ಪಶ್ಚಿಮ ಬಂಗಾಳ ಪಡಿತರ ವಿತರಣೆ ಹಗರಣ: ಟಿಎಂಸಿಯ ಶಹಜಹಾನ್ ಶೇಖ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ
ಮೂಲಗಳ ಪ್ರಕಾರ ಟಿಎಂಸಿ ನಾಯಕ ಶಹಜಹಾನ್ ಶೇಖ್ ಭಾರತ-ಬಾಂಗ್ಲಾದೇಶ ಗಡಿಯ ಮೂಲಕ ಶುಕ್ರವಾರ ಬಾಂಗ್ಲಾದೇಶವನ್ನು ಪ್ರವೇಶಿಸಲು ಪ್ರಯತ್ನಿಸಿದ್ದರು. ಆದರೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಬಾಂಗ್ಲಾದೇಶ ರೈಫಲ್ಸ್ (ಬಿಡಿಆರ್) ಸಿಬ್ಬಂದಿ ಭಾನುವಾರ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗೆ ಮುನ್ನ ಕಟ್ಟುನಿಟ್ಟಾದ ಜಾಗರೂಕತೆಯನ್ನು ಕಾಯ್ದುಕೊಳ್ಳುತ್ತಿರುವ ಕಾರಣ ವಿಫಲರಾದರು
ಕೋಲ್ಕತ್ತಾ ಜನವರಿ 06: ಪಡಿತರ ವಿತರಣೆ ಹಗರಣಕ್ಕೆ (Ration distribution scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಉತ್ತರ 24 ಪರಗಣ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ನಾಯಕ ಶಹಜಹಾನ್ ಶೇಖ್ (Shahjahan Sheikh) ಮನೆ ಮೇಲೆ ದಾಳಿ ನಡೆಸಲು ಹೋದಾಗ ಅವರ ಬೆಂಬಲಿಗರು ದಾಳಿ ನಡೆಸಿದ್ದರು. ಇದೀಗ ಶೇಖ್ ವಿರುದ್ಧ ಲುಕ್‌ಔಟ್ ನೋಟಿಸ ಹೊರಡಿಸಲಾಗಿದೆ. ಮೂಲಗಳ ಪ್ರಕಾರ, ಶುಕ್ರವಾರ ನಡೆದ ದಾಳಿಯ ಸಮಯದಲ್ಲಿ ಶೇಖ್ ಅವರ ಮನೆಯಲ್ಲಿದ್ದರು, ಆದರೆ ದಾಳಿ ನಂತರ ನಾಪತ್ತೆಯಾಗಿದ್ದಾರೆ.
ಬಾಂಗ್ಲಾದೇಶ ಪ್ರವೇಶಿಸಲು ಯತ್ನಿಸಿದ ಶೇಖ್?
ಮೂಲಗಳ ಪ್ರಕಾರ, ಅವರು ಭಾರತ-ಬಾಂಗ್ಲಾದೇಶ ಗಡಿಯ ಮೂಲಕ ಶುಕ್ರವಾರ ಬಾಂಗ್ಲಾದೇಶವನ್ನು ಪ್ರವೇಶಿಸಲು ಪ್ರಯತ್ನಿಸಿದ್ದರು. ಆದರೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಬಾಂಗ್ಲಾದೇಶ ರೈಫಲ್ಸ್ (ಬಿಡಿಆರ್) ಸಿಬ್ಬಂದಿ ಭಾನುವಾರ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗೆ ಮುನ್ನ ಕಟ್ಟುನಿಟ್ಟಾದ ಜಾಗರೂಕತೆಯನ್ನು ಕಾಯ್ದುಕೊಳ್ಳುತ್ತಿರುವ ಕಾರಣ ವಿಫಲರಾದರು. ಮುಖ್ಯವಾಗಿ ಶೇಖ್ ಬಗ್ಗೆ ಬಿಎಸ್‌ಎಫ್‌ಗೂ ಎಚ್ಚರಿಕೆ ನೀಡಲಾಗಿದೆ. ಈ ಕಾರಣದಿಂದಾಗಿ ಶೇಖ್ ಪಶ್ಚಿಮ ಬಂಗಾಳದಲ್ಲಿಯೇ ತಲೆಮರೆಸಿಕೊಂಡಿರಬಹುದು ಎಂದು ಅಧಿಕಾರಿಗಳು ನಂಬಿದ್ದಾರೆ.
ಈ ನಡುವೆ ಇಡಿ ಪಶ್ಚಿಮ ಬಂಗಾಳ ಪೊಲೀಸರಿಗೆ ಸುಗ್ರೀವಾಜ್ಞೆ ಜಾರಿ ಮಾಡಿದ್ದು, ಶೇಖ್‌ನನ್ನು 48 ಗಂಟೆಗಳ ಒಳಗೆ ಬಂಧಿಸುವಂತೆ ಸೂಚಿಸಿದೆ. ಇಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದು ಮಾತ್ರವಲ್ಲದೆ ಶುಕ್ರವಾರ ಶೇಖ್ ಬೆಂಬಲಿಗರು ಅವರ ವಾಹನಗಳನ್ನು ಹಾನಿಗೊಳಿಸಿದ್ದಾರೆ. ವರದಿಗಳ ಪ್ರಕಾರ, ಘಟನೆಯಲ್ಲಿ ಮೂವರು ಇಡಿ ಅಧಿಕಾರಿಗಳ ಮೇಲೆ ದಾಳಿ ಮಾಡಲಾಗಿದೆ. ಅವರ ಮೊಬೈಲ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಕೂಡ ಗುಂಪು ಕಿತ್ತುಕೊಂಡಿದೆ ಎನ್ನಲಾಗಿದೆ. ಶಹಜಹಾನ್ ಅವರ ಮನೆಯಲ್ಲಿ ಸುಮಾರು 15 ಸ್ಥಳಗಳಲ್ಲಿ ದಾಳಿ ನಡೆಸುತ್ತಿದ್ದಾಗ ಇಡಿ ಮೇಲೆ ದಾಳಿ ನಡೆದಿದೆ.
ಇದನ್ನೂ ಓದಿ:Cheating case: ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಬಂಧನ
ಮಾಜಿ ಬೋಂಗಾ ಪುರಸಭೆ
ಶನಿವಾರ ಅದೇ ಜಿಲ್ಲೆಯಿಂದ ಬೋಂಗಾ ಪುರಸಭೆಯ ಮಾಜಿ ಅಧ್ಯಕ್ಷ ಶಂಕರ್ ಆಧ್ಯಾ ಅವರನ್ನು ಇಡಿ ವಶಕ್ಕೆ ತೆಗೆದುಕೊಂಡಿದೆ. ಶುಕ್ರವಾರ ದಾಳಿ ನಡೆಸಿದ ಸ್ಥಳಗಳಲ್ಲಿ ಅವರ ನಿವಾಸವೂ ಸೇರಿದೆ. ವಿಚಾರಣೆ ವೇಳೆ ತೃಪ್ತಿದಾಯಕ ಉತ್ತರ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಆಧ್ಯಾ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪಡಿತರ ಹಗರಣ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹಲವು ಬಾರಿ ಸಮನ್ಸ್‌ನಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂದು ವರದಿಯಾಗಿದೆ. ಅವರ ಸಂಬಂಧಿಯೊಬ್ಬರನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಏತನ್ಮಧ್ಯೆ, ಟಿವಿ9 ಭರತವರ್ಷದೊಂದಿಗೆ ಮಾತನಾಡಿದ ಆಧ್ಯಾ ಅವರ ಪುತ್ರಿ ರಿತುಪರ್ಣಾ ಅವರು ತಮ್ಮ ತಂದೆ ನಿರಪರಾಧಿ ಮತ್ತು ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ