India Pharmacy Hub ಮಾನವನ ಇತಿಹಾಸದಲ್ಲೇ ಭಾರತದ ಸಾಧನೆ ಅನನ್ಯ; ಈ ಗೆಲವು ಯಾವುದೇ ಒಂದು ವ್ಯಕ್ತಿಗೆ ಸಲ್ಲುವುದಿಲ್ಲ- ಪ್ರಧಾನಿ ಮೋದಿ ಭಾಷಣ

| Updated By: ಸಾಧು ಶ್ರೀನಾಥ್​

Updated on: Feb 08, 2021 | 12:07 PM

Corona Virus ವಿರುದ್ಧದ ಹೋರಾಟವನ್ನು ಗೇಲಿ ಮಾಡಲಾಯಿತು, ಕೊರೊನಾ ವ್ಯಾಕ್ಸಿನ್ ವಿಚಾರದಲ್ಲೂ ಅನೇಕ ಪ್ರಶ್ನೆಗಳನ್ನು ಎತ್ತಿದರು. ಆದರೆ, ಈಗ ಇಡೀ ವಿಶ್ವವೇ ನಮ್ಮತ್ತ ತಿರುಗಿ ನೋಡುತ್ತಿದೆ. PM Modi Speech in Rajya Sabha

India Pharmacy Hub ಮಾನವನ ಇತಿಹಾಸದಲ್ಲೇ ಭಾರತದ ಸಾಧನೆ ಅನನ್ಯ; ಈ ಗೆಲವು ಯಾವುದೇ ಒಂದು ವ್ಯಕ್ತಿಗೆ ಸಲ್ಲುವುದಿಲ್ಲ- ಪ್ರಧಾನಿ ಮೋದಿ ಭಾಷಣ
ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ
Follow us on

ಕೊರೊನಾ (Corona Virus) ವಿರುದ್ಧದ ಹೋರಾಟದಲ್ಲಿ ಭಾರತ ಮಾಡಿರುವ ಸಾಧನೆ ಮಾನವನ ಇತಿಹಾಸದಲ್ಲೇ ಅನನ್ಯವಾದದ್ದು. ಈ ಗೆಲವು ಯಾವುದೇ ಒಂದು ವ್ಯಕ್ತಿಗೆ ಸಲ್ಲುವುದಿಲ್ಲ. ಇಡೀ ಹಿಂದೂಸ್ತಾನ ಕೊರೊನಾ ವಿರುದ್ಧ ಗೆದ್ದಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ನಾವು ದೀಪ ಹಚ್ಚಿದ್ದನ್ನು ವ್ಯಂಗ್ಯ ಮಾಡಲಾಯಿತು, ಕೊರೊನಾ ವಿರುದ್ಧದ ಹೋರಾಟವನ್ನು ಗೇಲಿ ಮಾಡಲಾಯಿತು, ಕೊರೊನಾ ವ್ಯಾಕ್ಸಿನ್ ವಿಚಾರದಲ್ಲೂ ಅನೇಕ ಪ್ರಶ್ನೆಗಳನ್ನು ಎತ್ತಿದರು. ಆದರೆ, ಈಗ ಇಡೀ ವಿಶ್ವವೇ ನಮ್ಮತ್ತ ತಿರುಗಿ ನೋಡುತ್ತಿದೆ ಎಂದು ಪ್ರಧಾನಿ ಮೋದಿ (PM Modi) ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ವಿಶ್ವದಲ್ಲೇ ಅತೀ ಹೆಚ್ಚು ಲಸಿಕೆ ನೀಡಿದ ದೇಶ ಭಾರತ ಎನ್ನುವುದು ಹೆಮ್ಮೆಯ ಸಂಗತಿ. ಭಾರತ ಇಡೀ ವಿಶ್ವದ ಫಾರ್ಮಸಿ ಹಬ್ (Pharmacy Hub) ಆಗಿ ಪರಿವರ್ತನೆ ಹೊಂದಿದೆ. ವಿಶ್ವದ ಅನೇಕ ದೇಶಗಳು ಭಾರತದ ಲಸಿಕೆ ಬಂದಿದೆ‌ ಎಂದು ಖುಷಿಯಿಂದ ಹೇಳಿಕೊಂಡಿವೆ. ಈ ವಿಚಾರಕ್ಕಾಗಿ ಇಡೀ ದೇಶದ ಜನರು ಗರ್ವ ಪಡಬೇಕು ಎಂದು ಪ್ರಧಾನಿ ಹೇಳಿಕೆ ನೀಡಿದ್ದಾರೆ.

ಕೊರೊನಾವನ್ನು ನಮ್ಮ ರಾಜ್ಯಗಳೂ ಯಶಸ್ವಿಯಾಗಿ ನಿಯಂತ್ರಿಸಿವೆ. ಸಾಂಕ್ರಾಮಿಕ ರೋಗಾಣುವಿನ ವಿರುದ್ಧ ರಾಜ್ಯಗಳು ನಡೆಸಿದ ಹೋರಾಟ ಶ್ಲಾಘನೀಯವಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳಿಗೂ ಧನ್ಯವಾದ ಸಮರ್ಪಿಸುತ್ತೇನೆ. ನಮ್ಮನ್ನು ಯಾರು ಎಷ್ಟೇ ಟೀಕೆ ಮಾಡಿದ್ದರೂ ಈಗ ನಾವು ಹೋರಾಟದಲ್ಲಿ ಗೆಲ್ಲುವ ಮೂಲಕ ಸಾಧಿಸಿ ತೋರಿಸಿದ್ದೇವೆ ಎಂಬ ತೃಪ್ತಿ ಇದೆ ಎಂದು ಪರೋಕ್ಷವಾಗಿ ಟೀಕಾಕಾರರಿಗೆ ಚಾಟಿ ಬೀಸಿದರು.

MSP ಇತ್ತು, MSP ಇದೆ ಮತ್ತು MSP ಮುಂದೆಯೂ ಇರಲಿದೆ: ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ

Published On - 12:06 pm, Mon, 8 February 21