AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನಿಟ್ರ್ಯಾಪ್, ಸೈಬರ್ ಅಟ್ಯಾಕ್ ಇತ್ಯಾದಿ ಸ್ಕ್ಯಾಮ್​ಗಳಿಂದ ರಕ್ಷಣೆ: ಭಾರತದ ಮಿಲಿಟರಿಯಲ್ಲಿದೆ ಕಟ್ಟುನಿಟ್ಟಿನ ಸುರಕ್ಷಾ ವ್ಯವಸ್ಥೆ

ಭಾರತದ ಸೇನಾ ಪಡೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳನ್ನು ಬಲೆಗೆ ಹಾಕಿಕೊಳ್ಳಲು ಹನಿಟ್ರ್ಯಾಪ್ ಇತ್ಯಾದಿ ಹಲವು ವಿಧಾನಗಳನ್ನು ಶತ್ರುಗಳು ಅನುಸರಿಸುತ್ತಾರೆ. ಸೈಬರ್ ದಾಳಿಯಿಂದ ಭಾರತದ ಮಿಲಿಟರಿ ಇನ್​ಫ್ರಾಸ್ಟ್ರಕ್ಚರ್ ಸುರಕ್ಷಿತವಾಗಿದೆ. ಆದರೆ, ಶತ್ರುಗಳು ಮಿಲಿಟರಿ ಕ್ಷೇತ್ರದಲ್ಲಿ ವ್ಯಕ್ತಿಗಳನ್ನು ಗುರಿ ಮಾಡುತ್ತಾರೆ. ಇದನ್ನು ನಿಯಂತ್ರಿಸುವ ವ್ಯವಸ್ಥೆಯೂ ನಮ್ಮಲ್ಲಿದೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಹೇಳುತ್ತಾರೆ.

ಹನಿಟ್ರ್ಯಾಪ್, ಸೈಬರ್ ಅಟ್ಯಾಕ್ ಇತ್ಯಾದಿ ಸ್ಕ್ಯಾಮ್​ಗಳಿಂದ ರಕ್ಷಣೆ: ಭಾರತದ ಮಿಲಿಟರಿಯಲ್ಲಿದೆ ಕಟ್ಟುನಿಟ್ಟಿನ ಸುರಕ್ಷಾ ವ್ಯವಸ್ಥೆ
ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆಶುತೋಷ್ ದೀಕ್ಷಿತ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 16, 2026 | 3:30 PM

Share

ನವದೆಹಲಿ, ನವೆಂಬರ್ 16: ಎನ್​ವಿಡಿಯಾದ ಸಂಸ್ಥಾಪಕ ಜೆನ್ಸೆನ್ ಹುವಾಂಗ್ ಅವರು ಶಂಕಿತ ಚೀನೀ ಗೂಢಚಾರಿಣಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪ್ರಕರಣ ಜಾಗತಿಕವಾಗಿ ಎಲ್ಲರನ್ನೂ ತಲ್ಲಣಗೊಳಿಸಿದೆ. ಇದರ ಮಧ್ಯೆ ಸರ್ಕಾರಗಳ ರಹಸ್ಯ ಮಾಹಿತಿ ಕದಿಯುವ ಸ್ಪೈ ಜಾಲಗಳ ಕುರಿತು ಊಹಾಪೋಹಗಳು ಹೆಚ್ಚುತ್ತಿವೆ. ಭಾರತದ ವಾಯುಸೇನೆಯ ಅಧಿಕಾರಿಯೊಬ್ಬರು ಒಬ್ಬ ಮಹಿಳೆಯ ಅಶ್ಲೀಲ ಚಿತ್ರಕ್ಕಾಗಿ ಪಾಕಿಸ್ತಾನದ ಗೂಢಚಾರಿಣಿಗೆ ರಹಸ್ಯ ಮಿಲಿಟರಿ ದಾಖಲೆಗಳನ್ನು ಕೊಟ್ಟ ಪ್ರಕರಣ ಮೊನ್ನೆ ಬೆಳಕಿಗೆ ಬಂದಿದೆ.

ಆನ್​ಲೈನ್​ನಲ್ಲಿ ಹನಿಟ್ರ್ಯಾಪ್​ಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಭಾರತದ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಪ್ರಕಾರ, ಹನಿಟ್ರ್ಯಾಪ್ ಒಂದು ಸಣ್ಣ ಭಾಗ. ರಹಸ್ಯ ಮಾಹಿತಿ ಪಡೆಯಲು ಶತ್ರುಗಳು ಹಲವಾರು ಮಾರ್ಗಗಳನ್ನು ಶೋಧಿಸುತ್ತಾರಂತೆ.

ಹ್ಯಾಕ್ ಮಾಡಲು ಆಗಲ್ಲ, ಹನಿಟ್ರ್ಯಾಪ್ ಮಾಡ್ತಾರೆ…

ಎಎನ್​ಐ ನ್ಯಾಷನಲ್ ಸೆಕ್ಯೂರಿಟಿ ಸಮಿಟ್ 3.0 ಸಮಾವೇಶದಲ್ಲಿ ಮಾತನಾಡುತ್ತಿದ್ದ ಏರ್ ಚೀಫ್ ಮಾರ್ಷಲ್ ಆಶುತೋಷ್ ದೀಕ್ಷಿತ್, ‘ನಮ್ಮ ಮಿಲಿಟರಿ ಕಮ್ಯೂನಿಕೇಶನ್ ನೆಟ್ವರ್ಕ್​ ಸಾರ್ವಜನಿಕ ಇಂಟರ್ನೆಟ್ ವ್ಯವಸ್ಥೆಗೆ ಜೋಡಿತಗೊಂಡಿಲ್ಲ. ಅಲ್ಲಿ ಸೈಬರ್ ದಾಳಿ ಮಾಡಿ ಭೇದಿಸಲು ಆಗುವುದಿಲ್ಲ. ಹೀಗಾಗಿ, ವಿದೇಶೀ ಗುಪ್ತಚಾರರು ಹಾರ್ಡ್​ವೇರ್ ಬದಲು ವ್ಯಕ್ತಿಗಳನ್ನು ಗುರಿ ಮಾಡುತ್ತಾರೆ. ಇದಕ್ಕಾಗಿ ಕೆಲ ತಾಂತ್ರಿಕ ಪರಿಹಾರಗಳು ಮತ್ತು ಸಾಂಸ್ಥಿಕ ಪರಿಹಾರಗಳ ವ್ಯವಸ್ಥೆ ನಮ್ಮಲ್ಲಿದೆ’ ಎಂದು ವಾಯುಪಡೆ ಮುಖ್ಯಸ್ಥರು ಹೇಳಿದ್ದಾರೆ.

ಇದನ್ನೂ ಓದಿ: ಜಾಗತಿಕ ಎಐ ಪೂರೈಕೆ ಸರಪಳಿ ವ್ಯವಸ್ಥೆಗೆ ಮೈತ್ರಿ; ಅಮೆರಿಕ ನೇತೃತ್ವದ ಗುಂಪಿಗೆ ಭಾರತ ಸೇರ್ಪಡೆ

ಭಾರತೀಯ ಸೇನೆಗೆ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಖಾಸಗಿ ಡಿಫೆನ್ಸ್ ಸೆಕ್ಟರ್​ನಲ್ಲಿ ಕೆಲಸ ಮಾಡುವವರನ್ನು ಗೂಢಚಾರರ ಜಾಲ ಗುರಿ ಮಾಡುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ, ಪ್ರೈವೇಟ್ ಸೆಕ್ಟರ್ ಜನರಿಗೆ ನೆಟ್ವರ್ಕ್ ಹೇಗೆ ಬಳಸಬೇಕು ಎಂದು ತಿಳಿಸಲಾಗುತ್ತದೆ. ಅದನ್ನು ಸರಿಯಾಗಿ ಪಾಲಿಸಿದರೆ ಪ್ರಮುಖ ಮಾಹಿತಿ ಸುರಕ್ಷಿತವಾಗಿರುತ್ತದೆ ಎಂದು ದೀಕ್ಷಿತ್ ವಿವರಿಸಿದ್ದಾರೆ.

ಮಲ್ಟಿಲೆವೆಲ್ ಮಾರ್ಕೆಟಿಂಗ್, ಲೋನ್ ಜಾಲಗಳು…

ಸರ್ಕಾರಿ ಮತ್ತು ಖಾಸಗಿ ಡಿಫೆನ್ಸ್ ಸೆಕ್ಟರ್​ನ ಆಯಕಟ್ಟಿನ ಸ್ಥಳದಲ್ಲಿರುವ ವ್ಯಕ್ತಿಗಳನ್ನು ಗುರಿ ಮಾಡುವ ಗುಪ್ತಚರ ಜಾಲದಲ್ಲಿ ಹನಿಟ್ರ್ಯಾಪ್ ಒಂದು ಸಣ್ಣ ಭಾಗ ಮಾತ್ರ. ಈಗೀಗ ರಹಸ್ಯ ಮಾಹಿತಿಯನ್ನು ಪಡೆಯಲು ಸೈಬರ್, ಹನಿಟ್ರ್ಯಾಪ್ ಮತ್ತಿತರ ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ ಎಂದು ಏರ್ ಚೀಫ್ ಮಾರ್ಷಲ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.

ಆಶುತೋಷ್ ದೀಕ್ಷಿತ್ ಮಾತನಾಡಿರುವ ವಿಡಿಯೋ

ಅವರ ಪ್ರಕಾರ, ಮಿಲಿಟರಿ ಕ್ಷೇತ್ರದ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಲು ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ಸೋಗಿನಲ್ಲಿ ಸಂಪರ್ಕಿಸಬಹುದು, ಸಾಲ ನೀಡಿ ಬಲೆಗೆ ಬೀಳಿಸಬಹುದು. ‘ಈ ಎಲ್ಲದರ ಬಗ್ಗೆ ನಮಗೆ ಗೊತ್ತಿದೆ. ಸೂಕ್ಷ್ಮವಾಗಿ ಗಮನಿಸುತ್ತಿರುತ್ತೇವೆ. ಹಾಗೆಯೇ, ಇದನ್ನು ನಿಯಂತ್ರಿಸುವ ವ್ಯವಸ್ಥೆಯೂ ಇದೆ’ ಎಂದು ವಾಯುಪಡೆ ಮುಖ್ಯಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ, ಲಷ್ಕರ್ ಕಮಾಂಡರ್ ಲತೀಫ್ ಭಟ್ ಸೇರಿ ಇಬ್ಬರು ಉಗ್ರರ ಹತ್ಯೆ

ಖಾಸಗಿ ಜೀವನದ ಕಷ್ಟ ಮತ್ತು ಹನಿಟ್ರ್ಯಾಪ್

ವಿದೇಶೀ ಗುಪ್ತಚಾರ ಜಾಲಗಳು ಭಾರತೀಯ ಮಿಲಿಟರಿ ವ್ಯಕ್ತಿಗಳನ್ನು ಗುರಿ ಮಾಡಿರುವ ಹಲವು ಪ್ರಕರಣಗಳು ವರದಿಯಾಗಿವೆ. ದಿಲ್ಲಿಯಲ್ಲಿ ಸಹೋದ್ಯೋಗಿಯ ಮೊಬೈಲ್ ಫೋನ್​ನಿಂದ ದತ್ತಾಂಶ ಕದಿಯಬಲ್ಲ ಮಾಲ್​ವೇರ್ ಅನ್ನು ಫೋನ್​ನಲ್ಲಿ ಇನ್​ಸ್ಟಾಲ್ ಮಾಡಲು ಯತ್ನಿಸುತ್ತಿದ್ದ ಒಬ್ಬ ಸೇನಾಧಿಕಾರಿಯನ್ನು ಬಂಧಿಸಲಾಗಿತ್ತು. ಖಾಸಗಿ ಜೀವನದಲ್ಲಿ ನೊಂದಿದ್ದ ಈತ ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬಳ ಬಲೆಗೆ ಬಿದ್ದು ಈ ಕೆಲಸ ಮಾಡಿದ್ದ. ಇಂಥ ಆನ್​ಲೈನ್ ಹನಿಟ್ರ್ಯಾಪ್ ಪ್ರಕರಣಗಳು ಹಲವು ಬೆಳಕಿಗೆ ಬಂದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರೇಷನ್ ಕಾರ್ಡ್‌ಗಾಗಿ 40 ವರ್ಷಗಳಿಂದ ಒಂಟಿ ವೃದ್ಧೆಯ ಪರದಾಟ
ರೇಷನ್ ಕಾರ್ಡ್‌ಗಾಗಿ 40 ವರ್ಷಗಳಿಂದ ಒಂಟಿ ವೃದ್ಧೆಯ ಪರದಾಟ
‘ನಾನು ಕನ್ನಡ ನಟರ ಬಗ್ಗೆ ತಪ್ಪಾಗಿ ಮಾತನಾಡಿಲ್ಲ’; ಶ್ರೀರಾಮ್ ಸ್ಪಷ್ಟನೆ
‘ನಾನು ಕನ್ನಡ ನಟರ ಬಗ್ಗೆ ತಪ್ಪಾಗಿ ಮಾತನಾಡಿಲ್ಲ’; ಶ್ರೀರಾಮ್ ಸ್ಪಷ್ಟನೆ
ಸಾರಿಗೆ ನೌಕರರಿಗೆ ಗುಡ್ ನ್ಯೂಸ್: 280 ಕೋಟಿ ರೂ. ವೇತನ ಹಿಂಬಾಕಿ ಬಿಡುಗಡೆ
ಸಾರಿಗೆ ನೌಕರರಿಗೆ ಗುಡ್ ನ್ಯೂಸ್: 280 ಕೋಟಿ ರೂ. ವೇತನ ಹಿಂಬಾಕಿ ಬಿಡುಗಡೆ
ಹೊಸ ಗಂಗಾ ಮನೆಯ ಬಗ್ಗೆ ಮುಕ್ತವಾಗಿ ಹಂಚಿಕೊಂಡ ಸಿಎಂ ಡಿಕೆ ಶಿವಕುಮಾರ್‌
ಹೊಸ ಗಂಗಾ ಮನೆಯ ಬಗ್ಗೆ ಮುಕ್ತವಾಗಿ ಹಂಚಿಕೊಂಡ ಸಿಎಂ ಡಿಕೆ ಶಿವಕುಮಾರ್‌
ಇ-ಕೆವೈಸಿ ಹೆಸರಲ್ಲಿ ವಸೂಲಿಗಿಳಿದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ
ಇ-ಕೆವೈಸಿ ಹೆಸರಲ್ಲಿ ವಸೂಲಿಗಿಳಿದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ
ಜೆಡಿಎಸ್‌-ಬಿಜೆಪಿ ಮೈತ್ರಿ ಭಿನ್ನಾಭಿಪ್ರಾಯವಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ
ಜೆಡಿಎಸ್‌-ಬಿಜೆಪಿ ಮೈತ್ರಿ ಭಿನ್ನಾಭಿಪ್ರಾಯವಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ
'ನಿಖಿಲ್​​ಗೆ ದೇಗುಲ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ?': ಪ್ರಿಯಾಂಕ್​​
'ನಿಖಿಲ್​​ಗೆ ದೇಗುಲ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ?': ಪ್ರಿಯಾಂಕ್​​
'ಸಿಎಂ ಸೇರಿ ತನ್ನ ಫೋನ್​​ ಕೂಡ ಕದ್ದಾಲಿಕೆ ಆಗುತ್ತವೆ': ಪ್ರಿಯಾಂಕ್​​ ಖರ್ಗೆ
'ಸಿಎಂ ಸೇರಿ ತನ್ನ ಫೋನ್​​ ಕೂಡ ಕದ್ದಾಲಿಕೆ ಆಗುತ್ತವೆ': ಪ್ರಿಯಾಂಕ್​​ ಖರ್ಗೆ
ಮುಂದಿನ ಸಿನಿಮಾ ಬಗ್ಗೆ ಅಪ್​​ಡೇಟ್ ಕೊಟ್ಟ ರಮಿಕಾ ಶಿವು
ಮುಂದಿನ ಸಿನಿಮಾ ಬಗ್ಗೆ ಅಪ್​​ಡೇಟ್ ಕೊಟ್ಟ ರಮಿಕಾ ಶಿವು
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟ