ಭಾರತದ ಅತ್ಯಂತ ಎತ್ತರ ವ್ಯಕ್ತಿ ಧರ್ಮೇಂದ್ರ ಪ್ರತಾಪ್ ಸಿಂಗ್​ ಸಮಾಜವಾದಿ ಪಕ್ಷ ಸೇರ್ಪಡೆ; ಎಸ್​ಪಿಗೆ ಬಲಬಂತು ಎಂದು ಉತ್ತರಪ್ರದೇಶ ಅಧ್ಯಕ್ಷ

| Updated By: Lakshmi Hegde

Updated on: Jan 23, 2022 | 11:40 AM

ನಾನು ಈ ದೇಶದ ಅತ್ಯಂತ ಎತ್ತರದ ವ್ಯಕ್ತಿ. ಆದರೆ ಅದರಿಂದ ನನ್ನ ಆರೋಗ್ಯದಲ್ಲೂ ಸಣ್ಣಪುಟ್ಟ ಸಮಸ್ಯೆಗಳಿವೆ. ಅದಕ್ಕಿಂತ ಮುಖ್ಯವಾಗಿ ನನ್ನ ಮದುವೆಯಾಗಲು ಯಾವುದೇ ಹೆಣ್ಣುಮಕ್ಕಳೂ ಮುಂದೆ ಬರುತ್ತಿಲ್ಲ.

ಭಾರತದ ಅತ್ಯಂತ ಎತ್ತರ ವ್ಯಕ್ತಿ ಧರ್ಮೇಂದ್ರ ಪ್ರತಾಪ್ ಸಿಂಗ್​ ಸಮಾಜವಾದಿ ಪಕ್ಷ ಸೇರ್ಪಡೆ; ಎಸ್​ಪಿಗೆ ಬಲಬಂತು ಎಂದು ಉತ್ತರಪ್ರದೇಶ ಅಧ್ಯಕ್ಷ
ಧರ್ಮೇಂದ್ರ ಪ್ರತಾಪ್​ ಸಿಂಗ್​ ಸಮಾಜವಾದಿ ಪಕ್ಷ ಸೇರ್ಪಡೆ
Follow us on

ದೆಹಲಿ: ಭಾರತದ ಅತ್ಯಂತ ಎತ್ತರದ ವ್ಯಕ್ತಿ ಧರ್ಮೇಂದ್ರ ಪ್ರತಾಪ್ ಸಿಂಗ್ (Dharmendra Pratap Singh)  ಅವರು ನಿನ್ನೆ (ಶನಿವಾರ) ಸಮಜವಾದಿ ಪಕ್ಷ ಸೇರ್ಪಡೆಯಾದವರು. ಇವರು ಮೂಲತಃ ಉತ್ತರಪ್ರದೇಶದವರಾಗಿದ್ದು 2.4 ಮೀಟರ್​ (8 ಅಡಿ 1 ಇಂಚು) ಎತ್ತರವಿದ್ದಾರೆ. ಅಷ್ಟಾದರೂ ಅವರು ವಿಶ್ವ ದಾಖಲೆಯಿಂದ 11 ಸಿಎಂಗಳಷ್ಟು ದೂರದಲ್ಲಿದ್ದಾರೆ. ಧರ್ಮೇಂದ್ರ ಪ್ರತಾಪ್ ಸಿಂಗ್​ ಅವರು ಸಮಾಜವಾದಿ ಪಕ್ಷ (Samajwadi Party) ಸೇರ್ಪಡೆಯಾದ ಬಗ್ಗೆ ಪಕ್ಷದ ಅಧ್ಯಕ್ಷ ನರೇಶ್​ ಉತ್ತಮ್​ ಪಟೇಲ್​ ದೃಢಪಡಿಸಿದ್ದಾರೆ. ಅಷ್ಟೇ ಅಲ್ಲ, ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆ (Uttar Pradesh Assembly Election 2022) ದೃಷ್ಟಿಯಿಂದ ಪಕ್ಷಕ್ಕೆ ಬಲಬಂದಂತಾಗಿದೆ ಎಂದೂ ಹೇಳಿದ್ದಾರೆ. ಧರ್ಮೇಂದ್ರ ಪ್ರತಾಪ್ ಸಿಂಗ್​ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗುವ ವೇಳೆ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಕೂಡ ಹಾಜರಿದ್ದರು. 

ಅಖಿಲೇಶ್​ ಯಾದವ್​ ಅವರ ನಾಯಕತ್ವ ಮತ್ತು ಸಮಾಜವಾದಿ ಪಕ್ಷದ ನೀತಿಗಳ ಬಗ್ಗೆ ನಂಬಿಕೆಯಿಟ್ಟು ಇಂದು  ಧರ್ಮೇಂದ್ರ ಪ್ರತಾಪ್​ ಸಿಂಗ್​ ಅವರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಹೇಳಿದ್ದಾರೆ.  ಇನ್ನು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಧರ್ಮೇಂದ್ರ ಪ್ರತಾಪ್ ಸಿಂಗ್​, ನನ್ನ ಎತ್ತರವೇ ನನ್ನ ಹಲವು ಸಮಸ್ಯೆಗಳಿಗೆ ಕಾರಣ. ಎಲ್ಲೇ ಹೋದರೂ ಸಹ ಅನೇಕರು ನನ್ನನ್ನು ಮುತ್ತುತ್ತಾರೆ. ನನ್ನೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಮುಂದಾಗುತ್ತಾರೆ. ಆಗೆಲ್ಲ ನಾನೊಬ್ಬ ಸೆಲೆಬ್ರಿಟಿಯಂತೆ ಅನ್ನಿಸುತ್ತದೆ. ಕೇವಲ ನನ್ನ ಎತ್ತರದ ಕಾರಣದಿಂದ ನಾನು ಜನಪ್ರಿಯನಾಗಿದ್ದೇನೆ ಎಂದು ಹೇಳಿದ್ದಾರೆ.

ಧರ್ಮೇಂದ್ರ ಪ್ರತಾಪ್​ ಏಷ್ಯಾದಲ್ಲಿಯೇ ಅತ್ಯಂತ ವ್ಯಕ್ತಿ ಎಂದು ಹೇಳಲಾಗಿದೆ. ಅವರು ಎಲ್ಲೇ ಹೋಗಲಿ ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಅನೇಕರು ಮುಗಿಬೀಳುತ್ತಾರೆ. ಸಾಮಾನ್ಯ ಜನರಷ್ಟೇ ಅಲ್ಲ, ಪೊಲೀಸ್ ಸಿಬ್ಬಂದಿ, ಇತರ ಸರ್ಕಾರಿ ಅಧಿಕಾರಿಗಳೂ ಕೂಡ ಫೋಟೋಕ್ಕಾಗಿ ಬರುತ್ತಾರೆ. ಅಂದಹಾಗೇ, ಧರ್ಮೇಂದ್ರ ಪ್ರತಾಪ್ ಸಿಂಗ್ ಅವರು ಉತ್ತರ ಪ್ರದೇಶ ಪಂಚಾಯತ್​ ಚುನಾವಣೆ ವೇಳೆ ಸಕ್ರಿಯರಾಗಿದ್ದರು.  ಇವರು ಪ್ರತಾಪ್​ಗಢ್​ ಜಿಲ್ಲೆಯ ನರಹರಪುರ್ ಕಾಸಿಯಾಹಿ ಗ್ರಾಮದ ನಿವಾಸಿಯಾಗಿದ್ದಾರೆ. ಇವರಿಗೆ ಇಬ್ಬರು ಸೋದರಿಯರು ಹಾಗೂ ಇಬ್ಬರು ಸೋದರರು ಇದ್ದಾರೆ. ಹಿಂದುಳಿದ ವರ್ಗದ ಕುಟುಂಬದವಾರ ಇವರು ತಮಗೆ ಸಹಾಯ ಮಾಡುವಂತೆ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೂ ಈ ಹಿಂದೆ ಮನವಿ ಮಾಡಿದ್ದರು. ನಾನು ಈ ದೇಶದ ಅತ್ಯಂತ ಎತ್ತರದ ವ್ಯಕ್ತಿ. ಆದರೆ ಅದರಿಂದ ನನ್ನ ಆರೋಗ್ಯದಲ್ಲೂ ಸಣ್ಣಪುಟ್ಟ ಸಮಸ್ಯೆಗಳಿವೆ. ಅದಕ್ಕಿಂತ ಮುಖ್ಯವಾಗಿ ನನ್ನ ಮದುವೆಯಾಗಲು ಯಾವುದೇ ಹೆಣ್ಣುಮಕ್ಕಳೂ ಮುಂದೆ ಬರುತ್ತಿಲ್ಲ. ಅಷ್ಟೇ ಅಲ್ಲ ಉದ್ಯೋಗವೂ ಸಿಗುತ್ತಿಲ್ಲ ಎಂದು ಹೇಳಿದ್ದರು. ಇವರಿಂದು ಸಮಾಜವಾದಿ ಪಕ್ಷ ಸೇರ್ಪಡೆಯಾದ ಬಗ್ಗೆ ಟ್ವೀಟ್​ ಮಾಡಿರುವ ಪಕ್ಷ, ಫೋಟೋವನ್ನು ಶೇರ್ ಮಾಡಿಕೊಂಡಿದೆ.

ಇದನ್ನೂ ಓದಿ: ಪತ್ನಿಗೆ ಜೀವ ಬೆದರಿಕೆ ಹಾಕಿದ್ದ ‘ಕೈ’ ಮುಖಂಡನ ವಿರುದ್ಧ ಕೇಸ್; ಗಿರೀಶ ಗದಿಗೆಪ್ಪಗೌಡರ್ ಸೇರಿದಂತೆ 6 ಜನರ ವಿರುದ್ಧ ಎಫ್‌ಐಆರ್ ದಾಖಲು

Published On - 9:51 am, Sun, 23 January 22