Aircraft Crash: ಉತ್ತರ ಪ್ರದೇಶದ ಅಮೇಥಿಯಲ್ಲಿ ತರಬೇತಿ ವಿಮಾನ ಪತನ; ಪೈಲಟ್ ಸೇಫ್
ಪೈಲಟ್ ಅಭಯ್ ಪಟೇಲ್ ಅವರು ಅಕಾಡೆಮಿಯಿಂದ ತರಬೇತಿಗಾಗಿ ಹೊರಟಿದ್ದರು. ಆದರೆ ಅಮೇಥಿ-ರಾಯ್ ಬರೇಲಿ ಗಡಿಯಲ್ಲಿರುವ ಮೊಹಮ್ಮದ್‌ಪುರ ಚುರೈ ಗ್ರಾಮದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಯಿತು.
ಅಮೇಥಿ: ಉತ್ತರ ಪ್ರದೇಶದ ಅಮೇಥಿಯಲ್ಲಿ ತರಬೇತಿ ವಿಮಾನವೊಂದು (Aircraft Crash) ಪತನವಾಗಿದ್ದು, ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು (ಜೂನ್ 13) ಲಘು ವಿಮಾನವು ತುರ್ತು ಭೂಸ್ಪರ್ಶವಾಗಿದ್ದು, ವಿಮಾನಕ್ಕೆ ಭಾರೀ ಹಾನಿಯುಂಟಾಗಿದೆ. ಆದರೆ, ಟ್ರೈನಿ ಪೈಲಟ್ (Trainee Pilot) ಸ್ವಲ್ಪದರಲ್ಲೇ ಸಾವಿನಿಂದ ಪಾರಾಗಿದ್ದಾರೆ. ತುರ್ತು ಭೂಸ್ಪರ್ಶದ ನಂತರ ತರಬೇತಿ ನಿರತ ಪೈಲಟ್ ಅಭಯ್ ಪಟೇಲ್ ಸುರಕ್ಷಿತವಾಗಿದ್ದಾರೆ ಎಂದು ಇಂದಿರಾಗಾಂಧಿ ರಾಷ್ಟ್ರೀಯ ಉರಾನ್ ಅಕಾಡೆಮಿಯ (IGRUA) ಮಾಧ್ಯಮ ಉಸ್ತುವಾರಿ ಆರ್ ಕೆ ದ್ವಿವೇದಿ ತಿಳಿಸಿದ್ದಾರೆ.
ತರಬೇತಿಯಲ್ಲಿದ್ದ ಪೈಲಟ್ ಅಭಯ್ ಪಟೇಲ್ ಅವರು ಅಕಾಡೆಮಿಯಿಂದ ತರಬೇತಿಗಾಗಿ ಹೊರಟಿದ್ದರು. ಆದರೆ ಅಮೇಥಿ-ರಾಯ್ ಬರೇಲಿ ಗಡಿಯಲ್ಲಿರುವ ಮೊಹಮ್ಮದ್‌ಪುರ ಚುರೈ ಗ್ರಾಮದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಲ್ಯಾಂಡಿಂಗ್ ಸಮಯದಲ್ಲಿ, ವಿಮಾನದ ಮುಂಭಾಗದ ಭಾಗವು ಹಾನಿಗೊಳಗಾಯಿತು ಎಂದು ದ್ವಿವೇದಿ ಹೇಳಿದ್ದಾರೆ. ಅಭಯ್ ಪಟೇಲ್ ಅವರು 2021ರಲ್ಲಿ IGRUAನಲ್ಲಿ ದಾಖಲಾಗಿದ್ದರು. ಅವರು 27 ಗಂಟೆಗಳ ವಿಮಾನ ಹಾರಾಟ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲಿ ಪ್ರಯಾಣಿಸುವಾಗ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ತಿನ್ನಬೇಡಿ, ನೀವು ಅನಾರೋಗ್ಯಕ್ಕೆ ಒಳಗಾಗಬಹುದು
ವಿಮಾನ ಪತನವಾದ್ದರಿಂದ ಪೈಲಟ್ಗೆ ಸಣ್ಣಪುಟ್ಟ ಗಾಯಗಳಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಮಾನ ತುರ್ತು ಭೂಸ್ಪರ್ಶವಾದ ಕೂಡಲೆ ಐವರು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಪೈಲಟ್ ಅನ್ನು ಹೊರಗೆಳೆದು ರಕ್ಷಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Mon, 13 June 22