ಪಾಕ್ ವಿರುದ್ಧ ಭಾರತ ಪಂದ್ಯ ಸೋತ ಹಿನ್ನೆಲೆ; ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಪಂಜಾಬ್​ನಲ್ಲಿ ಹಲ್ಲೆ

| Updated By: ಸುಷ್ಮಾ ಚಕ್ರೆ

Updated on: Oct 25, 2021 | 1:17 PM

ಭಾರತವು ತನ್ನ ಆರಂಭಿಕ T20 ವಿಶ್ವಕಪ್ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಸೋತ ನಂತರ ಆಕ್ರೋಶಗೊಂಡ ಪಂಜಾಬ್‌ನ ಸಂಗ್ರೂರ್ ಪ್ರದೇಶದ ಎಂಜಿನಿಯರಿಂಗ್ ಕಾಲೇಜಿನ ಬಿಹಾರ, ಉತ್ತರ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿದ್ದ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾರೆ.

ಪಾಕ್ ವಿರುದ್ಧ ಭಾರತ ಪಂದ್ಯ ಸೋತ ಹಿನ್ನೆಲೆ; ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಪಂಜಾಬ್​ನಲ್ಲಿ ಹಲ್ಲೆ
ಪಂಜಾಬಿನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ
Follow us on

ಪಂಜಾಬ್: ಭಾರತ ಮತ್ತು ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದಲ್ಲಿ (India-Pakistan T20 World Cup) ಪಾಕ್ ವಿರುದ್ಧ ಭಾರತ ಹೀನಾಯವಾಗಿ ಸೋತಿದೆ. ಭಾರತವು ತನ್ನ ಆರಂಭಿಕ T20 ವಿಶ್ವಕಪ್ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಸೋತ ನಂತರ ಆಕ್ರೋಶಗೊಂಡ ಪಂಜಾಬ್‌ನ ಸಂಗ್ರೂರ್ ಪ್ರದೇಶದ ಎಂಜಿನಿಯರಿಂಗ್ ಕಾಲೇಜಿನ ಬಿಹಾರ, ಉತ್ತರ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿದ್ದ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾರೆ.

ಘಟನೆ ನಡೆದ ಕಾಲೇಜಿನ ಹಾಸ್ಟೆಲ್​ಗೆ ಪಂಜಾಬ್ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಇಲ್ಲಿನ ಭಾಯಿ ಗುರುದಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಕ್ಯಾಂಪಸ್‌ಗೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಈ ಹಾಸ್ಟೆಲ್​ನಲ್ಲಿ ಹಲವಾರು ರಾಜ್ಯಗಳ ವಿದ್ಯಾರ್ಥಿಗಳು ವಾಸವಾಗಿದ್ದು, ನಿನ್ನೆ ರಾತ್ರಿ ನಡೆದ ಭಾರತ- ಪಾಕಿಸ್ತಾನದ ಮ್ಯಾಚ್ ಬಳಿಕ ಕಾಶ್ಮೀರಿ ವಿದ್ಯಾರ್ಥಿಗಳ ರೂಂ ಮೇಲೆ ಬಿಹಾರ ಹಾಗೂ ಉತ್ತರ ಪ್ರದೇಶದ ವಿದ್ಯಾರ್ಥಿಗಳು ದಾಳಿ ಮಾಡಿ, ಆ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಉತ್ತರ ಪ್ರದೇಶ ಹಾಗೂ ಬಿಹಾರದ ವಿದ್ಯಾರ್ಥಿಗಳು ತಮ್ಮ ಕೋಣೆಗೆ ನುಗ್ಗಿ, ರಾಡ್ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸುತ್ತಿದ್ದಾಗ ಆ ರೂಮಿನಲ್ಲಿದ್ದ ಕಾಶ್ಮೀರದ ವಿದ್ಯಾರ್ಥಿಯೊಬ್ಬರು ಫೇಸ್‌ಬುಕ್‌ನಲ್ಲಿ ಲೈವ್ ವಿಡಿಯೋ ಮಾಡಿದ್ದಾರೆ. ಆ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ದಾಳಿ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಉತ್ತರ ಪ್ರದೇಶ ಮತ್ತು ಬಿಹಾರದ ಕೆಲವು ಸಹ ವಿದ್ಯಾರ್ಥಿಗಳು ರಾಡ್‌ಗಳಿಂದ ತಮ್ಮ ಕೋಣೆಗಳಿಗೆ ನುಗ್ಗಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಅಷ್ಟರಲ್ಲೇ ಕೆಲವು ಸ್ಥಳೀಯ ಪಂಜಾಬಿಗಳು ನಮ್ಮ ರಕ್ಷಣೆಗೆ ಬಂದರು ಎಂದಿದ್ದಾರೆ. ಈ ಘಟನೆಯಲ್ಲಿ ಆರು ಕಾಶ್ಮೀರಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಇದನ್ನೂ ಓದಿ: Viral Video: ಮನೆ ಎದುರು ಲಾಲೂಪ್ರಸಾದ್ ಯಾದವ್ ಪಾದ ತೊಳೆದ ಮಗ ತೇಜ್ ಪ್ರತಾಪ್

Hardik Pandya: ಕೊಹ್ಲಿ ಪಡೆಗೆ ಶಾಕ್ ಮೇಲೆ ಶಾಕ್: ಪಾಕ್ ವಿರುದ್ಧದ ಸೋಲಿನ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ