Indian Army Day 2022: 74ನೇ ಸೇನಾ ದಿನದ ಶುಭಾಶಯ ಸಲ್ಲಿಸಿದ ಪ್ರಧಾನಿ ಮೋದಿ; ಈ ವಿಶೇಷ ದಿನದ ಇತಿಹಾಸವೇನು? ಇಲ್ಲಿದೆ ಮಾಹಿತಿ

| Updated By: shivaprasad.hs

Updated on: Jan 15, 2022 | 10:04 AM

PM Narendra Modi: ಇಂದು ದೇಶದಲ್ಲಿ 74ನೇ ಸೇನಾ ದಿನವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸೈನಿಕರಿಗೆ ಹಾಗೂ ಕುಟುಂಬದವರಿಗೆ ಶುಭಾಶಯ ಕೋರಿದ್ದಾರೆ. ಈ ದಿನದ ಇತಿಹಾಸ ಹಾಗೂ ಪ್ರಾಮುಖ್ಯತೆ ಏನು? ಇಲ್ಲಿದೆ ಮಾಹಿತಿ.

Indian Army Day 2022: 74ನೇ ಸೇನಾ ದಿನದ ಶುಭಾಶಯ ಸಲ್ಲಿಸಿದ ಪ್ರಧಾನಿ ಮೋದಿ; ಈ ವಿಶೇಷ ದಿನದ ಇತಿಹಾಸವೇನು? ಇಲ್ಲಿದೆ ಮಾಹಿತಿ
ಭಾರತೀಯ ಸೈನಿಕರು (Credits: Narendra Modi/ Twitter)
Follow us on

ಭಾರತೀಯ ಸೇನಾ ದಿನ 2022: ಭಾರತದಲ್ಲಿ ಪ್ರತಿ ವರ್ಷ ಜನವರಿ 15 ರಂದು ಅತ್ಯಂತ ಉತ್ಸಾಹದಿಂದ ಸೇನಾ ದಿನವನ್ನು (Indian Army Day) ಆಚರಿಸಲಾಗುತ್ತದೆ. ಭಾರತೀಯ ಸೇನೆಯ ಕಮಾಂಡರ್-ಇನ್-ಚೀಫ್ ಆಗಿದ್ದ ಫೀಲ್ಡ್ ಮಾರ್ಷಲ್ ಕೊಡಂಡೇರ ಮಾದಪ್ಪ ಕಾರಿಯಪ್ಪ (ಕೆ. ಎಂ. ಕಾರಿಯಪ್ಪ- Field Marshal KM Cariappa) ಅವರನ್ನು ಸ್ಮರಿಸಿ ಈ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ದೆಹಲಿಯ ಕಾರಿಯಪ್ಪ ಪರೇಡ್ ಮೈದಾನದಲ್ಲಿ ಮಿಲಿಟರಿ ಪರೇಡ್ ಮತ್ತು ಇತರ ಅನೇಕ ಸಮರ ಪ್ರದರ್ಶನಗಳನ್ನು ನಡೆಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.  2022 ರಲ್ಲಿ 74 ನೇ ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತಿದ್ದು, ಭಾರತೀಯ ಸೇನೆಯ ತ್ಯಾಗ ಮತ್ತು ಕೊಡುಗೆಗಳನ್ನು ಸ್ಮರಿಸಲಾಗುತ್ತಿದೆ.

ಸೇನಾ ದಿನದ ಇತಿಹಾಸ:
ಏಪ್ರಿಲ್ 1, 1895 ರಂದು, ಬ್ರಿಟಿಷ್ ಆಡಳಿತದೊಳಗೆ ಬ್ರಿಟ್ ಇಂಡಿಯನ್ ಆರ್ಮಿ ಸ್ಥಾಪಿಸಲಾಯಿತು ಮತ್ತು ಇದನ್ನು ಬ್ರಿಟಿಷ್ ಇಂಡಿಯನ್ ಆರ್ಮಿ ಎಂದು ಕರೆಯಲಾಯಿತು. 1947 ರಲ್ಲಿ ಭಾರತ ಸ್ವತಂತ್ರವಾದ ನಂತರ 1949ರ ಜನವರಿ 15ರವರೆಗೆ ದೇಶ ತನ್ನ ಮೊದಲ ಭಾರತೀಯ ಮುಖ್ಯಸ್ಥರನ್ನು ಸ್ವೀಕರಿಸಿರಲಿಲ್ಲ.

ಲೆಫ್ಟಿನೆಂಟ್ ಜನರಲ್ ಕೆಎಂ ಕಾರಿಯಪ್ಪ ಅವರು ಅಂತಿಮ ಬ್ರಿಟಿಷ್ ಕಮಾಂಡರ್-ಇನ್-ಚೀಫ್ ಆಗಿದ್ದ ಜನರಲ್ ಫ್ರಾನ್ಸಿಸ್ ಬುಚರ್ ನಂತರ 1949 ರಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡರು. ಆ ದಿನವನ್ನೇ ಸೇನಾ ದಿನ ಎಂದು ಆಚರಿಸಲಾಗುತ್ತದೆ. ಇಂದು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಸೈನಿಕರಿಗೆ ಗೌರವವನ್ನು ಸಲ್ಲಿಸಲಾಗುತ್ತದೆ.

ದೇಶದಲ್ಲಿ ಭಾರತೀಯ ಸೇನಾ ದಿನವನ್ನು ಹೇಗೆ ಆಚರಿಸಲಾಗುತ್ತದೆ?
ನವದೆಹಲಿಯ ಇಂಡಿಯಾ ಗೇಟ್‌ನಲ್ಲಿರುವ ‘ಅಮರ್ ಜವಾನ್ ಸ್ಮಾರಕದಲ್ಲಿ ಹುತಾತ್ಮರಾದ ಭಾರತೀಯ ಸೇನಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗುತ್ತದೆ. ಗೌರವದ ನಂತರ, ಮಿಲಿಟರಿ ಪ್ರದರ್ಶನಗಳೊಂದಿಗೆ ಭವ್ಯವಾದ ಮೆರವಣಿಗೆಯಲ್ಲಿ ಭಾರತೀಯ ಸೇನೆಯ ಆಧುನಿಕ ತಂತ್ರಜ್ಞಾನ ಮತ್ತು ಸಾಧನೆಗಳನ್ನು ಪ್ರದರ್ಶಿಸಲಾಗುತ್ತದೆ. ಈ ದಿನದಂದು ಸೇನಾ ಪದಕಗಳಂತಹ ಶೌರ್ಯ ಗೌರವಗಳನ್ನು ನೀಡಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾ ಸದಸ್ಯರು ಶೌರ್ಯ ಮತ್ತು ಹೆಚ್ಚು ಗೌರವಾನ್ವಿತ ಸೇವಾ ಪದಕಗಳನ್ನು ಪಡೆಯುತ್ತಾರೆ.

ಸೇನಾ ದಿನಕ್ಕೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ:
ಸೇನಾ ದಿನದಂದು ಸೈನಿಕರಿಗೆ ಶುಭಾಶಯ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ಸೈನಿಕರು ಪ್ರತಿಕೂಲ ವಾತಾವರಣವಿರುವ ಪ್ರದೇಶಗಳಲ್ಲಿ ನಿತ್ಯ ಸೇವೆ ಸಲ್ಲಿಸುತ್ತಾರೆ. ದೇಶ ನೈಸರ್ಗಿಕ ವಿಕೋಪಗಳಂತಹ ಸಮಸ್ಯೆಗಳನ್ನು ಎದುರಿಸುವಾಗ ಸೈನಿಕರು ನೆರವಿಗೆ ಧಾವಿಸುತ್ತಾರೆ. ಸಾಗರೋತ್ತರ ಶಾಂತಿ ಪಾಲನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಸೇವೆಯನ್ನು, ತ್ಯಾಗವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಸೈನಿಕರಿಗೆ, ಅವರ ಕುಟುಂಬದವರಿಗೆ ಸೇನಾ ದಿನದ ಶುಭಾಶಯಗಳು ಎಂದು ಪ್ರಧಾನಿ ನುಡಿದಿದ್ದಾರೆ.

ಇದನ್ನೂ ಓದಿ:

ಲಡಾಖ್: ಕಾರ್ಗಿಲ್​ನಲ್ಲಿ ಸಂಭ್ರಮದ ಪೊಂಗಲ್ ಆಚರಿಸಿದ ಭಾರತೀಯ ಸೈನಿಕರು; ವಿಡಿಯೋ ಇಲ್ಲಿದೆ

ಪತ್ತೆಯಾಯ್ತು ಆಲೂಗಡ್ಡೆ ರೂಪದ ಗ್ರಹ; ಇಲ್ಲಿ ಒಂದು ವರ್ಷವೆಂದರೆ ಎಷ್ಟು ಗಂಟೆ ಗೊತ್ತಾ? ಕುತೂಹಲಕಾರಿ ಮಾಹಿತಿ ಇಲ್ಲಿದೆ

Published On - 9:33 am, Sat, 15 January 22