ನವದೆಹಲಿ: ಯೇಲ್ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಂಶೋಧಕರ ವಿಶ್ಲೇಷಣೆಯ 2022ರ ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (Environmental Performance Index 2022)ದ ಪ್ರಕಾರ, ಪರಿಸರ ಸೂಚ್ಯಂಕದಲ್ಲಿ ಭಾರತ 180 ದೇಶಗಳ ಪೈಕಿ ಅತಿ ಕೆಳ ಶ್ರೇಣಿಯನ್ನು ಹೊಂದಿತ್ತು. ಆದರೆ, ಆ ವರದಿಯ ವಿಧಾನದಲ್ಲಿ ಅವೈಜ್ಞಾನಿಕತೆ ಮತ್ತು ಪಕ್ಷಪಾತವಿದೆ ಎಂದು ಕೇಂದ್ರ ಪರಿಸರ ಸಚಿವಾಲಯ (Union environment ministry) ಹೇಳಿದೆ.
ಇಪಿಐ ವಿಶ್ಲೇಷಣೆಯನ್ನು ಕೇಂದ್ರ ಪರಿಸರ ಸಚಿವಾಲಯವು ನಿರಾಕರಿಸಿದ್ದು, ಸೂಚ್ಯಂಕದಲ್ಲಿನ ಅನೇಕ ಸೂಚಕಗಳು ಆಧಾರರಹಿತ ಊಹೆಗಳನ್ನು ಆಧರಿಸಿವೆ ಎಂದು ಹೇಳಿದೆ. ಊಹೆಗಳು ಮತ್ತು ಅವೈಜ್ಞಾನಿಕ ವಿಧಾನಗಳಿಂದ ಕೂಡಿದ ವರದಿಯನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದೆ. ಹವಾಮಾನ ಬದಲಾವಣೆ, ಪರಿಸರ ಸಾರ್ವಜನಿಕ ಆರೋಗ್ಯ, ಜೈವಿಕ ವೈವಿಧ್ಯತೆ ಇತ್ಯಾದಿ ಸೇರಿದಂತೆ 40 ಕಾರ್ಯಕ್ಷಮತೆಯ ಸೂಚಕಗಳಲ್ಲಿ 180 ದೇಶಗಳನ್ನು ಶ್ರೇಣೀಕರಿಸಿದ್ದ EPI ಭಾರತವನ್ನು 165ನೇ ಸ್ಥಾನದಲ್ಲಿರಿಸಿತ್ತು. ಡೆನ್ಮಾರ್ಕ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿತ್ತು.
EPI ಹವಾಮಾನ ಬದಲಾವಣೆಯ ಕಾರ್ಯಕ್ಷಮತೆಯ ಮೇಲೆ 180 ದೇಶಗಳಲ್ಲಿ ಭಾರತಕ್ಕೆ 165ನೇ ಸ್ಥಾನವನ್ನು ನೀಡಲಾಗಿತ್ತು. ಆದರೆ, ಕೆಲವು ತಿಂಗಳ ಹಿಂದೆ, ಜರ್ಮನ್‌ವಾಚ್ ಮತ್ತು CAN ಇಂಟರ್ನ್ಯಾಶನಲ್ನಿಂದ ಹವಾಮಾನ ಬದಲಾವಣೆಯ ಕಾರ್ಯಕ್ಷಮತೆ ಸೂಚ್ಯಂಕ (CCPI)ದಲ್ಲಿ ಭಾರತವು 64 ದೇಶಗಳಲ್ಲಿ 10ನೇ ಸ್ಥಾನದಲ್ಲಿದೆ ಎಂದು ಹೇಳಲಾಗಿತ್ತು. ಹಾಗಾದರೆ ಅಂತಹ ಮಹತ್ವದ ವ್ಯತ್ಯಾಸ ಏಕೆ? ಈ ಎಲ್ಲಾ ಶ್ರೇಯಾಂಕಗಳು ವ್ಯಕ್ತಿನಿಷ್ಠವಾಗಿವೆ. ಅವರು ತಮ್ಮ ವಿಶ್ವ ದೃಷ್ಟಿಕೋನಕ್ಕೆ ಅನುಗುಣವಾಗಿ ಸೂಚಕಗಳನ್ನು ನೀಡುತ್ತಾರೆ. ಉದಾಹರಣೆಗೆ ತಲಾವಾರು ಜಿಹೆಚ್ಜಿ ಹೊರಸೂಸುವಿಕೆಯನ್ನು ಬಳಸಿದರೆ ಭಾರತವು ಉನ್ನತ ಸ್ಥಾನವನ್ನು ಪಡೆಯುತ್ತದೆ. ಆದರೆ ಒಬ್ಬರು ಒಟ್ಟು ಜಿಹೆಚ್ಜಿ ಹೊರಸೂಸುವಿಕೆಯನ್ನು ಬಳಸಿದರೆ ಭಾರತವು ಕೆಳ ಸ್ಥಾನದಲ್ಲಿರುತ್ತದೆ. ಇದು ಇಪಿಐ ಮತ್ತು ಸಿಸಿಪಿಐ ನಡುವಿನ ವ್ಯತ್ಯಾಸವಾಗಿದೆ ಎಂದು ಐಫಾರೆಸ್ಟ್ ಗ್ಲೋಬಲ್‌ನ ಪರಿಸರವಾದಿ ಮತ್ತು ಸಿಇಒ ಚಂದ್ರಭೂಷಣ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: World Environment Day 2022: ಮರಳಲ್ಲಿ ವಿಶ್ವ ಪರಿಸರ ದಿನದ ಸಂದೇಶ ಸಾರಿದ ಕಲಾವಿದ
ಕೊಲಂಬಿಯಾ ವಿಶ್ವವಿದ್ಯಾಲಯದ ಪರಿಸರ ಕಾನೂನು ಮತ್ತು ನೀತಿ ಅಧ್ಯಯನ ಕೇಂದ್ರ ಮತ್ತು ಭೂವಿಜ್ಞಾನ ಮಾಹಿತಿ ಜಾಲ ಕೇಂದ್ರ ನಡೆಸಿದ ಅಧ್ಯಯನದ ಆಧಾರದಲ್ಲಿ ಈ ಸೂಚ್ಯಂಕ ನೀಡಲಾಗಿದೆ. ಒಟ್ಟು 180 ದೇಶಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಪ್ರತಿ ದೇಶಗಳ ಸುಸ್ಥಿರ ಅಭಿವೃದ್ಧಿ ಮಾದರಿ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆ ನಿಯಂತ್ರಣ ಕ್ರಮ ಪರಿಶೀಲಿಸಿ ಈ ಸೂಚ್ಯಂಕ ಸಿದ್ಧಪಡಿಸಲಾಗಿದೆ. ಒಟ್ಟು ಅಂಕಗಳಲ್ಲಿ 18.9 ಅಂಕಗಳನ್ನು ಪಡೆದ ಭಾರತವು 180ನೇ ಸ್ಥಾನದಲ್ಲಿದೆ. ‘ಭಾರತವು ಮಾಲಿನ್ಯ ನಿಯಂತ್ರಣಕ್ಕಿಂತ ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಹೀಗಾಗಿ, ಅತ್ಯಂತ ಕಡಿಮೆ ಅಂಕಗಳನ್ನು ಪಡೆದಿದೆ’ ಎಂದು ಸೂಚ್ಯಂಕ ವರದಿಯಲ್ಲಿ ವಿವರಿಸಲಾಗಿದೆ.
20.1 ಅಂಕ ಪಡೆದಿರುವ ವಿಯೆಟ್ನಾಂ, 23.1 ಅಂಕ ಪಡೆದಿರುವ ಬಾಂಗ್ಲಾದೇಶ 24.6 ಅಂಕ ಪಡೆದಿರುವ ಪಾಕಿಸ್ತಾನವು ಕ್ರಮವಾಗಿ 179, 178 ಮತ್ತು 177ನೇ ಸ್ಥಾನ ಪಡೆದಿತ್ತು. 28.4 ಅಂಕ ಪಡೆದಿರುವ ಚೀನಾ 161ನೇ ಸ್ಥಾನ, ರಷ್ಯಾ 112ನೇ ಸ್ಥಾನ, ಅಮೆರಿಕ 20ನೇ ಸ್ಥಾನದಲ್ಲಿತ್ತು. ಇತ್ತೀಚೆಗಷ್ಟೇ ಪ್ರಕಟಗೊಂಡಿದ್ದ ಪರಿಸರ ಕಾರ್ಯಕ್ಷಮತೆ ಸೂಚ್ಯಂಕ-2022 ಅನ್ನು ಭಾರತ ಸರ್ಕಾರ ತಿರಸ್ಕರಿಸಿದ್ದು, ಊಹೆಗಳು ಮತ್ತು ಅವೈಜ್ಞಾನಿಕ ವಿಧಾನಗಳನ್ನು ಆಧರಿಸಿ ವರದಿ ಪ್ರಕಟಗೊಂಡಿದೆ ಎಂದು ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:40 pm, Mon, 13 June 22