ದೆಹಲಿ: ಭಾರತೀಯ ವಾಯುಪಡೆ (Indian Air Force) ಭಾನುವಾರ ಕೇಂದ್ರ ಸರ್ಕಾರದ ‘ಅಗ್ನಿಪಥ’ ಯೋಜನೆಯ (Agnipath scheme) ವಿವರಗಳನ್ನು ಬಿಡುಗಡೆ ಮಾಡಿದೆ. ಇದು ಅರ್ಹತಾ ಮಾನದಂಡಗಳು, ವಯಸ್ಸಿನ ಮಿತಿ, ಶೈಕ್ಷಣಿಕ ಅರ್ಹತೆ ಮೊದಲಾದವುಗಳ ಬಗ್ಗೆ ವಿವರಿಸಿದೆ. ಸಶಸ್ತ್ರ ಪಡೆಗಿರುವ ಹೊಸ ಎಚ್ಆರ್ ಮ್ಯಾನೇಜ್ಮೆಂಟ್ ಯೋಜನೆಗೆ ಹದಿನೇಳೂವರೆ ಮತ್ತು21 ವರ್ಷ ವಯಸ್ಸಿನ ನಡುವೆ ಇರುವ ವಯಸ್ಸಿನ ಎಲ್ಲ ಭಾರತೀಯರು ಅರ್ಹತೆ ಪಡೆದಿರುತ್ತಾರೆ ಎಂದು ಐಎಎಫ್ (IAF) ಬಿಡುಗಡೆ ಮಾಡಿದ ದಾಖಲೆ ಹೇಳಿದೆ. ಅವರು ನಿರ್ದಿಷ್ಟ ವೈದ್ಯಕೀಯ ಅರ್ಹತೆಯ ಷರತ್ತುಗಳನ್ನು ಪೂರೈಸಬೇಕು. ತರಬೇತಿಯ ಅವಧಿಯವರೆಗೆ ಅವರ ಸಮವಸ್ತ್ರದಲ್ಲಿ ಧರಿಸಬೇಕಾದ ವಿಶಿಷ್ಟವಾದ ಚಿಹ್ನೆಯನ್ನು ಹೊಂದಿರುತ್ತಾರೆ. ಹೀಗೆ ನೇಮಕವಾದವರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಇವರಿಗೆ ಪ್ರತಿವರ್ಷ 30 ದಿನಗಳ ರಜೆ ಮತ್ತು ಅನಾರೋಗ್ಯವಿದ್ದರೆ ವೈದ್ಯಕೀಯ ಸಲಹೆ ಮೇರೆಗೆ ರಜೆಯನ್ನೂ ನೀಡಲಾಗುತ್ತದೆ. ಸರ್ಕಾರದ ನಿರ್ದೇಶನದ ಮೇರೆಗೆ ನಾಲ್ಕು ವರ್ಷಗಳ ಅವಧಿಯ ಕೊನೆಯಲ್ಲಿ ಅವರನ್ನು ಔಪಚಾರಿಕ ಸೇವೆಗೆ ಸೇರಿಸಿಕೊಳ್ಳಬಹುದು. ಆದಾಗ್ಯೂ, ಅನಿವಾರ್ಯ ಸಂದರ್ಭಗಳಲ್ಲಿ ಹೊರತುಪಡಿಸಿ, ತಮ್ಮ ಸ್ವಂತ ಕೋರಿಕೆಯ ಮೇರೆಗೆ ನೇಮಕವಾದವರನ್ನು ಸೇವೆಯಿಂದ ಬಿಡುಗಡೆ ಮಾಡುವ ಆಯ್ಕೆ ಇರುವುದಿಲ್ಲ. ಹೀಗೆ ಆಯ್ಕೆಯಾದವರು 30,000 ರೂಮಾಸಿಕ ವೇತನಕ್ಕೆ ಅರ್ಹರಾಗಿರುತ್ತಾರೆ.ಇವರಿಗೆ ವರ್ಷಕ್ಕೆ ಇಂತಿಷ್ಟು ವೇತನ ಏರಿಕೆಯೂ ಆಗಲಿದೆ. ಅಪಾಯ ಮತ್ತು ಕಷ್ಟಗಳು, ಉಡುಗೆ ಮತ್ತು ಪ್ರಯಾಣ ಭತ್ಯೆಗಳು ಮತ್ತು ಮಿಲಿಟರಿಯ ಆರೋಗ್ಯ ಸೇವೆಗಳೂ ಇವರಿಗೆ ಸಿಗಲಿವೆ.
ಮಂಗಳವಾರ ಕೇಂದ್ರ ಸರ್ಕಾರವು ಘೋಷಿಸಿದ ಅಗ್ನಿಪಥ್ ಯೋಜನೆಯು ಭಾರತದಲ್ಲಿ 13 ಲಕ್ಷ ಬಲಿಷ್ಠ ಸಶಸ್ತ್ರ ಪಡೆಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ರಕ್ಷಣಾ ಪಿಂಚಣಿ ಮಸೂದೆಯನ್ನು ಕಡಿಮೆ ಮಾಡಲು ಉದ್ದೇಶಿಸಿದೆ. ಯೋಜನೆಯನ್ನು ಘೋಷಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ಸಶಸ್ತ್ರ ಪಡೆಗಳ ಳಶ ಶಕ್ತಿಯು ವಿಶಾಲವಾದ ಭಾರತೀಯ ಜನಸಂಖ್ಯೆಯಂತೆ ಯುವಜನರಾಗಿರಬೇಕು ಎಂದು ಪ್ರಯತ್ನಗಳನ್ನು ಮಾಡಲಾಗುತ್ತಿದೆ” ಎಂದು ಹೇಳಿದರು.
The Indian Air Force releases details on ‘Agnipath’ recruitment scheme
1/2 pic.twitter.com/YKFtJZ2OzP
— ANI (@ANI) June 19, 2022
‘Agnipath’ recruitment scheme details released by Indian Air Force
2/2 pic.twitter.com/8bIXlTp7sJ
— ANI (@ANI) June 19, 2022
“ಇದು ಆರ್ಥಿಕತೆಗೆ ಹೆಚ್ಚಿನ ಕೌಶಲ್ಯದ ಉದ್ಯೋಗಿಗಳ ಲಭ್ಯತೆಗೆ ಕಾರಣವಾಗುತ್ತದೆ, ಇದು ಉತ್ಪಾದಕತೆ ಗಳಿಕೆ ಮತ್ತು ಒಟ್ಟಾರೆ ಜಿಡಿಪಿ ಬೆಳವಣಿಗೆಯಲ್ಲಿ ಸಹಾಯಕವಾಗಿದೆ” ಎಂದು ಸಿಂಗ್ ಹೇಳಿದ್ದಾರೆ.
ಆದರೆ, ಈ ಘೋಷಣೆ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿದೆ. ಪ್ರತಿಭಟನೆಯು ಸತತ ನಾಲ್ಕನೇ ದಿನವೂ ಮುಂದುವರೆದಿದ್ದು ಇದೀಗ ಪಂಜಾಬ್ ಮತ್ತು ಕೇರಳದಂತಹ ರಾಜ್ಯಗಳಿಗೆ ವ್ಯಾಪಿಸಿದೆ.
ಈ ಯೋಜನೆಯಡಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ನಂತರ ಯಾವುದೇ ನಿವೃತ್ತಿ ಪ್ರಯೋಜನಗಳು ಇರುವುದಿಲ್ಲ ಎಂದು ಪ್ರತಿಭಟನಾ ನಿರತ ಯುವಕರು ಆರೋಪಿಸಿದರು. ಪರಿಸ್ಥಿತಿಯನ್ನು ಶಮನಗೊಳಿಸುವ ಪ್ರಯತ್ನದಲ್ಲಿ, ಅಗ್ನಿಪಥ್ ನಿವೃತ್ತರಿಗೆ ರಕ್ಷಣಾ ಸಚಿವಾಲಯ ಮತ್ತು ಅರೆಸೇನಾ ಪಡೆಗಳಲ್ಲಿನ ಖಾಲಿ ಹುದ್ದೆಗಳಲ್ಲಿ 10 ಪ್ರತಿಶತ ಮೀಸಲಾತಿ ಸೇರಿದಂತೆ ಹಲವಾರು ಪ್ರೋತ್ಸಾಹಕಗಳನ್ನು ಕೇಂದ್ರವು ಶನಿವಾರ ಪ್ರಕಟಿಸಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ