ಅಮಿತ್ ಶಾ ಪುಣ್ಯ ಸ್ನಾನಕ್ಕೆ ವ್ಯಂಗ್ಯವಾಡಿದ್ದ ಖರ್ಗೆ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ
ಕುಂಭಮೇಳದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ನಾನ ಮಾಡಿದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದರು. ಅವರ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ವಿವಾದಕ್ಕೆ ಕಾರಣವಾಗಿದೆ. ಹಾಗಾಗಿ ಖರ್ಗೆ ವಿರುದ್ಧ ಬಿಜೆಪಿಗರು ತಿರುಗಿಬಿದಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರು, ಜನವರಿ 28: ನಿನ್ನೆಯಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಪರಿವಾರ ಸಮೇತ ಭೇಟಿ ನೀಡಿ, ಶಾಹಿ ಸ್ನಾನ ಮಾಡಿದ್ದರು. ಅದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದರು. ಸದ್ಯ ಅವರ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಎಲ್ಲ ಬಿಜೆಪಿ ನಾಯಕರು ಅವರ ಮೇಲೆ ಮುಗಿಬಿದಿದ್ದಾರೆ. ಇದೀಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಕಿಡಿಕಾರಿದ್ದು, ಖರ್ಗೆ ಅವರೇ ನಕಲಿ ಗಾಂಧಿ ಕುಟುಂಬದ ನಕಲಿ ಕಾಂಗ್ರೆಸ ಪಕ್ಷದ ನವಾಬರಂತೇಕೆ ವರ್ತಿಸುತ್ತಿದ್ದೀರಿ ಎಂದಿದ್ದಾರೆ.
ಖರ್ಗೆ ವಿರುದ್ಧ ವಾಗ್ದಾಳಿ
ಈ ಕುರಿತಾಗಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಹಾಕುಂಭ ಹಿಂದೂಗಳ ಅತ್ಯಂತ ದೊಡ್ಡ ಧಾರ್ಮಿಕ, ಆಧ್ಯಾತ್ಮಿಕ ಉತ್ಸವ, ಇಡೀ ಜಗತ್ತೆ ಅತ್ಯಂತ ಭಕ್ತಿ, ನಂಬಿಕೆ, ಉತ್ಸಾಹದಿಂದ ಇದರಲ್ಲಿ ಪಾಲ್ಗೊಳ್ಳುತ್ತಿರುವಾಗ, ದಿನಕ್ಕೆ ಕೋಟ್ಯಾಂತರ ಜನರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನಮಾಡಿ ಪುನೀತರಾಗುತ್ತಿರುವಾಗ ಇದರಲ್ಲೂ ರಾಜಕೀಯ ಮಾಡುತ್ತಿರುವುದು ಯಾರ ಓಲೈಕೆಗಾಗಿ ಎಂದು ವಾಗ್ದಾಳಿ ಮಾಡಿದ್ದಾರೆ.
ಪ್ರಲ್ಹಾದ್ ಜೋಶಿ ಟ್ವೀಟ್
.@kharge ji has spoken against the largest religious gathering in the world and has hurt the sentiments of crores of Hindus. This statement shows the mindset of Congress. Mahakumbh is highlighting the power of faith, belief and spirituality. At a time when lakhs of people are…
— Pralhad Joshi (@JoshiPralhad) January 28, 2025
ಇಂತಹ ಕ್ಷುಲ್ಲಕ ಹೇಳಿಗೆ ನೀಡಿ ಹಿಂದೂ ಧಾರ್ಮಿಕ ಶ್ರದ್ಧೆ ಮತ್ತು ಕೋಟ್ಯಾಂತರ ಹಿಂದೂಗಳನ್ನು ಅವಮಾನಿಸಿದ್ದೀರಿ. ಪ್ರಧಾನಿ ಮೋದಿ ಜೀ ಹಾಗೂ ಅಮಿತ್ ಶಾ ಜೀ ಅವರ ಗಂಗಾ ನದಿಯ ತೀರ್ಥ ಸ್ನಾನದ ಕುರಿತು ನೀವು ಆಡಿದ ವ್ಯಂಗ್ಯದ ಮಾತುಗಳು ಸಮಸ್ತ ಹಿಂದೂಗಳ, ಅವರ ಭಾವನೆಗಳ, ಅವರ ಶೃದ್ಧೆಯನ್ನು ಅವಮಾನಿಸಿ ಆಡಿದ ಮಾತುಗಳು. ನಿಮ್ಮ ಹೇಳಿಕೆಗೆ ಕ್ಷಮೆ ಯಾಚನೆ ಮಾಡಿ. ಇಂಡಿಯಾ ಮೈತ್ರಿಕೂಟ ಸಮಸ್ತ ಸನಾತನ ಧರ್ಮದ ವಿರೋಧಿ ಎಂಬುವದು ಈ ಹೇಳಿಕೆಯಿಂದ ಮತ್ತೊಮ್ಮೆ ಸಾಬಿತಾಗಿದೆ ಎಂದು ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಮೋದಿ, ಅಮಿತ್ ಶಾ ತೀರ್ಥಸ್ನಾನದ ಕುರಿತಾದ ಖರ್ಗೆ ವ್ಯಂಗ್ಯಕ್ಕೆ ವಿಜಯೇಂದ್ರ ತಿರುಗೇಟು
ಇನ್ನು ಈ ವಿಚಾರವಾಗಿ ನಿನ್ನೆ ಬಿಜೆಪಿ ರಾಜ್ಯಾಧ್ಯಕ ವಿಜಯೇಂದ್ರ ಟ್ವಿಟ್ಟರ್ನಲ್ಲಿ ಕಿಡಿಕಾರಿದ್ದು, ಅಮಿತ್ ಶಾರನ್ನು ವ್ಯಂಗ್ಯ ಮಾಡುವ ಮೂಲಕ ಹಿಂದೂ ಧರ್ಮದ ಶ್ರದ್ಧೆಯನ್ನ ಅಪಮಾನಿಸಿದ್ದಾರೆ ಎಂದಿದ್ದರು. ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಕೂಡ ಪ್ರತಿಯಿಸಿದ್ದು, ಖರ್ಗೆ ಹೇಳಿಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಹೇಳಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:10 pm, Tue, 28 January 25