ಅಪಹರಣಕ್ಕೊಳಗಾಗಿದ್ದ ಹಡಗಿನಿಂದ ಪಾರಾದ ಭಾರತೀಯರಿಂದ ಭಾರತ್ ಮಾತಾ ಕೀ ಜೈ ಘೋಷಣೆ
ನೌಕಾಪಡೆಯಿಂದ ರಕ್ಷಿಸಲ್ಪಟ್ಟವರಲ್ಲಿ ಒಬ್ಬರು ನಾವು 24 ಗಂಟೆಗಳ ಕಾಲ ಸಿಲುಕಿಕೊಂಡಿದ್ದೆವು. ನೌಕಾಪಡೆ ನಮ್ಮನ್ನು ರಕ್ಷಿಸಿದ ನಂತರ ನಿರಾಳರಾದೆವು ಎಂದು ಹೇಳಿದ್ದಾರೆ. ಭಾರತೀಯ ನೌಕಾಪಡೆಯ ಬಗ್ಗೆ ಹೆಮ್ಮೆಯಿದೆ ಎಂದು ಅಪಹರಿಸಿದ ಹಡಗಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ.
ದೆಹಲಿ ಜನವರಿ 06: ಸೊಮಾಲಿಯಾ (Somalia) ಕರಾವಳಿಯ ಬಳಿ ಅಪಹರಣಕ್ಕೊಳಗಾದ (hijacked vessel) ಸರಕು ಹಡಗಿನಲ್ಲಿದ್ದ 15 ಭಾರತೀಯರು ಸೇರಿದಂತೆ ಎಲ್ಲಾ 21 ಸಿಬ್ಬಂದಿಯನ್ನು ಭಾರತೀಯ ನೌಕಾಪಡೆ (Indian Navy) ಶುಕ್ರವಾರ ರಕ್ಷಿಸಿದೆ. ಭಾರತೀಯ ನೌಕಾಪಡೆಯು ಹಂಚಿಕೊಂಡ ವಿಡಿಯೊದಲ್ಲಿ, ರಕ್ಷಿಸಲ್ಪಟ್ಟ ಭಾರತೀಯರು “ಭಾರತ್ ಮಾತಾ ಕೀ ಜೈ” ಎಂದು ಘೋಷಣೆ ಮಾಡಿದ್ದು, ಸುರಕ್ಷಿತವಾಗಿ ರಕ್ಷಿಸಿದ್ದಕ್ಕಾಗಿ ನೌಕಾಪಡೆಗೆ ಧನ್ಯವಾದ ಅರ್ಪಿಸಿದ್ದಾರೆ.
ನೌಕಾಪಡೆಯಿಂದ ರಕ್ಷಿಸಲ್ಪಟ್ಟವರಲ್ಲಿ ಒಬ್ಬರು ನಾವು 24 ಗಂಟೆಗಳ ಕಾಲ ಸಿಲುಕಿಕೊಂಡಿದ್ದೆವು. ನೌಕಾಪಡೆ ನಮ್ಮನ್ನು ರಕ್ಷಿಸಿದ ನಂತರ ನಿರಾಳರಾದೆವು ಎಂದು ಹೇಳಿದ್ದಾರೆ. ಭಾರತೀಯ ನೌಕಾಪಡೆಯ ಬಗ್ಗೆ ಹೆಮ್ಮೆಯಿದೆ ಎಂದು ಅಪಹರಿಸಿದ ಹಡಗಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ.
#WATCH | First visuals of the rescued Indians, who were a part of the crew, onboard the hijacked vessel MV Lili Norfolk. The jubilant members of the crew chant “Bharat Mata ki Jai” and thank the Indian Navy.
All 21 crew, including 15 Indians, were safely evacuated by the Indian… pic.twitter.com/uoL96VIrEw
— ANI (@ANI) January 6, 2024
ನೌಕಾಪಡೆಗೆ ಗುರುವಾರ ಸಂಜೆ 15 ಭಾರತೀಯರು ಸೇರಿದಂತೆ 21 ಸಿಬ್ಬಂದಿಗಳೊಂದಿಗೆ ಸರಕು ಹಡಗನ್ನು ಹೈಜಾಕ್ ಮಾಡುವ ಕರೆ ಬಂದಿದ್ದು, ತಕ್ಷಣವೇ ಹಡಗನ್ನು ರಕ್ಷಿಸುವುದಕ್ಕಾಗಿ ನೌಕಾಪಡೆ ಯುದ್ಧನೌಕೆ, ಕಡಲ ಗಸ್ತು ವಿಮಾನ, ಹೆಲಿಕಾಪ್ಟರ್‌ಗಳು ಮತ್ತು ಪ್ರಿಡೇಟರ್ MQ9B ಡ್ರೋನ್‌ಗಳನ್ನು ನಿಯೋಜಿಸಿದೆ.
ಇದನ್ನೂ ಓದಿ: ಅಪಹರಣಕ್ಕೊಳಗಾದ ಎಂವಿ ಲೀಲಾ ನಾರ್ಫೋಕ್ ಹಡಗನ್ನು ಭಾರತೀಯ ನೌಕಾಪಡೆ ರಕ್ಷಿಸಿದ್ದು ಹೀಗೆ
ಹಡಗಿನಲ್ಲಿನ ಕಾರ್ಯಾಚರಣೆ ನಂತರ ಮರೀನ್ ಕಮಾಂಡೋಗಳು ಹಡಗಿನಲ್ಲಿ ಅಪಹರಣಕಾರರು ಇಲ್ಲ ಎಂದು ಖಚಿಕಪಡಿಸಿದೆ. ಎಂವಿ ಲೀಲಾ ನಾರ್ಫೋಕ್‌ನ ಎಲ್ಲಾ 21 ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಸುರಕ್ಷಿತವಾಗಿದ್ದಾರೆ. ಭಾರತೀಯ ನೌಕಾ ಪಡೆಗಳು ಈ ಪ್ರದೇಶದಲ್ಲಿ ಶಂಕಿತ ಹಡಗುಗಳ ಬಗ್ಗೆ ತನಿಖೆ ನಡೆಸುತ್ತಿವೆ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸ್ತುತ ಎಂವಿಯ ಸಿಬ್ಬಂದಿ ಪ್ರೊಪಲ್ಷನ್, ವಿದ್ಯುತ್ ಸರಬರಾಜು ಮತ್ತು ಸ್ಟೀರಿಂಗ್ ಗೇರ್ ಅನ್ನು ಮರುಸ್ಥಾಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ನಂತರ, ಭಾರತೀಯ ನೌಕಾ ಯುದ್ಧನೌಕೆಯ ಬೆಂಗಾವಲು ಅಡಿಯಲ್ಲಿ ಹಡಗು ತನ್ನ ಗಮ್ಯಸ್ಥಾನಕ್ಕೆ ಹೊರಡಲಿದೆ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ