AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1,500 ಕ್ಕೂ ಹೆಚ್ಚು ಪಿಎಸ್​ಎ ಆಮ್ಲಜನಕ ಸ್ಥಾವರಗಳ ಸ್ಥಾಪನೆ; ಆಕ್ಸಿಜನ್ ಪೂರೈಕೆ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದ ಮೋದಿ

Narendra Modi: ಒಮ್ಮೆ ಪಿಎಂ ಕೇರ್ಸ್ ಮೂಲಕ ಬರುವ ಎಲ್ಲಾ ಪಿಎಸ್ಎ ಆಕ್ಸಿಜನ್ ಸ್ಥಾವರಗಳು ಸಕ್ರಿಯವಾದರೆ ಅವು ನಾಲ್ಕು ಲಕ್ಷಕ್ಕೂ ಹೆಚ್ಚು ಆಮ್ಲಜನಕಯುಕ್ತ ಹಾಸಿಗೆಗಳಿಗೆ ಬೆಂಬಲ ನೀಡಬಲ್ಲುದಾಗಿದೆ ಎಂದು ಅಧಿಕಾರಿಗಳು ಪ್ರಧಾನಮಂತ್ರಿಗೆ ತಿಳಿಸಿರುವುದಾಗಿ ಪ್ರಕಟಣೆ ತಿಳಿಸಿದೆ.

1,500 ಕ್ಕೂ ಹೆಚ್ಚು ಪಿಎಸ್​ಎ ಆಮ್ಲಜನಕ ಸ್ಥಾವರಗಳ ಸ್ಥಾಪನೆ; ಆಕ್ಸಿಜನ್ ಪೂರೈಕೆ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 09, 2021 | 2:53 PM

ದೆಹಲಿ: ನಾಲ್ಕು ಲಕ್ಷಕ್ಕೂ ಹೆಚ್ಚು ಆಸ್ಪತ್ರೆ ಹಾಸಿಗೆಗಳಿಗೆ ಆಮ್ಲಜನಕ ಒದಗಿಸಲು ಭಾರತದಾದ್ಯಂತ 1,500 ಕ್ಕೂ ಹೆಚ್ಚು ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುವುದರ  ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಆಮ್ಲಜನಕ ಲಭ್ಯತೆ ಬಗ್ಗೆ ಪರಿಶೀಲನಾ ಸಭೆ ನಡೆಸಿದ್ದಾರೆ. ಪಿಎಂ ಕೇರ್ಸ್ ಹೊರತುಪಡಿಸಿ ಸಚಿವಾಲಯಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಂತಹ ವಿವಿಧ ಮೂಲಗಳ ಕೊಡುಗೆಯೊಂದಿಗೆ ಎಲ್ಲಾ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಸೌಲಭ್ಯಗಳು ಬರಲಿವೆ. ಪ್ರೆಶರ್ ಸ್ವಿಂಗ್ ಆಬ್ಸಾರ್ಪ್ಶನ್ (ಪಿಎಸ್ಎ) ಆಕ್ಸಿಜನ್ ಘಟಕಗಳ ಪ್ರಗತಿಯ ಬಗ್ಗೆ ಅಧಿಕಾರಿಗಳು ಪ್ರಧಾನಿ ಮೋದಿಗೆ ಮಾಹಿತಿ ನೀಡಿದರು ಎಂದು ಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ.

“ಒಮ್ಮೆ ಪಿಎಂ ಕೇರ್ಸ್ ಮೂಲಕ ಬರುವ ಎಲ್ಲಾ ಪಿಎಸ್ಎ ಆಕ್ಸಿಜನ್ ಸ್ಥಾವರಗಳು ಸಕ್ರಿಯವಾದರೆ ಅವು ನಾಲ್ಕು ಲಕ್ಷಕ್ಕೂ ಹೆಚ್ಚು ಆಮ್ಲಜನಕಯುಕ್ತ ಹಾಸಿಗೆಗಳಿಗೆ ಬೆಂಬಲ ನೀಡಬಲ್ಲುದಾಗಿದೆ ಎಂದು ಅಧಿಕಾರಿಗಳು ಪ್ರಧಾನಮಂತ್ರಿಗೆ ತಿಳಿಸಿರುವುದಾಗಿ ಪ್ರಕಟಣೆ ತಿಳಿಸಿದೆ.

ಈ ಆಕ್ಸಿಜನ್ ಘಟಕಗಳನ್ನು ಶೀಘ್ರವಾಗಿ ಕ್ರಿಯಾತ್ಮಕ ಮಾಡಲಾಗುವುದೇ ಎಂದು ಖಚಿತಪಡಿಸಿಕೊಳ್ಳಲು ಮತ್ತು ಅದಕ್ಕಾಗಿ ರಾಜ್ಯ ಸರ್ಕಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಂತೆ ಪ್ರಧಾನಿಅಧಿಕಾರಿಗಳಿಗೆ ಸೂಚಿಸಿದರು. ಆಮ್ಲಜನಕವು ಒಂದು ಪ್ರಮುಖ ಸಂಪನ್ಮೂಲವಾಗಿದ್ದು, ಈ ವರ್ಷದ ಆರಂಭದಿಲ್ಲಿ ಎರಡನೇ ಕೊವಿಡ್ ಅಲೆ ಅಪ್ಪಳಿಸಿದಾಗ ವೈದ್ಯಕೀಯ ಆಮ್ಲಜನಕದ ಕೊರತೆ ತೀವ್ರವಾಗಿದ್ದು ವೈದ್ಯಕೀಯ ಮೂಲಸೌಕರ್ಯಗಳ ಮೇಲೆ ಬಾರೀ ಪರಿಣಾಮ ಬೀರಿತ್ತು. ಬಿಕ್ಕಟ್ಟಿನ ಉತ್ತುಂಗದಲ್ಲಿ ಭಾರತ ಹಲವಾರು ದೇಶಗಳಿಂದ ನೆರವು ರೂಪದಲ್ಲಿ ಆಮ್ಲಜನಕವನ್ನು ಪಡೆಯಬೇಕಾಯಿತು.

ಆಮ್ಲಜನಕ ಸ್ಥಾವರಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಮರ್ಪಕ ತರಬೇತಿ ನೀಡುವಂತೆ ಪ್ರಧಾನಿ ಇಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ತರಬೇತಿ ಪಡೆದ ಸಿಬ್ಬಂದಿಗಳು ಲಭ್ಯವಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಪಿಎಂಒ ಪ್ರಕಟಣೆ ತಿಳಿಸಿದೆ.

ತಜ್ಞರು ಸಿದ್ಧಪಡಿಸಿದ ತರಬೇತಿ ಮಾಡ್ಯೂಲ್ ಇದೆ ಎಂದು ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿದರು ಮತ್ತು ಅವರು ದೇಶಾದ್ಯಂತ ಸುಮಾರು 8000 ಜನರಿಗೆ ತರಬೇತಿ ನೀಡುವ ಗುರಿ ಹೊಂದಿದ್ದಾರೆ. ಸ್ಥಳೀಯ ಮತ್ತು ರಾಷ್ಟ್ರಮಟ್ಟದಲ್ಲಿ ಅಂಥಾ ಘಟಕಗಳಿ ಕಾರ್ಯನಿರ್ವಹಣೆಯನ್ನು ಪತ್ತೆಹಚ್ಚಲು ಇಂಟರ್ನೆಟ್ ಆಫ್ ಥಿಂಗ್ಸ್‌ನಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸುವುದನ್ನು ಮೋದಿ ಪ್ರತಿಪಾದಿಸಿದರು.

ಇದನ್ನೂ ಓದಿ:  ಉತ್ತರ ಪ್ರದೇಶದ ಮಾಜಿ ಸಿಎಂ, ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ; ಶೀಘ್ರ ಗುಣಮುಖರಾಗಲು ಮೋದಿ ಪ್ರಾರ್ಥನೆ

(PM Narendra Modi today reviewed the progress of augmentation and availability of Oxygen)

ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ