Indian Army Day 2021 | ದೇಶ ಕಾಯುವ ಸೈನಿಕರನ್ನು ನೆನೆದ ಬಾಲಿವುಡ್ ಸ್ಟಾರ್ನಟರು
ಇಂದು ಭೂ ಸೇನಾ ದಿನಾಚರಣೆ. ಈ ವಿಶೇಷ ದಿನದಂದು ಸಾಕಷ್ಟು ಬಾಲಿವುಡ್ ಸ್ಟಾರ್ ನಟರು ಸೈನಿಕರಿಗೆ ವಿಷ್ ಮಾಡಿದ್ದಾರೆ. ಅಲ್ಲದೆ, ದೇಶ ಕಾಯುವ ಸೈನಿಕರಿಗೆ ನಮನ ಸಲ್ಲಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಭಾರತೀಯ ಸೇನೆಯ ಕಥಾವಸ್ತು ಇಟ್ಟುಕೊಂಡು ಸಾಕಷ್ಟು ಚಿತ್ರಗಳು ಬಾಲಿವುಡ್ನಲ್ಲಿ ತೆರೆಗೆ ಬಂದಿವೆ. ಬಾರ್ಡರ್, ಎಲ್ಒಸಿ, ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸೇರಿ ಸಾಕಷ್ಟು ಸಿನಿಮಾಗಳು ಸೇನೆಯನ್ನು ಆಧರಿಸಿ ನಿರ್ಮಾಣವಾಗಿವೆ. ಬಾಲಿವುಡ್ ಮಂದಿ ಇಂದು (ಜ.15) ಭೂ ಸೇನಾ ದಿನಾಚರಣೆಯ ಅಂಗವಾಗಿ ಶುಭಾಶಯಗಳ ಸುರಿ ಮಳೆ ಹರಿಸಿದ್ದಾರೆ.
ಮೇಜರ್ ಸಾಬ್ ಮತ್ತು ಟ್ಯಾಂಗೋ ಚಾರ್ಲಿಯಂಥ ಸಿನಿಮಾದಲ್ಲಿ ನಟಿಸಿದ ಅಜಯ್ ದೇವಗನ್ ಸೇನಾ ದಿನಾಚರಣೆಯನ್ನು ನೆನೆದಿದ್ದಾರೆ. ನಮ್ಮ ಸೈನ್ಯ ಇದ್ದರೆ ನಾವು. ಪ್ರತಿಯೊಬ್ಬ ಭಾರತೀಯ ಸೈನಿಕನಿಗೆ ನನ್ನ ಪ್ರಣಾಮಗಳು ಎಂದಿದ್ದಾರೆ ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.
We are, if our Army is. Saluting every Indian soldier without whom ?? can never be what she is; brave, self-reliant & all-sacrificing. Jai Jawan??Jai Hind#ArmyDay
— Ajay Devgn (@ajaydevgn) January 15, 2021
ಅಕ್ಷಯ್ ಕುಮಾರ್ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋದಲ್ಲಿ ಅವರು ಸೈನಿಕರ ಜತೆ ವಾಲಿಬಾಲ್ ಆಡುತ್ತಿದ್ದಾರೆ.
View this post on Instagram
ಉರಿ ಚಿತ್ರದ ನಾಯಕ ವಿಕ್ಕಿ ಕೌಶಲ್, ಸಮುದ್ರ ಮಟ್ಟದಿಂದ 16,000 ಅಡಿ ಎತ್ತರದಲ್ಲಿರುವ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಸೈನಿಕರೊಂದಿಗೆ ಕಳೆದ ದಿನವನ್ನು ಅವರು ನೆನಪು ಮಾಡಿಕೊಂಡರು.
View this post on Instagram
ಇನ್ನು, ನಟ ಸಂಜಯ್ ದತ್ ಕೂಡ ಸೇನಾ ದಿನಾಚರಣೆಯಂದು ಸೈನಿಕರನ್ನು ನೆನೆದಿದ್ದಾರೆ. ಎಲ್ಒಸಿ ಸಿನಿಮಾದ ಸೆಟ್ನ ಫೋಟೋ ಹಾಕಿ ಸೈನಿಕರ ಕಾರ್ಯವನ್ನು ಶ್ಲಾಘನೆ ಮಾಡಿದ್ದಾರೆ.