Sign In

By signing in or creating an account, you agree with Associated Broadcasting Company's Terms & Conditions and Privacy Policy.

IRCTC: ರೈಲ್ವೇ ಪ್ರಯಾಣಿಕರಿಗೆ ಗುಡ್​ ನ್ಯೂಸ್; ಟಿಕೆಟ್ ಬುಕ್ ಮಾಡಲು ಹೊಸ ಆಯ್ಕೆ ಪರಿಚಯಿಸಿದ ರೈಲ್ವೇ ಇಲಾಖೆ

ರೈಲು ಹೊರಡುವ ಐದು ನಿಮಿಷಗಳ ಮೊದಲು ಟಿಕೆಟ್ ಬುಕ್ ಮಾಡುವ ಹೊಸ ಆಯ್ಕೆಯನ್ನು ರೈಲ್ವೇ ಇಲಾಖೆ ಪರಿಚಯಿಸಿದೆ. ಈ ಆಯ್ಕೆಯ ಮೂಲಕ ರೈಲಿನಲ್ಲಿ ಟಿಕೆಟ್ ಖಾಲಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನೀವು ತಿಳಿದುಕೊಳ್ಳಬಹುದು.

IRCTC: ರೈಲ್ವೇ ಪ್ರಯಾಣಿಕರಿಗೆ ಗುಡ್​ ನ್ಯೂಸ್; ಟಿಕೆಟ್ ಬುಕ್ ಮಾಡಲು ಹೊಸ ಆಯ್ಕೆ ಪರಿಚಯಿಸಿದ ರೈಲ್ವೇ ಇಲಾಖೆ
ರೈಲಿನ ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Aug 08, 2022 | 6:26 PM

ಇತ್ತೀಚಿನ ದಿನಗಳಲ್ಲಿ ರೈಲು ಟಿಕೆಟ್‌ ಬುಕ್ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ, ಕೆಲವು ದಿನಗಳ ಮುಂಚಿತವಾಗಿಯೇ ಬುಕ್ ಮಾಡಬೇಕು, ಕೆಲವೊಂದು ರೈಲುಗಳಲ್ಲಿ ತಿಂಗಳ ಮುಂಚೆಯೇ ಬುಕ್ ಮಾಡಬೇಕಾಗುತ್ತದೆ. ದೂರದ ಪ್ರಯಾಣ ಬೆಳೆಸುವವರಿಗೆ ಈ ತೊಂದರೆ ಹೆಚ್ಚಾಗಿರುತ್ತದೆ. ಅದಾಗ್ಯೂ ಕೆಲವೊಮ್ಮೆ ಟಿಕೆಟ್ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಬೇರೆ ದಾರಿ ಹುಡುಕಬೇಕು. ಹಾಗಾಗಿ ರೈಲು ಟಿಕೆಟ್ ಪಡೆಯುವುದು ಅಷ್ಟು ಸುಲಭವಲ್ಲ. ಪ್ರಯಾಣಿಕರ ಈ ಎಲ್ಲಾ ಕಷ್ಟಗಳನ್ನು ಗಮನಿಸಿದ ರೈಲ್ವೇ ಇಲಾಖೆ, ಹೊಸ ಆಯ್ಕೆ ಕಲ್ಪಿಸಿದ್ದಾರೆ. ಅದರಂತೆ ಪ್ರಯಾಣಿಕರು ಕ್ಷಣಗಳಲ್ಲೇ ಟಿಕೆಟ್ ಬುಕ್ ಮಾಡಬಹುದಾಗಿದೆ.

ಸಾಮಾನ್ಯವಾಗಿ ರೈಲು ಹೊರಡುವ ನಾಲ್ಕು ಗಂಟೆಗಳ ಮೊದಲು ಬುಕಿಂಗ್ ಕೌಂಟರ್‌ಗಳಲ್ಲಿ ಚಾರ್ಟ್ ಅನ್ನು ಸಿದ್ಧಪಡಿಸಲಾಗುತ್ತದೆ. ಆದಾಗ್ಯೂ ಈ ವಿಶೇಷ ಆಯ್ಕೆಯ ಮೂಲಕ ರೈಲಿನಲ್ಲಿ ಟಿಕೆಟ್‌ಗಳು ಖಾಲಿಯಾಗಿದ್ದರೆ ನೀವು ರೈಲು ಹೊರಡುವ ಐದು ನಿಮಿಷಗಳ ಮೊದಲು ಟಿಕೆಟ್ ಬುಕ್ ಮಾಡಬಹುದು. ರೈಲ್ವೆ ಟಿಕೆಟ್ ಅನ್ನು ಬುಕಿಂಗ್ ಕೌಂಟರ್‌ನಲ್ಲಿ ಅಥವಾ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಸಾಮಾನ್ಯವಾಗಿ ರೈಲ್ವೆ ಇಲಾಖೆಯು ಕಾಯ್ದಿರಿಸಿದ ಟಿಕೆಟ್‌ಗಳ ವಿವರಗಳನ್ನು ತೋರಿಸುವ ಎರಡು ರೀತಿಯ ಚಾರ್ಟ್‌ಗಳನ್ನು ಸಿದ್ಧಪಡಿಸುತ್ತದೆ. ಮೊದಲ ಚಾರ್ಟ್ ಅನ್ನು ರೈಲು ಹೊರಡುವ 4 ಗಂಟೆಗಳ ಮೊದಲು ಸಿದ್ಧಪಡಿಸಿದರೆ, ಎರಡನೇ ಚಾರ್ಟ್ ಅನ್ನು ನಿರ್ಗಮನದ ಅರ್ಧ ಗಂಟೆ ಮೊದಲು ಸಿದ್ಧಪಡಿಸಲಾಗುತ್ತದೆ. ಹಾಗಾಗಿ ರೈಲು ಹೊರಡುವ 5 ನಿಮಿಷ ಮುಂಚಿತವಾಗಿಯೂ ಟಿಕೆಟ್ ಕಾಯ್ದಿರಿಸಲು ಸಾಧ್ಯವಿದೆ.

ರೈಲಿನಲ್ಲಿ ಟಿಕೆಟ್ ಖಾಲಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನೀವು ತಿಳಿದುಕೊಳ್ಳಬಹುದು. ನೀವು https://www.irctc.co.in/online-charts/ ವೆಬ್‌ಸೈಟ್‌ಗೆ ಹೋಗಿ ರೈಲು ಸಂಖ್ಯೆ, ದಿನಾಂಕ, ಹತ್ತುವ ನಿಲ್ದಾಣದ ವಿವರಗಳನ್ನು ನೀಡಿದರೆ, ಪ್ರತಿ ಕೋಚ್‌ನಲ್ಲಿ ಎಷ್ಟು ಸೀಟುಗಳು ಲಭ್ಯವಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಇದನ್ನು ಪರಿಗಣಿಸಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಇದರ ಹೊರತಾಗಿ ಆನ್‌ಲೈನ್ ಚಾರ್ಟ್‌ನ ಮತ್ತೊಂದು ಪ್ರಯೋಜನವಿದೆ. ಪ್ರಯಾಣಿಕರು ಯಾವ ನಿಲ್ದಾಣದಲ್ಲಿ ರೈಲು ಹತ್ತುತ್ತಾರೆ ಮತ್ತು ಯಾವ ನಿಲ್ದಾಣದಿಂದ ರೈಲಿನಿಂದ ಇಳಿಯುತ್ತಾರೆ ಎಂಬ ವಿವರಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:26 pm, Mon, 8 August 22