Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರೀಂಕೋರ್ಟ್‌ನಲ್ಲಿ ಸಿಜೆಐ ಎದುರೇ 2 ವಿಸ್ಕಿ ಬಾಟಲಿಗಳನ್ನು ತಂದಿರಿಸಿದ ವಕೀಲರು, ಏನಿದು ಪ್ರಕರಣ?

ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ನ್ಯಾಯಾಲಯದೊಳಗೆ ಉತ್ಪನ್ನಗಳನ್ನು ತರಲು ಅವಕಾಶ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು. ನಂತರ ಹಿರಿಯ ವಕೀಲರು ಎರಡು ಮದ್ಯದ ಬಾಟಲಿಗಳನ್ನು ತಮ್ಮ ಮೇಜಿನ ಮೇಲೆ ಇರಿಸಲು ಮುಂದಾದರು. ಇದನ್ನು ಕಂಡ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರೊಂದಿಗೆ ಪೀಠವನ್ನು ಹಂಚಿಕೊಳ್ಳುತ್ತಿದ್ದ ಸಿಜೆಐ ಕೇಳಿದ್ದೇನು?

ಸುಪ್ರೀಂಕೋರ್ಟ್‌ನಲ್ಲಿ ಸಿಜೆಐ ಎದುರೇ 2 ವಿಸ್ಕಿ ಬಾಟಲಿಗಳನ್ನು ತಂದಿರಿಸಿದ ವಕೀಲರು, ಏನಿದು ಪ್ರಕರಣ?
ಡಿವೈ ಚಂದ್ರಚೂಡ್
Follow us
ರಶ್ಮಿ ಕಲ್ಲಕಟ್ಟ
|

Updated on: Jan 06, 2024 | 7:30 PM

ದೆಹಲಿ ಜನವರಿ 06: ಎರಡು ಮದ್ಯ ಕಂಪನಿಗಳ ನಡುವಿನ ಟ್ರೇಡ್‌ಮಾರ್ಕ್ ಉಲ್ಲಂಘನೆಯ(trademark violation) ವಿವಾದದ ವಿಚಾರಣೆಯ ಸಂದರ್ಭದಲ್ಲಿ ಶುಕ್ರವಾರ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud)ಅವರ ಮುಂದೆ ಎರಡು ವಿಸ್ಕಿ ಬಾಟಲಿಗಳನ್ನು ಹಾಜರುಪಡಿಸಲಾಗಿದೆ. ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠವು ಇಂದೋರ್ ಮೂಲದ ಜೆಕೆ ಎಂಟರ್‌ಪ್ರೈಸಸ್ ಕಂಪನಿಯು ‘ಲಂಡನ್ ಪ್ರೈಡ್’ ಹೆಸರಿನಲ್ಲಿ ಡ್ರಿಂಕ್ಸ್ ತಯಾರಿಸುವುದನ್ನು ತಡೆಯಲು ಮದ್ಯದ ಕಂಪನಿ ಪೆರ್ನಾಡ್ ರಿಕಾರ್ಡ್ ಮಾಡಿದ ಮನವಿಯನ್ನು ತಿರಸ್ಕರಿಸಿದ ಮಧ್ಯಪ್ರದೇಶ ಹೈಕೋರ್ಟ್ (Madhya Pradesh High Court) ಆದೇಶದ ವಿರುದ್ಧದ ಮೇಲ್ಮನವಿಯನ್ನು ವಿಚಾರಣೆ ನಡೆಸುತ್ತಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ನ್ಯಾಯಾಲಯದೊಳಗೆ ಉತ್ಪನ್ನಗಳನ್ನು ತರಲು ಅವಕಾಶ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು. ನಂತರ ಹಿರಿಯ ವಕೀಲರು ಎರಡು ಮದ್ಯದ ಬಾಟಲಿಗಳನ್ನು ತಮ್ಮ ಮೇಜಿನ ಮೇಲೆ ಇರಿಸಲು ಮುಂದಾದರು.

ಇದನ್ನು ಕಂಡ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರೊಂದಿಗೆ ಪೀಠವನ್ನು ಹಂಚಿಕೊಳ್ಳುತ್ತಿದ್ದ ಸಿಜೆಐ, ಜೋರಾಗಿ ನಕ್ಕು “ನೀವು ನಿಮ್ಮೊಂದಿಗೆ ಬಾಟಲಿಗಳನ್ನು ತಂದಿದ್ದೀರಾ?” ಎಂದು ಕೇಳಿದ್ದಾರೆ. ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ರೋಹಟಗಿ ಅವರು ಎರಡು ಉತ್ಪನ್ನಗಳ ನಡುವಿನ ಹೋಲಿಕೆಯನ್ನು ತೋರಿಸಬೇಕಾಗಿದೆ. ಹಾಗಾಗಿ ತಂದಿದ್ದೇವೆ. ಈ ಪ್ರಕರಣದಲ್ಲಿ ಟ್ರೇಡ್‌ಮಾರ್ಕ್ ಉಲ್ಲಂಘನೆಯಾಗಿದೆ ಎಂಬುದನ್ನು ವಿವರಿಸಿದರು.

ಸಮಸ್ಯೆಯು ಇಲ್ಲಿನ ವ್ಯಾಪಾರಕ್ಕೆ ಸಂಬಂಧಿಸಿದೆ. ಬಾಂಬೆಯಲ್ಲಿ ನನ್ನ ಒಂದು ತೀರ್ಪಿನಲ್ಲಿ ಬಾಟಲಿಯ ಆಕಾರದ ಬಗ್ಗೆ ಆಗಿತ್ತು ಎಂದು ಸಿಜೆಐ ಹೇಳಿದ್ದಾರೆ. ನಂತರ ಪೀಠವು ನೋಟಿಸ್ ಜಾರಿ ಮಾಡಿ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಿದ್ದು ಎರಡು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ಹೇಳಿದೆ. ನೋಟಿಸ್ ಜಾರಿಯಾದ ನಂತರ ರೋಹಟಗಿ ಅವರು ಸಿಜೆಐ ಅವರನ್ನು ತಮ್ಮೊಂದಿಗೆ ಬಾಟಲಿಗಳನ್ನು ತೆಗೆದುಕೊಂಡು ಹೋಗಬಹುದೇ ಎಂದು ಕೇಳಿದಾಗ ಮುಗುಳ್ನಕ್ಕ ಸಿಜೆಐ, ಯೆಸ್.. ಪ್ಲೀಸ್ ಎಂದಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ, ಇಂದೋರ್ ಮೂಲದ ಜೆಕೆ ಎಂಟರ್‌ಪ್ರೈಸಸ್ ‘ಲಂಡನ್ ಪ್ರೈಡ್’ ಟ್ರೇಡ್‌ಮಾರ್ಕ್ ಅಡಿಯಲ್ಲಿ ಮದ್ಯ ತಯಾರಿಸುವುದನ್ನು ತಡೆಯಲು ಮದ್ಯದ ಕಂಪನಿ ಪೆರ್ನೋಡ್ ರಿಕಾರ್ಡ್ ಮಾಡಿದ ಮನವಿಯನ್ನು ಮಧ್ಯಪ್ರದೇಶ ಹೈಕೋರ್ಟ್ ತಿರಸ್ಕರಿಸಿತ್ತು. ‘ಬ್ಲೆಂಡರ್ಸ್ ಪ್ರೈಡ್’ ಟ್ರೇಡ್‌ಮಾರ್ಕ್ ಮತ್ತು ‘ಇಂಪೀರಿಯಲ್ ಬ್ಲೂ’ ಬಾಟಲಿಯಂತೆ ಕಾಣುತ್ತಿದ್ದು, ಅವರು ನಿಯಮ ಅವರು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಜೆಕೆ ಎಂಟರ್‌ಪ್ರೈಸಸ್ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ನೀಡುವಂತೆ ರಿಕಾರ್ಡ್ ನ್ಯಾಯಾಲಯವನ್ನು ಕೋರಿತ್ತು.

ಇದನ್ನೂ ಓದಿ: Same-sex marriage hearing: ಸಲಿಂಗ ಸಂಬಂಧ ಎಂಬುದು ಕೇವಲ ದೈಹಿಕ ಮಾತ್ರವಲ್ಲ: ಸಿಜೆಐ ಡಿವೈ ಚಂದ್ರಚೂಡ್

ಜೆಕೆ ಎಂಟರ್‌ಪ್ರೈಸಸ್ ತನ್ನ ಗ್ರಾಹಕರನ್ನು ವಂಚಿಸಲು ‘ಲಂಡನ್ ಪ್ರೈಡ್’ ಮಾರ್ಕ್ ಅನ್ನು ಬಳಸುತ್ತಿದೆ ಎಂದು ರಿಕಾರ್ಡ್ ಆರೋಪಿಸಿತ್ತು. ಎರಡು ಬ್ರಾಂಡ್‌ಗಳ ಉತ್ಪನ್ನಗಳು ಪ್ರೀಮಿಯಂ ಅಥವಾ ಅಲ್ಟ್ರಾ-ಪ್ರೀಮಿಯಂ ವಿಸ್ಕಿಗಳನ್ನು ಒಳಗೊಂಡಿರುತ್ತವೆ. ಅದರ ಗ್ರಾಹಕರು ವಿದ್ಯಾವಂತ ಮತ್ತು ವಿವೇಚನಾಶೀಲ ಪ್ರಕಾರವನ್ನು ಹೊಂದಿರುತ್ತಾರೆ ಎಂದು ಹೈಕೋರ್ಟ್ ನಂತರ ಹೇಳಿತ್ತು.

“ಅಂತಹ ಉತ್ಪನ್ನಗಳ ಗ್ರಾಹಕರು ಹೆಚ್ಚಾಗಿ ಸಾಕ್ಷರರು ಮತ್ತು ಬ್ಲೆಂಡರ್ಸ್ ಪ್ರೈಡ್ / ಇಂಪೀರಿಯಲ್ ಬ್ಲೂ ಮತ್ತು ಲಂಡನ್ ಪ್ರೈಡ್ ಬಾಟಲಿಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಮಂಜಸವಾದ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ ಎಂದು ಸಾಕಷ್ಟು ಖಚಿತತೆಯೊಂದಿಗೆ ಸುರಕ್ಷಿತವಾಗಿ ಊಹಿಸಬಹುದು” ಎಂದು ಪೀಠವು ತನ್ನ ಆದೇಶದಲ್ಲಿ ಗಮನಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ