SCO Summit: ಇಂದು ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮಾತು; ವಿದೇಶಾಂಗ ಸಚಿವ ಎಸ್​.ಜೈಶಂಕರ್​ ಭಾಗಿ

| Updated By: Lakshmi Hegde

Updated on: Sep 17, 2021 | 10:56 AM

ಶಾಂಘೈ ಸಹಕಾರ ಸಂಘಟನೆ ಸ್ಥಾಪನೆಗೊಂಡು 20 ವರ್ಷ ಕಳೆದಿದೆ. ಈ ಬಾರಿ 20ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಈ ಶೃಂಗಸಭೆ ಇನ್ನಷ್ಟು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

SCO Summit: ಇಂದು ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮಾತು; ವಿದೇಶಾಂಗ ಸಚಿವ ಎಸ್​.ಜೈಶಂಕರ್​ ಭಾಗಿ
ಪ್ರಧಾನಿ ಮೋದಿ ಮತ್ತು ಎಸ್​.ಜೈಶಂಕರ್​
Follow us on

ಇಂದು ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (SCO) 21ನೇ ಶೃಂಗಸಭೆ  (SCO Summit)ಇಂದು ತಜಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆಯಲಿದೆ. ಇದರಲ್ಲಿ ಭಾರತ ಪಾಲ್ಗೊಳ್ಳಲಿದ್ದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್​ ಈಗಾಗಲೇ ದುಶಾಂಬೆಯಲ್ಲಿ ಉಪಸ್ಥಿತರಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ (PM Modi)ಯವರು  ಭಾರತದ ನಿಯೋಗದ ನೇತೃತ್ವದ ವಹಿಸಿದ್ದು, ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಷಣ ಮಾಡಲಿದ್ದಾರೆ. ಭಾರತ  ಶಾಂಘೈ ಸಹಕಾರ ಸಂಘಟನೆಯ ಪೂರ್ಣ ಪ್ರಮಾಣದ ಸದಸ್ಯತ್ವ ವಹಿಸಿಕೊಂಡ ಬಳಿಕ ಭಾಗವಹಿಸುತ್ತಿರುವ ನಾಲ್ಕನೇ ಶೃಂಗಸಭೆ ಇದಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಶುರುವಾಗಿದ್ದು, ಅಲ್ಲಿನ ಸನ್ನಿವೇಶವೇ ಇಂದಿನ ಸಭೆಯಲ್ಲಿ ಚರ್ಚೆಯಾಗುವ ಮಹತ್ವದ ವಿಷಯವಾಗಿದೆ ಎನ್ನಲಾಗಿದೆ. 

ಈ ಎಸ್​ಸಿಒ ಶೃಂಗಸಭೆಯ ಹೊರತಾಗಿ ಭಾರತದ ವಿದೇಶಾಂಗ ಸಚಿವ ಜೈಶಂಕರ್​ ಅವರು ಇರಾನ್​, ಅರ್ಮೇನಿಯಾ, ಉಜಬೇಕಿಸ್ತಾನ್​​ ದೇಶಗಳ ವಿದೇಶಾಂಗ ವ್ಯವಹಾರಗಳ ಸಚಿವರನ್ನು ಇಂದು ಭೇಟಿಯಾಗಲಿದ್ದಾರೆ. ತಮ್ಮ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ವೃದ್ಧಿ ಮತ್ತು ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆ ಬಗ್ಗೆಯೂ ಚರ್ಚಿಸಲಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಕೂಡ ಮಾಡಿಕೊಂಡಿದ್ದಾರೆ.

ಶಾಂಘೈ ಸಹಕಾರ ಸಂಘಟನೆಗೆ 20 ವರ್ಷ
ಇನ್ನು ಶಾಂಘೈ ಸಹಕಾರ ಸಂಘಟನೆ ಸ್ಥಾಪನೆಗೊಂಡು 20 ವರ್ಷ ಕಳೆದಿದೆ. ಈ ಬಾರಿ 20ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಈ ಶೃಂಗಸಭೆ ಇನ್ನಷ್ಟು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಕಳೆದ ಎರಡು ದಶಕಗಳಲ್ಲಿ ಈ ಸಂಸ್ಥೆ ನಿರ್ವಹಿಸಿದ ಕಾರ್ಯಚಟುವಟಿಕೆಗಳ ಬಗ್ಗೆ ಶೃಂಗಸಭೆಯಲ್ಲಿ ಚರ್ಚೆ ನಡೆಯಲಿದೆ. ಹಾಗೇ, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ 71ನೇ ಜನ್ಮದಿನವಾಗಿದ್ದು, ಇದೇ ದಿನ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದು ಇನ್ನೊಂದು ವಿಶೇಷ ಸಂಗತಿ.

ಇದನ್ನೂ ಓದಿ: ಕೊರೊನಾದ ಹೊಸ ರೂಪಾಂತರಿಯೊಂದೇ 3ನೇ ಅಲೆ ಹುಟ್ಟುಹಾಕಲು ಸಾಧ್ಯವಿಲ್ಲ: ಎನ್​ಸಿಡಿಸಿ ನಿರ್ದೇಶಕ ಸುಜೀತ್ ಸಿಂಗ್

Happy Birthday Narendra Modi: ಪ್ರಧಾನಿ ನರೇಂದ್ರ ಮೋದಿಗೆ ಹ್ಯಾಪಿ ಬರ್ತ್​​ಡೆ ಹೇಳಿದ ದೇವೇಗೌಡರು-ಹೆಚ್​ಡಿ ಕುಮಾರಸ್ವಾಮಿ

Published On - 9:42 am, Fri, 17 September 21