2025-26ರ ವೇಳೆಗೆ ಭಾರತ ಕಲ್ಲಿದ್ದಲು ರಫ್ತು ರಾಷ್ಟ್ರವಾಗಿ ಹೊರಹೊಮ್ಮಲಿದೆ – ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ

| Updated By: ಸಾಧು ಶ್ರೀನಾಥ್​

Updated on: Mar 30, 2023 | 2:52 PM

ಸಾಕಷ್ಟು ಕಲ್ಲಿದ್ದಲು (Coal) ನಿಕ್ಷೇಪ ಹೊಂದಿದ್ದರೂ, ಕಲ್ಲಿದ್ದಲು ಆಮದು ಮಾಡಿಕೊಳ್ತಿದ್ದ ಭಾರತ ಕಲ್ಲಿದ್ದಲು ರಫ್ತು ಮಾಡುವತ್ತ ಹೆಜ್ಕೆ ಹಾಕುತ್ತಿದೆ. 2025 - 26 ರ ವೇಳೆಗೆ ಭಾರತ ಕಲ್ಲಿದ್ದಲು ರಫ್ತು (Export) ಆರಂಭಿಸಲಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ (Union Coal Minister Pralhad Joshi) ಹೇಳಿದ್ದಾರೆ.‌

2025-26ರ ವೇಳೆಗೆ ಭಾರತ ಕಲ್ಲಿದ್ದಲು ರಫ್ತು ರಾಷ್ಟ್ರವಾಗಿ ಹೊರಹೊಮ್ಮಲಿದೆ - ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ
Follow us on

ಸಾಕಷ್ಟು ಕಲ್ಲಿದ್ದಲು (Coal) ನಿಕ್ಷೇಪ ಹೊಂದಿದ್ದರೂ, ಕಲ್ಲಿದ್ದಲು ಆಮದು ಮಾಡಿಕೊಳ್ತಿದ್ದ ಭಾರತ ಕಲ್ಲಿದ್ದಲು ರಫ್ತು ಮಾಡುವತ್ತ ಹೆಜ್ಕೆ ಹಾಕುತ್ತಿದೆ. 2025 – 26 ರ ವೇಳೆಗೆ ಭಾರತ ಕಲ್ಲಿದ್ದಲು ರಫ್ತು (Export) ಆರಂಭಿಸಲಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ (Union Coal Minister Pralhad Joshi) ಹೇಳಿದ್ದಾರೆ.‌ ದೇಶದಲ್ಲಿ (Export) ಕಲ್ಲಿದ್ದಲು ನಿಕ್ಷೇಪ ಸಾಕಷ್ಟಿದೆ ಎಂದು ಪ್ರತಿಪಾದಿಸಿದ್ದ ಪ್ರಲ್ಹಾದ್ ಜೋಶಿ, ಕಲ್ಲಿದ್ದಲು ಉತ್ಪಾದನೆಗೆ ಹೆಚ್ಚಿನ ಗಮನ ಹರಿಸಿ, ದೇಶದಲ್ಲಿದ್ದ ಕಲ್ಲಿದ್ದಲು ಕೊರತೆಯನ್ನೂ ನೀಗಿಸಿದ್ದರು. ದಾಖಲೆ ಪ್ರಮಾಣದಲ್ಲಿ ದೇಶಿ ಕಲ್ಲಿದ್ದಲನ್ನು ಉತ್ಪಾದಿಸುವ ಮೂಲಕ ಕಲ್ಲಿದ್ದಲು ಆಮದು ಪ್ರಮಾಣವನ್ನು ಬಹುತೇಕ ಕಡಿತಗೊಳಿಸಿದ್ದರು. ಇದೀಗ 2025 -26 ರ ವೇಳೆಗೆ ಕಲ್ಲಿದ್ದಲನ್ನು ಎಕ್ಸಪೋರ್ಟ್ ಮಾಡುವ ಗುರಿ ಹೊಂದಲಾಗಿದ್ದು, ಡ್ರೈ ಕಲ್ಲಿದ್ದಲ ರಫ್ತನ್ನ ಆರಂಭಿಸುವುದಾಗಿ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಕಲ್ಲಿದ್ದಲು ಬ್ಲಾಕ್‌ಗಳ ವಾಣಿಜ್ಯ ಗಣಿಗಾರಿಕೆಗಾಗಿ ಏಳನೇ ಸುತ್ತಿನ ಹರಾಜು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಏಪ್ರಿಲ್‌ನಲ್ಲಿ ಕಲ್ಲಿದ್ದಲಿಗೆ ಗರಿಷ್ಠ ಬೇಡಿಕೆ ಇದ್ದು, ಬೇಸಿಗೆ ಕಾಲದಲ್ಲಿ ಕಲ್ಲಿದ್ದಲಿನ ನಿರಂತರ ಪೂರೈಕೆಯಾಗಲಿದೆ ಎಂದು ಜೋಶಿ ಭರವಸೆ ನೀಡಿದರು.

ಇದನ್ನೂ ಓದಿ:ರಾಜಕೀಯ ಹಾಗೂ ಧರ್ಮ ಬೇರ್ಪಟ್ಟಾಗ ದ್ವೇಷಪೂರಿತ ಭಾಷಣಗಳು ನಿಲ್ಲುತ್ತವೆ: ಸುಪ್ರೀಂಕೋರ್ಟ್​

ಪ್ರಸಕ್ತ ಹಣಕಾಸು ವರ್ಷದಲ್ಲಿ ಕಲ್ಲಿದ್ದಲಿನ ದೇಶೀಯ ಬೇಡಿಕೆಯು 1,087 ಮಿಲಿಯನ್ ಟನ್‌ಗಳನ್ನು ತಲುಪಲಿದೆ ಎಂದು ಅಂದಾಜಿಸಲಾಗಿದೆ. ಉದ್ಯಮವು ತನ್ನ ಅವಶ್ಯಕತೆಗಳ ಕೆಲವು ಭಾಗಗಳನ್ನು ಆಮದುಗಳ ಮೂಲಕ ಪೂರೈಸುತ್ತಿದೆ.. ಏಪ್ರಿಲ್ 1, 2022 ರಂತೆ ಭಾರತದ ಒಟ್ಟು ಅಂದಾಜು ಕಲ್ಲಿದ್ದಲು ನಿಕ್ಷೇಪವು 3.61 ಲಕ್ಷ ಮಿಲಿಯನ್ ಟನ್ (MT) ಆಗಿತ್ತು.

90 MT ನಷ್ಟು ಪರ್ಯಾಯ ಕಲ್ಲಿದ್ದಲನ್ನ ಆಮದು ಮಾಡಿಕೊಳ್ಳಲಾಗ್ತಿತ್ತು. 2025-26 ರ ವೇಳೆಗೆ ಡ್ರೈ ಕಲ್ಲಿದ್ದಲ ರಫ್ತು ಪ್ರಾರಂಭಿಸಿದಾಗ, ಥರ್ಮಲ್ ಕಲ್ಲಿದ್ದಲು ಆಮದನ್ನ ನಿಲ್ಲಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇದೇ ವೇಳೆ ಘೋಷಿಸಿದ್ದಾರೆ.

ಇದನ್ನೂ ಓದಿ:ರಾಜಕೀಯ ಲಾಭದ ದುರುದ್ದೇಶದ ಪರಿಷ್ಕೃತ ಮೀಸಲಾತಿ ನೀತಿಯಿಂದ ಯಾವ ಸಮುದಾಯಕ್ಕೂ ಲಾಭ ಇಲ್ಲ: ಸಿದ್ದರಾಮಯ್ಯ

ಈಗಾಗಲೇ ಆಮದಾಗೊರುವ ಕಲ್ಲಿದ್ದಲಿನ ಪ್ರೊಸೆಸ್ ಗೆ ಸ್ಥಾವರಗಳು ಆಮದು ಮುಂದುವರಿಸಬೇಕಾಗಬಹುದು. ಆದರೆ ತಂತ್ರಜ್ಞಾನವನ್ನು ಬದಲಾಯಿಸಿದರೆ ದೇಶೀಯ ಪೂರೈಕೆಯನ್ನು ಸಹ ಮಾಡಬಹುದು. 2023 ರ ಹಣಕಾಸು ವರ್ಷದಲ್ಲಿ 900 MT ನಷ್ಟು ದಾಖಲೆಯ ಪ್ರಮಾಣದಲ್ಲಿ ಕಲ್ಲಿದ್ದಲು ಉತ್ಪಾದನೆ ಮಾಡಲಾಗಿದೆ. ಪ್ರಸ್ತುತ ದೇಶದಲ್ಲಿ 116-117 MT ಕಲ್ಲಿದ್ದಲು ಸಂಗ್ರಹವಿದ್ದು, ಬೇಸಿಗೆಯಲ್ಲಿ ಅಥವಾ ಮಳೆಗಾಲದಲ್ಲಿ ನಿರಂತರ ಕಲ್ಲಿದ್ದಲು ಪೂರೈಕೆಯಾಗಲಿದೆ ಎಂದು ಪ್ರಲ್ಹಾದ್ ಜೋಶಿ ಭರವಸೆ ನೀಡಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Thu, 30 March 23