ಬಾಂಗ್ಲಾದೇಶಕ್ಕೆ ಆಮ್ಲಜನಕ ಸರಬರಾಜು ಪೂರೈಕೆಗೆ ಭಾರತೀಯ ರೈಲ್ವೆ ನಿರ್ಧಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 25, 2021 | 4:16 PM

ಬಾಂಗ್ಲಾದೇಶಕ್ಕೆ 200 ಮೆಟ್ರಿಕ್​ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು (Liquid Medical Oxygen - LMO) ಮೊದಲ ಹಂತದಲ್ಲಿ ಸರಬರಾಜು ಮಾಡಲು ಸಿದ್ಧತೆಗಳು ಪೂರ್ಣಗೊಂಡಿವೆ.

ಬಾಂಗ್ಲಾದೇಶಕ್ಕೆ ಆಮ್ಲಜನಕ ಸರಬರಾಜು ಪೂರೈಕೆಗೆ ಭಾರತೀಯ ರೈಲ್ವೆ ನಿರ್ಧಾರ
ಆಕ್ಸಿಜನ್ ಕಂಟೇನರ್‌ಗಳು (ಸಂಗ್ರಹ ಚಿತ್ರ)
Follow us on

ದೆಹಲಿ: ಭಾರತೀಯ ರೈಲ್ವೆಯ ಆಕ್ಸಿಜನ್ ಎಕ್ಸ್​ಪ್ರೆಸ್​ ಸೇವೆಗಳು ಬಾಂಗ್ಲಾದೇಶಕ್ಕೂ ವಿಸ್ತರಣೆಯಾಗಲಿವೆ. ಬಾಂಗ್ಲಾದೇಶಕ್ಕೆ 200 ಮೆಟ್ರಿಕ್​ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು (Liquid Medical Oxygen – LMO) ಮೊದಲ ಹಂತದಲ್ಲಿ ಸರಬರಾಜು ಮಾಡಲು ಸಿದ್ಧತೆಗಳು ಪೂರ್ಣಗೊಂಡಿವೆ.

ಕಳೆದ ಜುಲೈ 24ರಂದು ಟಾಟಾ ಕಂಪನಿಗೆ ದಕ್ಷಿಣ ಪೂರ್ವ ರೈಲ್ವೆ ವಿಭಾಗದ ಚಕ್ರಧರಪುರ ವಿಭಾಗವು ಈ ಸಂಬಂಧ ಇಂಡೆಂಟ್​ ನೀಡಿದೆ. 200 ಮೆಟ್ರಿಕ್ ಟನ್ ಆಮ್ಲಜನಕವನ್ನು ಬಾಂಗ್ಲಾದೇಶದ ಬೆನಾಪೊಲ್​ಗೆ ರವಾನಿಸಬೇಕೆಂಬ ಬೇಡಿಕೆ ಬಂದಿದೆ.

ಕಳೆದ ಏಪ್ರಿಲ್ 24ರಿಂದ ಭಾರತೀಯ ರೈಲ್ವೆಯು ಆಕ್ಸಿಜನ್ ಎಕ್ಸ್​ಪ್ರೆಸ್​ ಸೇವೆಯನ್ನು ನಿರ್ವಹಿಸುತ್ತಿದೆ. ಈ ಮೂಲಕ ಆಕ್ಸಿಜನ್ ಸಿಲಿಂಡರ್​ಗಳನ್ನು ದೇಶದ ಉದ್ದಗಲಕ್ಕೂ ವಿವಿಧ ನಗರಗಳಿಗೆ ರೈಲ್ವೆ ಸರಬರಾಜು ಮಾಡಿತ್ತು. ಕೊರೊನಾ ವೈರಸ್​ ಸೋಂಕಿನ 2ನೇ ಅಲೆ ವ್ಯಾಪಕವಾಗಿದ್ದಾಗ ಹಲವು ರಾಜ್ಯಗಳಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆ ಕಂಡುಬಂದಿತ್ತು. 15 ರಾಜ್ಯಗಳಲ್ಲಿ 480 ಆಕ್ಸಿಜನ್ ಎಕ್ಸ್​ಪ್ರೆಸ್​ ರೈಲುಗಳ ಮೂಲಕ 35,000 ಮೆಟ್ರಿಕ್ ಟನ್ ಆಮ್ಲಜನಕ ಸರಬರಾಜು ಮಾಡಲಾಗಿತ್ತು.

(Indian Railways Oxygen Express To ship Medical Oxygen To Bangladesh)

ಇದನ್ನೂ ಓದಿ: 1,500 ಕ್ಕೂ ಹೆಚ್ಚು ಪಿಎಸ್​ಎ ಆಮ್ಲಜನಕ ಸ್ಥಾವರಗಳ ಸ್ಥಾಪನೆ; ಆಕ್ಸಿಜನ್ ಪೂರೈಕೆ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದ ಮೋದಿ

ಇದನ್ನೂ ಓದಿ: ಚಾಮರಾಜನಗರದ ಆಕ್ಸಿಜನ್ ಕೊರತೆಯಿಂದ ರೋಗಿಗಳ ಸಾವು ಪ್ರಕರಣ: ಮೃತಪಟ್ಟ 13 ಜನರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡಲು ಹೈಕೋರ್ಟ್ ಆದೇಶ