
ನವದೆಹಲಿ, ಆಗಸ್ಟ್ 05: ಮಾತೆತ್ತಿದರೆ ನೀವು ರಷ್ಯಾ(Russia)ದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸದಿದ್ದರೆ ಸುಂಕ ಹೆಚ್ಚು ಮಾಡುತ್ತೇವೆ ಎಂದು ಭಾರತವನ್ನು ಬೆದರಿಸುತ್ತಿರುವ ಅಮೆರಿಕ(America)ಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ನಮಗೆ ಹೇಳ್ತೀರಲ್ಲಾ ನೀವೇನ್ ಕಮ್ಮಿನಾ, 1954ರಿಂದ 2ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಒದಗಿಸಿರುವುದು ನಮಗೇನು ತಿಳಿದಿಲ್ಲ ಎಂದುಕೊಂಡಿದ್ದೀರಾ ಎಂದು ಭಾರತೀಯ ಸೇನೆ ಅಮೆರಿಕವನ್ನು ಪ್ರಶ್ನಿಸಿದೆ.
1971 ರ ಯುದ್ಧಕ್ಕಾಗಿ ಅಮೆರಿಕವು ದಶಕಗಳಿಂದ ಪಾಕಿಸ್ತಾನಕ್ಕೆ ಹೇಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ ಎಂಬುದನ್ನು ಚರ್ಚಿಸುವ 1971 ರ ಹಳೆಯ ವೃತ್ತಪತ್ರಿಕೆ ತುಣುಕನ್ನು ಭಾರತೀಯ ಸೇನೆಯ ಈಸ್ಟರ್ನ್ ಕಮಾಂಡ್ ಹಂಚಿಕೊಂಡಿದೆ .
ಆಗಸ್ಟ್ 5, 1971 ರ ಹಳೆಯ ವೃತ್ತಪತ್ರಿಕೆ ತುಣುಕನ್ನು ಹಂಚಿಕೊಂಡಿದ್ದು, ಅಮೆರಿಕ ಸರ್ಕಾರ ದಶಕಗಳಿಂದ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಹೇಗೆ ಪೂರೈಸುತ್ತಿದೆ ಎಂಬುದನ್ನು ತೋರಿಸುತ್ತದೆ. ಪಾಕಿಸ್ತಾನವು ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬಾಂಗ್ಲಾದೇಶದಲ್ಲಿ ತನ್ನ ಸಶಸ್ತ್ರ ಆಕ್ರಮಣವನ್ನು ಪ್ರಾರಂಭಿಸಿದ್ದರಿಂದ, ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆಗೆ ಸಂಬಂಧಿಸಿದಂತೆ ಎಲ್ಲಾ ನ್ಯಾಟೋ ಶಕ್ತಿಗಳು ಮತ್ತು ಸೋವಿಯತ್ ಒಕ್ಕೂಟವನ್ನು ಸಂಪರ್ಕಿಸಲಾಗಿದೆ ಎಂದು ರಾಜ್ಯಸಭೆಯಲ್ಲಿ ಆಗಿನ ರಕ್ಷಣಾ ಉತ್ಪಾದನಾ ಸಚಿವ ವಿ.ಸಿ. ಶುಕ್ಲಾ ಅವರ ಪ್ರತಿಕ್ರಿಯೆಯನ್ನು ಕ್ಲಿಪ್ ಉಲ್ಲೇಖಿಸುತ್ತದೆ.
ಈಸ್ಟರ್ನ್ ಕಮಾಂಡ್ ಪೋಸ್ಟ್
#IndianArmy#EasternCommand#VijayVarsh #LiberationOfBangladesh #MediaHighlights
“This Day That Year” Build Up of War – 05 Aug 1971 #KnowFacts.
“𝑼.𝑺 𝑨𝑹𝑴𝑺 𝑾𝑶𝑹𝑻𝑯 $2 𝑩𝑰𝑳𝑳𝑰𝑶𝑵 𝑺𝑯𝑰𝑷𝑷𝑬𝑫 𝑻𝑶 𝑷𝑨𝑲𝑰𝑺𝑻𝑨𝑵 𝑺𝑰𝑵𝑪𝑬 ’54”@adgpi@SpokespersonMoD… pic.twitter.com/wO9jiLlLQf
— EasternCommand_IA (@easterncomd) August 5, 2025
ಶುಕ್ಲಾ ಅವರ ಉತ್ತರದಲ್ಲಿ, ಸೋವಿಯತ್ ಒಕ್ಕೂಟವು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ನಿರಾಕರಿಸಿದೆ ಮತ್ತು ಫ್ರೆಂಚ್ ಸರ್ಕಾರವು ಪಾಕಿಸ್ತಾನದ ಹಳೆಯ ಆದೇಶಗಳಿಗೆ ವಿರುದ್ಧವಾಗಿ ವಿತರಣೆಯನ್ನು ಸಹ ಮಾಡುವುದಿಲ್ಲ ಎಂದು ಹೇಳಿದೆ ಎಂದು ಉಲ್ಲೇಖಿಸಲಾಗಿದೆ. ಆದಾಗ್ಯೂ, ಅಮೆರಿಕ ಸರ್ಕಾರವು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆಯನ್ನು ಮುಂದುವರೆಸಿದೆ.
ಮತ್ತಷ್ಟು ಓದಿ: ಸುಮ್ಮನೆ ನಮ್ಮನ್ನು ಟಾರ್ಗಟ್ ಮಾಡಬೇಡಿ; ಟ್ರಂಪ್ ಸುಂಕ ಬೆದರಿಕೆಗೆ ಭಾರತ ತಿರುಗೇಟು
ಅಮೆರಿಕ ಮತ್ತು ಚೀನಾ ಎರಡೂ ದೇಶಗಳು ಪಾಕಿಸ್ತಾನಕ್ಕೆ ಅತ್ಯಂತ ಕಡಿಮೆ ಬೆಲೆಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿವೆ ಎಂದು ಶುಕ್ಲಾ ಉಲ್ಲೇಖಿಸಿದ್ದರು, ಇದು ಪಾಕಿಸ್ತಾನ ಸೇನೆಯಿಂದ ಬಾಂಗ್ಲಾದೇಶದ ನರಮೇಧ ಮತ್ತು ಭಾರತದ ವಿರುದ್ಧದ ಯುದ್ಧವನ್ನು ಪಾಕಿಸ್ತಾನವು ಅಮೆರಿಕ ಮತ್ತು ಚೀನಾ ಅಗ್ಗದ ಬೆಲೆಗೆ ನೀಡಿದ ಶಸ್ತ್ರಾಸ್ತ್ರಗಳಿಂದ ನಡೆಸಿತು ಎಂದು ಸೂಚಿಸುತ್ತದೆ.
ರಷ್ಯಾ ತೈಲವನ್ನು ಖರೀದಿಸಿದ್ದಕ್ಕಾಗಿ ಮತ್ತು ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಣಕಾಸು ಒದಗಿಸಿದ್ದಕ್ಕಾಗಿ ಭಾರತವನ್ನು ಅಮೆರಿಕ ದೂಷಿಸುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟಗಳು ಸ್ವತಃ ರಷ್ಯಾದೊಂದಿಗೆ ತಮ್ಮ ವ್ಯಾಪಾರವನ್ನು ಮುಂದುವರೆಸಿರುವ ಹಿನ್ನೆಲೆಯಲ್ಲಿ ಈಸ್ಟರ್ನ್ ಕಮಾಂಡ್‌ನ ಪೋಸ್ಟ್ ಮಾಡಿದೆ.
ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನದ (ಈಗ ಬಾಂಗ್ಲಾದೇಶ) ಜನರನ್ನು ಒಳಗೊಂಡ ಬಾಂಗ್ಲಾದೇಶ ವಿಮೋಚನಾ ಯುದ್ಧವು 1971 ಮಾರ್ಚ್ 25 ರಂದು ಪ್ರಾರಂಭವಾಯಿತು. ಈ ಯುದ್ಧವು ಪಾಕಿಸ್ತಾನದ ಅವಮಾನಕರ ಸೋಲಿನೊಂದಿಗೆ ಮತ್ತು ಡಿಸೆಂಬರ್ 16 ರಂದು 93,000 ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರ ಶರಣಾಗತಿಯೊಂದಿಗೆ ಕೊನೆಗೊಂಡಿತು. ಅದಾದ ಕೆಲವೇ ದಿನಗಳಲ್ಲಿ ಬಾಂಗ್ಲಾದೇಶ ಎಂಬ ಸ್ವತಂತ್ರ ರಾಷ್ಟ್ರವು ಹುಟ್ಟಿಕೊಂಡಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:20 pm, Tue, 5 August 25