2070ರ ಹೊತ್ತಿಗೆ ಭಾರತವನ್ನು ಇಂಗಾಲ ಮುಕ್ತ ರಾಷ್ಟ್ರವನ್ನಾಗಿಸುವ ಬದ್ಧತೆ ನಮ್ಮದು: ಕೋಪ್​ 26ರಲ್ಲಿ ಪ್ರಧಾನಿ ಮೋದಿ

| Updated By: Lakshmi Hegde

Updated on: Nov 02, 2021 | 10:00 AM

COP26 Summit: ರೋಮ್​​ನಲ್ಲಿ ಜಿ20 ಶೃಂಗಸಭೆಯ ಎರಡೂ ಅಧಿವೇಶನ ಮುಗಿದ ಬಳಿಕ ನಿನ್ನೆ ಯುಕೆಗೆ ತೆರಳಿ, ಅಲ್ಲಿ ಸ್ಕಾಟ್ಲೆಂಡ್​​ನ ಗ್ಲಾಸ್ಗೋದಲ್ಲಿ ನಡೆದ ವಿಶ್ವಸಂಸ್ಥೆಯ 2021ನೇ ಸಾಲಿನ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.

2070ರ ಹೊತ್ತಿಗೆ ಭಾರತವನ್ನು ಇಂಗಾಲ ಮುಕ್ತ ರಾಷ್ಟ್ರವನ್ನಾಗಿಸುವ ಬದ್ಧತೆ ನಮ್ಮದು: ಕೋಪ್​ 26ರಲ್ಲಿ ಪ್ರಧಾನಿ ಮೋದಿ
ಪ್ರಧಾನಿ ಮೋದಿ
Follow us on

ಗ್ಲಾಸ್ಗೋ: ಭಾರತದ 2070ರ ಹೊತ್ತಿಗೆ ಶೂನ್ಯ ನಿವ್ವಳ ಗುರಿಯೊಂದಿಗೆ ಇಂಗಾಲ ಮುಕ್ತ (Carbon Neutral)ರಾಷ್ಟ್ರವಾಗಿ ಪರಿವರ್ತನೆಗೊಳ್ಳುವ ಬದ್ಧತೆ ಹೊಂದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಕೋಪ್​26 (COP26) ಶೃಂಗಸಭೆಯಲ್ಲಿ ಘೋಷಿಸಿದ್ದಾರೆ. ಅಂದರೆ 2070ರ ಹೊತ್ತಿಗೆ ಭಾರತದಲ್ಲಿ ಶೇ.100ರಷ್ಟು ಇಂಗಾಲ ಹೊರಸೂಸುವಿಕೆ ಮುಕ್ತಗೊಳಿಸುವುದಾಗಿ ಹೇಳಿದ್ದಾರೆ. ರೋಮ್​​ನಲ್ಲಿ ಜಿ20 ಶೃಂಗಸಭೆಯ ಎರಡೂ ಅಧಿವೇಶನ ಮುಗಿದ ಬಳಿಕ ನಿನ್ನೆ ಯುಕೆಗೆ ತೆರಳಿ, ಅಲ್ಲಿ ಸ್ಕಾಟ್ಲೆಂಡ್​​ನ ಗ್ಲಾಸ್ಗೋದಲ್ಲಿ ನಡೆದ ವಿಶ್ವಸಂಸ್ಥೆಯ 2021ನೇ ಸಾಲಿನ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ವೇಳೆ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.  ಹಾಗೇ, ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ವಿಚಾರವನ್ನು ಜಾಗತಿಕ ಚಳವಳಿಯನ್ನಾಗಿ ರೂಪಿಸಬೇಕು. ಸಂಪನ್ಮೂಲಗಳನ್ನು ಅನಗತ್ಯವಾಗಿ ದುರ್ಬಳಕೆ ಮಾಡುವ ಬದಲು, ಸರಿಯಾದ ಮಾರ್ಗದಲ್ಲಿ ಬಳಕೆ ಮಾಡುವಂತಾಗಬೇಕು ಎಂದು ವಿಶ್ವ ನಾಯಕರಲ್ಲಿ ಮನವಿ ಮಾಡಿದರು.

ಹವಾಮಾನ ಹಣಕಾಸು ಬದ್ಧತೆಯನ್ನು ಮರೆತ ಮುಂದುವರಿದ ರಾಷ್ಟ್ರಗಳಿಗೆ ಮತ್ತೊಮ್ಮೆ ತಮ್ಮ ಜವಾಬ್ದಾರಿಯನ್ನು ನೆನಪಿಸಿದ ಪ್ರಧಾನಿ ಮೋದಿ, 2020ರ ಹೊತ್ತಿಗೆ ಪ್ರತಿವರ್ಷ 100 ಬಿಲಿಯನ್​ ಯುಎಸ್​ ಡಾಲರ್​​ ಹವಾಮಾನ ಹಣಕಾಸು ನೀಡುವ ಭರವಸೆಯನ್ನು ಮುಂದುವರಿದ ರಾಷ್ಟ್ರಗಳು ಮರೆತಿವೆ. ಇನ್ನು ಮುಂದೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬೆಂಬಲ ನೀಡುವ ದೃಷ್ಟಿಯಿದ ಮುಂದುವರಿದ ರಾಷ್ಟ್ರಗಳು 1 ಟ್ರಿಲಿಯನ್​​ಗಳಷ್ಟು ಯುಎಸ್​ ಡಾಲರ್​​ನ್ನು ಹವಾಮಾನ ಸಂಬಂಧಿ ಯೋಜನೆಗಳಿಗಾಗಿ ಸಜ್ಜುಗೊಳಿಸಬೇಕು. ಹವಾಮಾನ ಹಣಕಾಸಿನ ಹಳೇ ಧ್ಯೇಯಗಳೊಂದಿಗೆ ಜಗತ್ತು ಹೊಸ ಗುರಿಯನ್ನು ತಲುಪಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಕೋಪ್​ 26ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಸ್ತುತ ಪಡಿಸಿದ 5 ಬದ್ಧತೆಗಳು ಹೀಗಿವೆ
1. ಭಾರತವು 2070ರ ಹೊತ್ತಿಗೆ ನಿವ್ವಳ ಶೂನ್ಯ ಅಂದರೆ ಸಂಪೂರ್ಣವಾಗಿ ಇಂಗಾಲ ಮುಕ್ತ ರಾಷ್ಟ್ರವಾಗುವಂತೆ ಯೋಜನೆಗಳನ್ನು ಕಾರ್ಯಗತಗೊಳಿಸುತ್ತೇವೆ.
2. 2030ರ ಹೊತ್ತಿಗೆ ಭಾರತದಲ್ಲಿ ಜೈವಿಕ ಅಲ್ಲದ ಇಂಧನಗಳ ಬಳಕೆಯನ್ನು 500 GW ಗೆ ಏರಿಸಲಾಗುವುದು.
3.  ಭಾರತದಲ್ಲಿ ವಾಯುಮಂಡಲಕ್ಕೆ ಸೇರುವ ಇಂಗಾಲದ ಪ್ರಮಾಣವನ್ನು 2030ರ ಹೊತ್ತಿಗೆ ಶೇ.45ರಷ್ಟು ಕಡಿಮೆಗೊಳಿಸಲಾಗುವುದು.
4. ದೇಶದಲ್ಲಿ 2030ರ ಹೊತ್ತಿಗೆ ನವೀಕರಿಸಬಹುದಾದ ಇಂಧನಗಳನ್ನು ಶೇ.50ರಷ್ಟು ಹೆಚ್ಚಿಸುವ ಮೂಲಕ ಇಂಧನ ಅಗತ್ಯತೆಯನ್ನು ನೆರವೇರಿಸುವುದು.
5. ಭಾರತದಲ್ಲಿ 2030ರ ವೇಳೆಗೆ, ಒಟ್ಟು ಯೋಜಿತ ಇಂಗಾಲ ಹೊರಸೂಸುವಿಕೆಯಿಂದ 1 ಬಿಲಿಯನ್​ ಟನ್​​ಗಳಷ್ಟನ್ನು ಕಡಿಮೆ ಮಾಡುವುದು. 

ಇದನ್ನೂ ಓದಿ: Viral Video: ಫ್ರೂಟಿ ಜ್ಯೂಸ್ ನೋಡಿ ಆಸೆ ಪಟ್ಟು ಕನ್ನಡಕ ಹಿಂದಿರುಗಿಸಿದ ಕೋತಿಯ ವಿಡಿಯೊ ಫುಲ್ ವೈರಲ್

Viral Video: ಮದುವೆ ಗಡಿಬಿಡಿಯಲ್ಲಿಯೂ ತನಗಿಷ್ಟದ ಮ್ಯಾಗಿ ತಿನ್ನುತ್ತಾ ಕುಳಿತ ವಧು; ವಿಡಿಯೊ ನೋಡಿ

Published On - 9:46 am, Tue, 2 November 21