ಚೀನಾಕ್ಕೆ ತಕ್ಕ ತಿರುಗೇಟು ನೀಡಲು ಸರೋವರದಲ್ಲಿ ಸ್ಟೀಲ್​ ಹಲ್​ ಬೋಟ್​ ಬಿಡಲಿದೆ ಭಾರತೀಯ ಸೇನೆ!

| Updated By: ಸಾಧು ಶ್ರೀನಾಥ್​

Updated on: Jan 02, 2021 | 12:00 PM

ಸ್ಟೀಲ್​ ಹಲ್ ಬೋಟ್​ಗಳನ್ನು ನಮ್ಮ ದೇಶದಲ್ಲೇ ನಿರ್ಮಾಣ ಮಾಡಲಾಗುತ್ತಿದೆ. ಒಂದು ಸಲಕ್ಕೆ 24ರಿಂದ 30 ದಳಗಳ ಸೈನಿಕರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿರುತ್ತವೆ.

ಚೀನಾಕ್ಕೆ ತಕ್ಕ ತಿರುಗೇಟು ನೀಡಲು ಸರೋವರದಲ್ಲಿ ಸ್ಟೀಲ್​ ಹಲ್​ ಬೋಟ್​ ಬಿಡಲಿದೆ ಭಾರತೀಯ ಸೇನೆ!
ಚೀನಾ ಸೇನೆ ಉಪಟಳಕ್ಕೆ ತಿರುಗೇಟು Steel Hull Boat ಗಳನ್ನು ನಮ್ಮ ದೇಶದಲ್ಲೇ ನಿರ್ಮಾಣ ಮಾಡಲಾಗುತ್ತಿದೆ..
Follow us on

ದೆಹಲಿ: ಮೇ ತಿಂಗಳಿಂದ ಭಾರತ ಮತ್ತು ಚೀನಾ ಸೇನೆಗಳ ನಡುವೆ ಲಡಾಖ್​ನ ವಾಸ್ತವ ಗಡಿ ನಿಯಂತ್ರಣಾ ರೇಖೆ ಆಸುಪಾಸು ಉದ್ವಿಗ್ನದ ವಾತಾವರಣ ಹಾಗೆಯೇ ಇದೆ. ಎರಡೂ ರಾಷ್ಟ್ರಗಳು ಅಲ್ಲಿ ಸೇನಾ ಬಲವನ್ನು ಹೆಚ್ಚಿಸಿವೆ. ಇದೀಗ ಭಾರತೀಯ ಸೇನೆ ಮತ್ತೊಂದು ಎಚ್ಚರಿಕೆ ಕ್ರಮ ತೆಗೆದುಕೊಂಡಿದ್ದು, ಪ್ಯಾಂಗೊಂಗ್​ ತ್ಸೋ ಸರೋವರದಲ್ಲಿ Pangong Tso Lake ಗಸ್ತು ತಿರುಗಲು ಸ್ಟೀಲ್ ಹಲ್​ ಬೋಟ್​ಗಳನ್ನು ತಯಾರುಮಾಡುತ್ತಿದೆ.

ಈ ಸರೋವರಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್​ ಆರ್ಮಿ ಪಡೆ ನಡೆಸುತ್ತಿರುವ ಚಟುವಟಿಕೆಗಳ ನಿಯಂತ್ರಣ ಮಾಡಲು ಗಸ್ತು ಪ್ರಮಾಣ ಹೆಚ್ಚಿಸುವುದು ಅನಿವಾರ್ಯ. ಅದಕ್ಕಾಗಿ ಸ್ಟೀಲ್​ ಹಲ್​ ಬೋಟ್​ಗಳನ್ನು Steel Hull Boats ಸಿದ್ಧಪಡಿಸಲಾಗುತ್ತಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಚೀನಾದ ಆಕ್ರಮಣಕಾರಿ ಡಿಕ್ಕಿ ಬೋಟ್​ಗಳ ಉಪಟಳ
ಸರೋವರದಲ್ಲಿ ಚೀನಾ ಬೋಟ್​ಗಳು ಆಕ್ರಮಣಕಾರಿಯಾಗಿ ಗಸ್ತು ತಿರುಗುವ ಜತೆ, ಭಾರತೀಯ ಸೇನಾ ಬೋಟ್​ಗಳಿಗೆ ಬೇಕಂತಲೇ ಡಿಕ್ಕಿ ಮಾಡುತ್ತಿದ್ದವು. ಇದೀಗ ಸಿದ್ಧವಾಗುತ್ತಿರುವ ಸ್ಟೀಲ್​ ಹಲ್ ಬೋಟ್​ಗಳು ಹೆಚ್ಚು ಉದ್ದ ಹಾಗೂ ಅಧಿಕ ಸಾಮರ್ಥ್ಯ ಉಳ್ಳದ್ದಾಗಿವೆ. ಭಾರತೀಯ ಸೇನೆ ಸರೋವರದಲ್ಲಿ ಗಸ್ತು ತಿರುಗುವುದನ್ನು ತಡೆಯಲು ಚೀನಾದ ಸೇನಾ ಬೋಟ್​ಗಳು ಮಾಡುವ ಪ್ರಯತ್ನಗಳನ್ನು ವ್ಯರ್ಥಗೊಳಿಸಲು ಈ ಸ್ಟೀಲ್​ ಹಲ್​ ಬೋಟ್​ಗಳು ಸಹಕಾರಿ ಎಂದೂ ಅವರು ಹೇಳಿದ್ದಾರೆ.

ಸ್ಟೀಲ್​ ಹಲ್ ಬೋಟ್​ಗಳು ನಮ್ಮಲ್ಲೇ ತಯಾರಾಗಿದ್ದು!
ಸ್ಟೀಲ್​ ಹಲ್ ಬೋಟ್​ಗಳನ್ನು ನಮ್ಮ ದೇಶದಲ್ಲೇ ನಿರ್ಮಾಣ ಮಾಡಲಾಗುತ್ತಿದೆ. ಒಂದು ಸಲಕ್ಕೆ 24 ರಿಂದ 30 ದಳಗಳ ಸೈನಿಕರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿರುತ್ತವೆ. ಸರೋವರದಲ್ಲಿ ನಮ್ಮ ಚಲನೆಯ ವೇಗವನ್ನು ಹೆಚ್ಚಿಸಿಕೊಂಡರೆ, ಸೈನಿಕರನ್ನು ಬೇಗನೇ ಸಜ್ಜುಗೊಳಿಸಬಹುದು. ಇದರಿಂದ ಚೀನಾ ಸೇನೆಯ ಉಪಟಳಕ್ಕೆ ತಕ್ಕ ತಿರುಗೇಟು ನೀಡಬಹುದು ಎಂದು ಸೇನೆಯ ಅಧಿಕಾರಿ ತಿಳಿಸಿದ್ದಾರೆ.

30 ವರ್ಷ ನಂತರ.. ಭಾರತದಿಂದ ಅಕ್ಕಿ ಆಮದು ಮಾಡಿಕೊಂಡ ಚೀನಾ!

Published On - 11:33 am, Sat, 5 December 20