AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Internet Day 2024: ವಿಶ್ವದ ಈ ದೇಶಗಳಲ್ಲಿ ಇಂಟರ್ನೆಟ್ ಬಳಕೆ ನಿಷಿದ್ಧ, ಇಲ್ಲಿದೆ ಕುತೂಹಲಕಾರಿ ಮಾಹಿತಿ

ಇತ್ತೀಚೆಗಿನ ದಿನಗಳಲ್ಲಿ ಇಂಟರ್ನೆಟ್ ಎಲ್ಲರ ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿದೆ. ಇಡೀ ಜಗತ್ತನ್ನು ಸಂಪರ್ಕಿಸುವ ಸುಧಾರಿತ ತಂತ್ರಜ್ಞಾನದ ಕೊಡುಗೆಯನ್ನು ಗುರುತಿಸುವುದು ಹಾಗೂ ಗೌರವಿಸುವ ಉದ್ದೇಶವನ್ನು ರಾಷ್ಟ್ರೀಯ ಇಂಟರ್ನೆಟ್ ದಿನ ಹೊಂದಿದೆ. ಇಂದು ವಿಶ್ವದ ಜನಸಂಖ್ಯೆಯ ಶೇ.63ರಷ್ಟು ಜನರು ಇಂಟರ್ನೆಟ್ ಸಂಪೂರ್ಣವಾಗಿ ಅವಲಂಬಿಸಿದ್ದಾರೆ, ಇದರಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಹಾಗಾದ್ರೆ ಈ ದಿನದ ಆಚರಣೆಯೂ ಹುಟ್ಟಿಕೊಂಡದ್ದು ಹೇಗೆ? ಈ ದಿನದ ಮಹತ್ವದ ಕುರಿತಾದ ಮಾಹಿತಿ ಇಲ್ಲಿದೆ.

National Internet Day 2024: ವಿಶ್ವದ ಈ ದೇಶಗಳಲ್ಲಿ ಇಂಟರ್ನೆಟ್ ಬಳಕೆ ನಿಷಿದ್ಧ, ಇಲ್ಲಿದೆ ಕುತೂಹಲಕಾರಿ ಮಾಹಿತಿ
ಸಾ.ದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Oct 29, 2024 | 10:04 AM

Share

ಆಧುನಿಕ ಜಗತ್ತಿಗೆ ಒಗ್ಗಿಕೊಂಡಿರುವ ನಾವುಗಳು ಎಲ್ಲದರಲ್ಲಿ ಹೊಸತನವನ್ನು ಬಯಸುತ್ತಿದ್ದೇವೆ. ಅಭಿವೃದ್ಧಿ ಹೊಂದುತ್ತಿದ್ದಂತೆ ಅಂತರ್ಜಾಲವು ಜನರ ಜೀವನದ ಬಹುಮುಖ್ಯ ಅಂಗವಾಗಿದೆ. ಕುಳಿತಲ್ಲಿಂದಲೇ ವಿವಿಧ ದೇಶದ ಜನರ ಜೊತೆಗೆ ಸಂಪರ್ಕ ಸಾಧಿಸುವ ಮಟ್ಟಿಗೆ ಅಭಿವೃದ್ಧಿ ಹೊಂದಿದ್ದೇವೆ. ಪ್ರಸ್ತುತ ಇಂಟರ್ನೆಟ್ ಇಲ್ಲದ ಜಗತ್ತನ್ನು ಅರಿತುಕೊಳ್ಳುವುದು ಕಷ್ಟ. ಇಂಟರ್ನೆಟ್ ನಿಂದ ಜ್ಞಾನವನ್ನು ಪಡೆಯುವುದರ ಜೊತೆಗೆ ಮನರಂಜನೆಯೂ ಸಿಗುತ್ತದೆ. ಮನೆಯಲ್ಲೇ ಕುಳಿತು ಕಚೇರಿ ಕೆಲಸ ಕಾರ್ಯಗಳು, ವಿವಿಧ ರೀತಿಯ ಬ್ಯಾಂಕಿಂಗ್ ಮತ್ತು ಶಾಪಿಂಗ್ ಗಳನ್ನು ನಡೆಸಬಹುದು. ಹೀಗೆ ಹತ್ತು ಹಲವು ಪ್ರಯೋಜನಗಳನ್ನು ಹೊಂದಿರುವ ಇಂಟರ್ನೆಟ್ ನಿಂದ ದುಷ್ಪರಿಣಾಮಗಳು ಇದೆ. ಅದಲ್ಲದೇ ವಿಶ್ವದಲ್ಲಿರುವ ಚೀನಾ, ಕ್ಯೂಬಾ, ಇರಾನ್, ಉತ್ತರ ಕೊರಿಯಾ ಮತ್ತು ಸಿರಿಯಾದಂತಹ ಕೆಲವು ದೇಶಗಳಲ್ಲಿನ ಸರ್ಕಾರವು ಇಂಟರ್ನೆಟ್ ಬಳಕೆಗೆ ನಿಷೇಧ ಹೇರಿವೆ. ಹೀಗಾಗಿ ಇವತ್ತಿಗೂ ಈ ಕೆಲವು ದೇಶಗಳ ನಾಗರಿಕರಿಗೆ ಇಂಟರ್ನೆಟ್ ಬಳಸುವಂತಿಲ್ಲ.

ಇಂಟರ್ನೆಟ್ ದಿನದ ಇತಿಹಾಸ

ಮೊದಲ ಇಂಟರ್ನೆಟ್ ಸಂಪರ್ಕವನ್ನು 1969ರ ಅಕ್ಟೋಬರ್ 29 ರಂದು ಮಾಡಲಾಯಿತು. ಇದು ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಇಳಿದ ಕೇವಲ ಎರಡು ತಿಂಗಳ ನಂತರ. ಇದಾಗಿ ಕೆಲವು ವರ್ಷಗಳು ಉರುಳುತ್ತಿದ್ದಂತೆ ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್, ಹೈಪರ್‌ಟೆಕ್ಸ್ಟ್ ಮಾರ್ಕ್‌ಅಪ್ ಭಾಷೆ ಅನ್ನು ಅಭಿವೃದ್ಧಿಗೊಂಡಿತು. WWW, HTTP, HTML ಮತ್ತು URL ಗಳ ಅಭಿವೃದ್ಧಿಯು 1989 ಮತ್ತು 1991 ರ ನಡುವೆ ನಡೆಯಿತು. ಈ ಎಲ್ಲದರ ಸ್ಮರಣಾರ್ಥವಾಗಿ 2005ರ ಅಕ್ಟೋಬರ್ 29 ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಇಂಟರ್ನೆಟ್ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಅಕ್ಟೋಬರ್ 29 ರಂದು ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಅನಿಮೇಷನ್ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ

ಇಂಟರ್ನೆಟ್ ದಿನದ ಮಹತ್ವ

ಇಂಟರ್ನೆಟ್ ಒಂದು ತಂತಿಯಾಗಿದ್ದು, ಎರಡು ಕಂಪ್ಯೂಟರ್‌ಗಳು ಪರಸ್ಪರ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಸರ್ವರ್ ಎನ್ನುವುದು ನಿರ್ದಿಷ್ಟ ಕಂಪ್ಯೂಟರ್ ಆಗಿದ್ದು ಅದು ನೇರವಾಗಿ ಇಂಟರ್ನೆಟ್‌ಗೆ ಸಂಪರ್ಕವನ್ನು ಬೆಸೆದುಕೊಂಡಿದೆ. ಇಡೀ ಜಗತ್ತನ್ನೇ ಬೆಸೆಯುತ್ತಿರುವ ಸುಧಾರಿತ ಇಂಟರ್‌ನೆಟ್‌ ಸೃಷ್ಟಿಕರ್ತರ ಕೊಡುಗೆಗಳನ್ನು ನೆನಪಿಸುವುದು ಹಾಗೂ ಅವರಿಗೆ ಗೌರವ ಸೂಚಿಸಲು ಈ ದಿನವನ್ನು ಮೀಸಲಿಡಿಸಲಾಗಿದ್ದು, ಹೀಗಾಗಿ ಈ ದಿನದ ಆಚರಣೆಯೂ ಮಹತ್ವದ್ದಾಗಿದೆ. ಪ್ರತಿನಿತ್ಯ ನಾವು ಬಳಸುವ ಇಂಟರ್‌ನೆಟ್‌ ಅನ್ನು ಸದಾ ಅತ್ಯುತ್ತಮವಾಗಿಸಲು ಶ್ರಮಿಸುತ್ತಿರುವ ಕೈಗಳಿಗೆ ಈ ದಿನವನ್ನು ಮೀಸಲಿಡಲಾಗಿದೆ. ಇಂಟರ್ನೆಟ್ ಸೇವೆಯಿಂದಾಗಿ ಜನರು ವಿಡಿಯೋ ಕಾನ್ಫರೆನ್ಸ್, ಮನರಂಜನೆಗೆ ಹಾಗೂ ಮಾಹಿತಿಯನ್ನು ಪಡೆಯಲು ಅನುಕೂಲಕರವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ