; ಯಾವುದಿದು?
Goa
ಸುಷ್ಮಾ ಚಕ್ರೆ
|

Updated on: Jan 28, 2025 | 6:01 PM

Share

ನವದೆಹಲಿ: ಭಾರತೀಯ ಪರಂಪರೆ ಮತ್ತು ಸಂಪ್ರದಾಯವು ಬಹಳ ಶ್ರೀಮಂತವಾಗಿದೆ. ಬ್ರಿಟಿಷರು ಇಲ್ಲಿ 200 ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ಅದಕ್ಕಾಗಿಯೇ ಅವರ ಸಂಸ್ಕೃತಿಯ ಮುದ್ರೆ ಭಾರತೀಯ ರಾಜ್ಯಗಳ ಮೇಲೆ ಗಾಢವಾಗಿ ಬೀರಿದೆ. ಆದರೆ, ಬ್ರಿಟಿಷರು ಎಂದಿಗೂ ಗುಲಾಮರನ್ನಾಗಿ ಮಾಡಲು ಸಾಧ್ಯವಾಗದ ಒಂದು ರಾಜ್ಯವಿತ್ತು ಎಂಬುದು ನಿಮಗೆ ಗೊತ್ತಾ? ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಅಂದರೆ 1947ಕ್ಕೂ ಮುನ್ನ ಭಾರತದಲ್ಲಿ ಬ್ರಿಟಿಷರ ಪ್ರಾಬಲ್ಯವಿತ್ತು.

ಬ್ರಿಟಿಷರು ಇಡೀ ಭಾರತವನ್ನು ಹೇಗೆ ವಶಪಡಿಸಿಕೊಂಡರು ಮತ್ತು ನೂರಾರು ವರ್ಷಗಳ ಕಾಲ ಭಾರತವನ್ನು ಆಳಿದರು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವರು ಭಾರತೀಯರನ್ನು ಬಹಳಷ್ಟು ಶೋಷಿಸಿದರು. ಆದರೆ ಈ ದೇಶದಲ್ಲಿ ಅವರ ಆಳ್ವಿಕೆಯ ಕನಸನ್ನು ನನಸಾಗಿಸಲು ಸಾಧ್ಯವಾಗದ ಒಂದು ರಾಜ್ಯವೂ ಇದೆ. ಅವರು ಅದನ್ನು ಕೊನೆಯವರೆಗೂ ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅನೇಕ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿಸಲು ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಆದರೆ, ದೇಶದ ಈ ಒಂದು ರಾಜ್ಯದಲ್ಲಿ ಬ್ರಿಟಿಷರ ಪ್ರಾಬಲ್ಯ ಇರಲಿಲ್ಲ. ಆ ರಾಜ್ಯದ ಹೆಸರು ಗೋವಾ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಗೋವಾದಲ್ಲಿ 1961ರವರೆಗೂ ಪೋರ್ಚುಗೀಸ್ ಆಳ್ವಿಕೆಯಿದ್ದ ಹಿನ್ನೆಲೆಯಲ್ಲಿ ಈ ರಾಜ್ಯಕ್ಕೆ ಬ್ರಿಟಿಷರ ಪ್ರವೇಶ ಸಾಧ್ಯವಾಗಲಿಲ್ಲ.

ಇದನ್ನೂ ಓದಿ: National Internet Day 2024: ವಿಶ್ವದ ಈ ದೇಶಗಳಲ್ಲಿ ಇಂಟರ್ನೆಟ್ ಬಳಕೆ ನಿಷಿದ್ಧ, ಇಲ್ಲಿದೆ ಕುತೂಹಲಕಾರಿ ಮಾಹಿತಿ

1940ರ ದಶಕದಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕೆ ಹತ್ತಿರವಾಗುತ್ತಿದ್ದಂತೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಪ್ರಾರಂಭವಾಯಿತು. ಆದರೆ 1961ರವರೆಗೆ ಗೋವಾ ಪೋರ್ಚುಗೀಸ್ ವಸಾಹತುವಾಗಿತ್ತು. ಗೋವಾದಲ್ಲಿ ವಸಾಹತುಶಾಹಿ ವಿರೋಧಿ ಚಳವಳಿ ಹೆಚ್ಚಾದಂತೆ ಭಾರತ ಮತ್ತು ಪೋರ್ಚುಗಲ್ ನಡುವಿನ ಸಂಬಂಧಗಳು ಹದಗೆಟ್ಟವು. 1955ರಲ್ಲಿ ಭಾರತವು ಗೋವಾದ ಮೇಲೆ ಆರ್ಥಿಕ ದಿಗ್ಬಂಧನವನ್ನು ವಿಧಿಸಿತು.

ಬ್ರಿಟಿಷರು ಪ್ರಾಬಲ್ಯ ಸಾಧಿಸಿಲ್ಲ ಎಂದ ಮಾತ್ರಕ್ಕೆ ಗೋವಾ ರಾಜ್ಯದಲ್ಲಿ ಯಾವುದೇ ಸಂಪತ್ತು ಇರಲಿಲ್ಲ ಅಥವಾ ಅದು ಸುಂದರವಾಗಿರಲಿಲ್ಲ ಎಂದಲ್ಲ. ಇದು ಇನ್ನೂ ಪ್ರವಾಸಿಗರಿಗೆ ಇದರ ಸೌಂದರ್ಯದ ಕಾರಣಕ್ಕಾಗಿ ನಂಬರ್ ಒನ್ ಆಯ್ಕೆಯಾಗಿದೆ. ಗೋವಾ ಸಮುದ್ರದಿಂದ ಸುತ್ತುವರೆದಿರುವ ಅತ್ಯಂತ ಸುಂದರವಾದ ರಾಜ್ಯ. ಪೋರ್ಚುಗೀಸರು ಈ ರಾಜ್ಯವನ್ನು ಬ್ರಿಟಿಷರ ಆಳ್ವಿಕೆಯಿಂದ ರಕ್ಷಿಸಿದರು.

ಪೋರ್ಚುಗೀಸರು ಬ್ರಿಟಿಷರ ಆಳ್ವಿಕೆಗೂ ಮುನ್ನ 1498ರಲ್ಲಿಯೇ ಭಾರತವನ್ನು ತಲುಪಿದರು. ವಾಸ್ಕೋ-ಡ-ಗಾಮಾ ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿದರು. ಅದರ ನಂತರ ಪೋರ್ಚುಗೀಸರು ಇಲ್ಲಿ ವ್ಯಾಪಾರ ಮಾಡಲು ಪ್ರಾರಂಭಿಸಿದರು. ಈ ಸಮಯದಲ್ಲಿ ಬ್ರಿಟಿಷರು ಮತ್ತು ಪೋರ್ಚುಗೀಸರ ನಡುವೆ ಅನೇಕ ಯುದ್ಧಗಳು ನಡೆದವು, ಆದರೆ ಗೋವಾ ಎಂದಿಗೂ ಬ್ರಿಟಿಷರ ಅಡಿಯಲ್ಲಿ ಇರಲಿಲ್ಲ.

ಇದನ್ನೂ ಓದಿ: ರಿಲಯನ್ಸ್ ಸಾಮ್ರಾಜ್ಯ ಕಟ್ಟಿದ ಧೀರೂಭಾಯಿ ಅಂಬಾನಿ ಸಾಗಿ ಬಂದ ಹಾದಿ ಹೇಗಿತ್ತು? ಇಲ್ಲಿದೆ ಕುತೂಹಲಕಾರಿ ಸಂಗತಿ

ಬ್ರಿಟಿಷರು 1608ರಲ್ಲಿ ಭಾರತದ ಸೂರತ್‌ಗೆ ಬಂದರು. ವ್ಯಾಪಾರ ಮಾಡುವ ಮೂಲಕ ಅವರು ಭಾರತೀಯ ಸಂಪನ್ಮೂಲಗಳು ಮತ್ತು ಸಂಪತ್ತನ್ನು ತಮ್ಮ ದೇಶಕ್ಕೆ ಕೊಂಡೊಯ್ದರು. ಕ್ರಮೇಣ, ಅವರು ದೇಶವನ್ನು ಆಕ್ರಮಿಸಿಕೊಳ್ಳಲು ಪ್ರಾರಂಭಿಸಿದರು. ಆದರೆ, ಅವರು 1947ರಲ್ಲಿ ಭಾರತವನ್ನು ತೊರೆಯಬೇಕಾಯಿತು. ಕೊನೆಯವರೆಗೂ ಭಾರತದ ಗೋವಾ ರಾಜ್ಯವು ಅವರ ಆಳ್ವಿಕೆಯಲ್ಲಿ ಇರಲಿಲ್ಲ. ಹಾಗೇ, ಇಡೀ ಭಾರತ ದೇಶವು ಸ್ವತಂತ್ರವಾದಾಗಲೂ ಗೋವಾ ಮಾತ್ರ ಪೋರ್ಚುಗೀಸ್ ಆಳ್ವಿಕೆಯಲ್ಲಿಯೇ ಇತ್ತು. ಪೋರ್ಚುಗೀಸರು ಸುಮಾರು 400 ವರ್ಷಗಳ ಕಾಲ ಭಾರತದಲ್ಲಿಯೇ ಇದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ