ದೆಹಲಿ: ರಾಜ್ಯಗಳ ಬಳಿ 1.89 ಕೋಟಿಗೂ ಅಧಿಕ ಡೋಸ್ ಕೊವಿಡ್-19 ಲಸಿಕೆ ರಾಜ್ಯಗಳ ಬಳಿಯಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಗುರುವಾರ ತಿಳಿಸಿದೆ. ಕೊವಿಡ್ ಲಸಿಕಾ ಕಾರ್ಯಾಕ್ರಮದ ಹೊಸ ನಿಯಮಾವಳಿಗಳು ಜೂನ್ 21ರಿಂದ ಅನುಷ್ಠಾನಕ್ಕೆ ಬಂದಿವೆ. ಹೊಸ ನಿಯಮಗಳು ಅನುಷ್ಠಾನಕ್ಕೆ ಬಂದ ಮೊದಲ 72 ಗಂಟೆಗಳಲ್ಲಿ ಸುಮಾರು 2 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು 30 ಕೋಟಿ ಡೋಸ್ ಲಸಿಕೆಗಳನ್ನು ವಿತರಿಸಿದೆ. ಈ ಪೈಕಿ 28,43,40,936 ಡೋಸ್ಗಳನ್ನು ಜನರಿಗೆ ನೀಡಲಾಗಿದೆ. 1.89 ಕೋಟಿಗೂ ಹೆಚ್ಚು (1,89,86,504) ಡೋಸ್ ಲಸಿಕೆಗಳು ರಾಜ್ಯಗಳ ಬಳಿ ಲಭ್ಯವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈಗಾಗಲೇ ವಿವಿಧ ಲಸಿಕಾ ತಯಾರಿಕೆ ಕಂಪನಿಗಳಿಗೆ ಕೇಂದ್ರ ಸರ್ಕಾರ ಬೇಡಿಕೆ ಸಲ್ಲಿಸಿರುವ 21,05,010 (21 ಲಕ್ಷ) ಲಸಿಕೆಗಳು ಇನ್ನು ಮೂರು ದಿನಗಳ ಒಳಗೆ ಕೇಂದ್ರ ಸರ್ಕಾರದ ಸುಪರ್ದಿಗೆ ಸಿಗಲಿದೆ. ದೇಶಾದ್ಯಂತ ಕೊವಿಡ್-19 ಲಸಿಕಾ ಅಭಿಯಾನಕ್ಕೆ ಹೊಸ ವೇಗ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಹೆಚ್ಚಿನ ಸಂಖ್ಯೆಯ ಲಸಿಕೆಗಳನ್ನು ರಾಜ್ಯಗಳಿಗೆ ಒದಗಿಸುವ ಮೂಲಕ, ಮುಂಚಿತವಾಗಿ ಇಂತಿಷ್ಟು ಲಸಿಕೆಗಳು ಸಿಗುತ್ತವೆ ಎಂಬ ಮಾಹಿತಿ ನೀಡುವ ಮೂಲಕ ಲಸಿಕಾ ಅಭಿಯಾನವನ್ನು ಇನ್ನಷ್ಟು ವ್ಯವಸ್ಥಿತವಾಗಿ ನಡೆಸಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ ನರವಾಗುತ್ತಿದೆ. ಜೂನ್ 21ರ ನಂತರ ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆಗಳನ್ನು ಉಚಿತವಾಗಿ ಒದಗಿಸುತ್ತದೆ. ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಒಟ್ಟು ಲಸಿಕೆಗಳ ಪೈಕಿ ಶೇ 75ರಷ್ಟು ಪ್ರಮಾಣವನ್ನು ಕೇಂದ್ರ ಸರ್ಕಾರವೇ ಖರೀದಿಸಿ, ರಾಜ್ಯಗಳಿಗೆ ನೀಡುತ್ತಿದೆ.
(Indian Government Says Over 1.89 Crore Unutilised Covid Vaccine Doses Available With Various States)
ಇದನ್ನೂ ಓದಿ: ಡೆಲ್ಟಾ ಪ್ಲಸ್ ವೈರಸ್ ವಿರುದ್ಧ ಕೊವಿಶೀಲ್ಡ್ ಲಸಿಕೆ ಹೆಚ್ಚು ಪರಿಣಾಮಕಾರಿಯಲ್ಲ: ಲ್ಯಾನ್ಸೆಟ್ ವರದಿ
ಇದನ್ನೂ ಓದಿ: Delta Plus Variant ಕೊರೊನಾ ಲಸಿಕೆಗಿದೆಯಂತೆ ಡೆಲ್ಟಾ ಪ್ಲಸ್ ಓಡಿಸುವ ಶಕ್ತಿ.. ಲಸಿಕೆ ಪಡೆದ್ರೆ ಸೋಂಕಿನಿಂದ ಮುಕ್ತ
Published On - 10:47 pm, Thu, 24 June 21