ಭುವನೇಶ್ವರ: ಒಡಿಶಾ ಅರಣ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅಭಯ್ಕಾಂತ್ ಪಾಠಕ್ ಮೇಲೆ ಅಕ್ರಮ ಆಸ್ತಿಗಳಿಕೆ ಆರೋಪ ಕೇಳಿಬಂದಿದೆ.
ಅರಣ್ಯ ಯೋಜನೆ ಮತ್ತು ಅರಣ್ಯೀಕರಣ ವಿಭಾಗದಲ್ಲಿ ಹೆಚ್ಚುವರಿ ಪ್ರಧಾನ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಭಯ್ ಕಾಂತ್ ಪಾಠಕ್ ಮಗನನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದಾರೆ.
ಪಾಠಕ್ ಒಡೆತನದ ಆಸ್ತಿಗಳ ಬಗ್ಗೆ ತನಿಖೆ ನಡೆಸಲು ಒಡಿಶಾ ಪೊಲೀಸ್ ಜಾಗೃತದಳವು ಕಳೆದ ಮೂರು ದಿನಗಳಲ್ಲಿ ಸುಮಾರು 150 ಅಧಿಕಾರಿಗಳನ್ನು ಭಾರತದಾದ್ಯಂತ ಹಲವು ಕಡೆಗಳಲ್ಲಿ ನಿಯೋಜಿಸಿತ್ತು. ಕಾರ್ಯಾಚರಣೆರಣೆಯ ಬಳಿಕ ಅಧಿಕಾರಿ ಹಾಗೂ ಕುಟುಂಬದ ಸದಸ್ಯರು ವಿಮಾನಗಳನ್ನು ಬಾಡಿಗೆಗೆ (ಚಾರ್ಟರ್ಡ್ ಫ್ಲೈಟ್) ಪಡೆದಿರುವುದು ತಿಳಿದುಬಂದಿತ್ತು. ಸುಮಾರು ₹ 3 ಕೋಟಿ ಮೌಲ್ಯದ ಫ್ಲೈಟ್ ಬಿಲ್ಗಳು ಪತ್ತೆಯಾಗಿವೆ.
ಅಭಯ್ ಕಾಂತ್ ಪಾಠಕ್ ಸುಮಾರು ₹9.35 ಕೋಟಿ ಹಣವನ್ನು ಮಗನ ಖಾತೆಗೆ ಜಮಾಮಾಡಿದ್ದು, ಹಲವಾರು ಐಷಾರಾಮಿ ಕಾರುಗಳು ಮತ್ತು ಬೈಕ್ಗಳು ಮಗನ ಹೆಸರಿನಲ್ಲಿರುವುದು ದೃಢವಾಗಿದೆ. ಶೋಧಕಾರ್ಯದ ವೇಳೆ ನಿವಾಸದಲ್ಲಿ ₹60 ಲಕ್ಷ ನಗದು ಪತ್ತೆಯಾಗಿದೆ. ಜೊತೆಗೆ ದುಬಾರಿ ಮೌಲ್ಯದ ಗೃಹಬಳಕೆ ವಸ್ತುಗಳು ಹಾಗೂ 800ಗ್ರಾಂ ತೂಕದ ಚಿನ್ನಾಭರಣ ದೊರಕಿವೆ. ಮಾತ್ರವಲ್ಲದೇ 23 ಲಕ್ಷ ಮೌಲ್ಯದ ಚಿನ್ನ ಖರೀದಿಗೆ ಸಂಬಂಧಿಸಿದ ದಾಖಲೆಗಳು ವಿಜಿಲೆನ್ಸ್ ಅಧಿಕಾರಿಗಳಿಗೆ ಸಿಕ್ಕಿವೆ.
ಮುಂಬೈನ ತಾಜ್ ಮಹಲ್ ಪ್ಯಾಲೆಸ್ ಹೋಟೆಲ್ನಲ್ಲಿ ₹90 ಲಕ್ಷಕ್ಕಿಂತ ಹೆಚ್ಚಿನ ಹೋಟೆಲ್ ಬಿಲ್ಗಳು ಮತ್ತು ಡಿಸೆಂಬರ್ 15ರಂದು ನಡೆಯಬೇಕಿದ್ದ ಆಕಾಶ್ ಪಾಠಕ್ ವಿವಾಹಕ್ಕಾಗಿ ಉದಯಪುರದ ತಾಜ್ಲೇಕ್ ಪ್ಯಾಲೇಸ್ ಹೋಟೆಲ್ಗೆ ₹20 ಲಕ್ಷ ಮುಂಗಡ ಹಣವನ್ನು ನೀಡಿರುವ ಮಾಹಿತಿ ತನಿಖೆ ಬಳಿಕ ಸ್ಪಷ್ಟವಾಗಿದೆ.
ಇದನ್ನೂ ಓದಿ: KAS ಅಧಿಕಾರಿ ಡಾ. ಸುಧಾ ಆಪ್ತರಿಗೆ ಬೆಳ್ಳಂಬೆಳಗ್ಗೆ ACB ಶಾಕ್: ದಾಳಿಯಲ್ಲಿ ನಗದು, ಅಕ್ರಮ ಆಸ್ತಿ ಪತ್ತೆ
Published On - 1:03 pm, Sun, 29 November 20