AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಕ್ಲು ಶಿವ ಕೊಲೆ ಕೇಸ್: ಹತ್ಯೆಗೆ ಪ್ರಮುಖ ಕಾರಣ ಪತ್ತೆ ಮಾಡಿದ ಪೊಲೀಸರು! ಮತ್ತಷ್ಟು ರೋಚಕ ಅಂಶ ಬಯಲು

ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಸಂಕಷ್ಟ ಎದುರಿಸುತ್ತಿರುವ ಬಿಜೆಪಿ ಶಾಸಕ ಭೈರತಿ ಬಸವರಾಜ್​ಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ. ಪೊಲೀಸರು ಶಾಸಕರ ಸುತ್ತಲಿನ ಸಾಕ್ಷ್ಯ ಪತ್ತೆಗೆ ಮುಂದಾಗಿದ್ದಾರೆ. ಇವತ್ತು ಮತ್ತೆ ಭೈರತಿ ವಿಚಾರಣೆಗೆ ಹಾಜರಾಗಬೇಕಿದ್ದು, ಬಂಧನ ಭೀತಿಯೂ ಇದೆ. ಇದರ ಜೊತೆಗೆ ಕೊಲೆಗೆ ಪ್ರಮುಖ ಕಾರಣ ಪತ್ತೆಯಾಗಿದ್ದು, ಪ್ರಕರಣದ ಮತ್ತಷ್ಟು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ.

ಬಿಕ್ಲು ಶಿವ ಕೊಲೆ ಕೇಸ್: ಹತ್ಯೆಗೆ ಪ್ರಮುಖ ಕಾರಣ ಪತ್ತೆ ಮಾಡಿದ ಪೊಲೀಸರು! ಮತ್ತಷ್ಟು ರೋಚಕ ಅಂಶ ಬಯಲು
ಬಿಕ್ಲು ಶಿವ ಹಾಗೂ ಕೊಲೆ ಆರೋಪಿ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Jul 23, 2025 | 6:56 AM

Share

ಬೆಂಗಳೂರು, ಜುಲೈ 23: ರೌಡಿ ಶೀಟರ್ ಬಿಕ್ಲು ಶಿವ (Biklu Shiva) ಕೊಲೆ ಪ್ರಕರಣ ಸಂಬಂಧ ಪೊಲೀಸರ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ. ಬಿಕ್ಲು ಶಿವ ಕೊಲೆಯಾಗಲು ಪ್ರಮುಖ ಕಾರಣ ಏನು ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕೊಲೆಗೆ ಸುಪಾರಿ ಪಡೆದಿದ್ದ ಗ್ಯಾಂಗ್​ ಅನ್ನೂ ಬಲೆಗೆ ಕೆಡವಿದ್ದಾರೆ.

ಶಾಸಕ ಭೈರತಿ ಬಸವರಾಜ್ ವಿರುದ್ಧ ಸಾಕ್ಷ್ಯ ಸಿಕ್ಕರೆ ಬಂಧನ ಸಾಧ್ಯತೆ

ಸದ್ಯ ಪೊಲೀಸರು ರೌಡಿ ಶೀಟರ್ ಬಿಕ್ಲುವನ್ನು ಕೊಂದ ಆರೋಪಿಗಳ ಜಾತಕ ಜಾಲಾಡುತ್ತಿದ್ದಾರೆ. ಇದೀಗ ಕೊಲೆ ಪ್ರಕರಣದಲ್ಲಿ A5 ಆಗಿರುವ ಬಿಜೆಪಿ ಶಾಸಕ ಭೈರತಿ ಬಸವರಾಜ್ ವಿರುದ್ಧ ಪೊಲೀಸರು ಸಾಕ್ಷ್ಯ ಪತ್ತೆಗೆ ಮುಂದಾಗಿದ್ದಾರೆ. ಇಂದು ಭೈರತಿ ಬಸವರಾಜ್​ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಏನಾದರೂ ಸಾಕ್ಷ್ಯ ಸಿಕ್ಕಿದರೆ ಭೈರತಿ ಬಸವರಾಜ್​ರನ್ನು ಬಂಧಿಸುವ ಸಾಧ್ಯತೆ ಇದೆ.

ಒಂದೂವರೆ ಲಕ್ಷ ಸುಪಾರಿ ತೆಗೆದುಕೊಂಡು ಮರ್ಡರ್!

ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಲು ಕೇವಲ ಒಂದೂವರೆ ಲಕ್ಷ ರೂಪಾಯಿ ಸುಪಾರಿ ಪಡೆದಿದ್ದ ಗ್ಯಾಂಗ್​ ಅಂದರ್ ಆಗಿದೆ. ಕೋಲಾರದ ಮಾಲೂರು ಮೂಲದ ನರಸಿಂಹ, ಮುರುಗೇಶ್, ಸುದರ್ಶನ, ಅವಿನಾಶ್ ದಿನ್ನಹಳ್ಳಿ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಬಂಧಿತನಾಗಿರುವ ವಿಮಲ್ ಎಂಬ ಆರೋಪಿ ಮೂಲಕ ನರಸಿಂಹನಿಗೆ ಸುಪಾರಿ ನೀಡಲಾಗಿತ್ತು ಎಂಬ ಅಂಶ ಬಯಲಾಗಿದೆ. ಇಷ್ಟೇ ಅಲ್ಲ ಕೊಲೆಗೆ ಬಳಸಿದ್ದಸ್ಕಾರ್ಪಿಯೋ ಕಾರನ್ನು ಎರಡೂವರೆ ಲಕ್ಷ ರೂಪಾಯಿ ಕೊಟ್ಟು ರೆಡ್ಡಿ ಎಂಬುವವರ ಬಳಿ ಕನ್ನಡಪರ ಹೋರಾಟಗಾರ ಕಂ ನಟ ಆರ್.ಡಿ ಅನಿಲ್ ಖರೀದಿ ಮಾಡಿ ಕಿರಣ್​ಗೆ ಕೊಟ್ಟಿದ್ದ ಎನ್ನಲಾಗಿದೆ.

ಇದನ್ನೂ ಓದಿ
Image
ಬಿಕ್ಲು ಶಿವ ಕೊಲೆ ಕೇಸ್: ಬಗೆದಷ್ಟು ಸ್ಫೋಟಕ ಮಾಹಿತಿ, ನಟ-ನಟಿಯರ ಜತೆಗೂ ನಂಟು
Image
ಬಿಕ್ಲು ಶಿವ ಕೊಲೆ ಕೇಸ್: ಇಬ್ರು ಬಂಧನ, ಭೈರತಿ ಬಸವರಾಜ್ ಸಹೋದರನ ಮಗ ವಶಕ್ಕೆ
Image
ಬಿಜೆಪಿ ಎಂಎಲ್​​ಎಗೆ ನೋಟಿಸ್, ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಮೃತನ ತಾಯಿ
Image
ರೌಡಿಶೀಟರ್​ ಕೊಲೆ: ಶಾಸಕ ಭೈರತಿ ಬಸವರಾಜ್ ಸೇರಿ ಐವರ ವಿರುದ್ಧ ಎಫ್​ಐಆರ್​

ಬಿಕ್ಲು ಶಿವನ ಹತ್ಯೆಗೆ ಪ್ರಮುಖ ಕಾರಣ ಪತ್ತೆ ಮಾಡಿದ ಪೊಲೀಸರು

ಬಿಕ್ಲು ಶಿವ ಕೊಲೆಯ ಪ್ರಮುಖ ಕಾರಣವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಬಿಕ್ಲು ಶಿವ ಪದೇಪದೆ ಫೇಸ್​ಬುಕ್ ಲೈವ್​​ನಲ್ಲಿ ಬಂದು ರೌಡಿಶೀಟರ್ ಜಗ್ಗನ ವಿರುದ್ಧ ಬೈಯುತ್ತಿದ್ದನಂತೆ. ಅಷ್ಟೇ ಅಲ್ಲದೆ, ಹಿಂದೆ ಕೋರ್ಟ್​ನಲ್ಲಿ ಒಮ್ಮೆ ಮುಖಾಮುಖಿಯಾದಾಗ ಇಬ್ಬರ ನಡುವೆ ಮಾತಿನ ಚಕಮಕಿ ಸಹ ಆಗಿತ್ತು. ಈ ವೇಳೆ, ‘‘ಏನು ಮಾಡ್ಕೋತಿಯೋ ಮಾಡ್ಕೋ’’ ಎಂದು ಬಿಕ್ಲು ಶಿವ ಆವಾಜ್ ಹಾಕಿದ್ದನಂತೆ. ಹೀಗಾಗಿ ಜಗ್ಗ ಬಿಕ್ಲುವನ್ನು ಕೊಲೆ ಮಾಡಲು ಸಂಚು ಹೂಡಿದ್ದ ಎಂಬ ವಿಚಾರ ಗೊತ್ತಾಗಿದೆ.

ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್: ಬಗೆದಷ್ಟು ಬಯಲಾಗ್ತಿವೆ ಸ್ಫೋಟಕ ಮಾಹಿತಿ, ಆರೋಪಿಗೆ ನಟ-ನಟಿಯರ ಜತೆಗೂ ನಂಟು

ದಿನೆ ದಿನೇ ಬಿಕ್ಲು ಶಿವನ ಕೊಲೆ ಪ್ರಕರಣಕ್ಕೆ ರೋಚಕ ತಿರುವು ಸಿಗುತ್ತಿದೆ. ಸದ್ಯ ಬಂಧಿತರ ಸಂಖ್ಯೆ 11ಕ್ಕೆ ಏರಿಯಾಗಿದ್ದರೂ ಮೊದಲ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ ಮಾತ್ರ ಸಿಕ್ಕಿಲ್ಲ. ಆದರೆ, ಇಂದು ಭೈರತಿ ಬಸವರಾಜ್ ವಿಚಾರಣೆಗೆ ಹಾಜರಾಗುತ್ತಿದ್ದು, ಅವರ ವಿರುದ್ಧ ಪೊಲೀಸರಿಗೆ ಸಾಕ್ಷ್ಯಗಳು ಸಿಗುತ್ತವೆಯೇ ಎಂಬ ಕುತೂಹಲ ಮೂಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ