ಭಾರತದ ಮೊಟ್ಟಮೊದಲ ಕೊವಿಡ್-19 ರೋಗಿಗೆ ಮತ್ತೇ ಸೋಂಕು, ತ್ರಿಶೂರ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 13, 2021 | 4:11 PM

ಜನೆವರಿ 30, 2020ರಂದು ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣದ ಮೂರನೇ ವರ್ಷದ ವ್ಯಾಸಂಗದಲ್ಲಿ ತೊಡಗಿದ್ದ ವಿದ್ಯಾರ್ಥಿನಿಯು ಸೆಮಿಸ್ಟರ್ ರಜೆಗೋಸ್ಕರ ಭಾರತಕ್ಕೆ ಮರಳಿ ಕೆಲ ದಿನಗಳ ಬಳಿಕ ಕೊರೋನಾವೈರಸ್​ನಿಂದ ಸೋಂಕಿತಳಾಗಿದ್ದು ಪತ್ತೆಯಾಗಿತ್ತು

ಭಾರತದ ಮೊಟ್ಟಮೊದಲ ಕೊವಿಡ್-19 ರೋಗಿಗೆ ಮತ್ತೇ ಸೋಂಕು, ತ್ರಿಶೂರ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು
ತ್ರಿಶೂರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ
Follow us on

ತ್ರಿಶೂರ್, ಕೇರಳ: ಭಾರತದ ಮೊಟ್ಟ ಮೊದಲ ಕೊವಿಡ್​ -19 ಸೋಂಕಿತೆ, ಕೇರಳದ ವೈದ್ಯಕೀಯ ವಿದ್ಯಾರ್ಥಿನಿ ಈಗ ಮತ್ತೊಮ್ಮೆ ಸೋಂಕಿಗೊಳಗಾಗಿರುವ ಬಗ್ಗೆ ಕೇರಳದ ತ್ರಿಶೂರ್​ನಿಂದ ವರದಿಯಾಗಿದೆ. ತ್ರಿಶೂರ್ ಜಿಲ್ಲಾ ವೈದ್ಯಾಧಿಕಾರಿ ಡಾ ಕೆ ಜೆ ರೀನಾ ಅವರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ಮಂಗಳವಾರ ನೀಡಿರುವ ಮಾಹಿತಿ ಪ್ರಕಾರ ವಿದ್ಯಾರ್ಥಿನಿಯು ಕೊವಿಡ್-19 ಸೋಂಕಿನಿಂದ ಪೀಡಿತಳಾಗಿದ್ದು, ಆಕೆಯ ಆರ್​ಟಿ-ಪಿಸಿಆರ್ ಟೆಸ್ಟ್​​ ಪಾಸಿಟಿವ್ ಬಂದಿದೆ.

‘ಆಕೆ ಮತ್ತೊಮ್ಮೆ ಸೋಂಕಿಗೆ ಈಡಾಗಿದ್ದಾಳೆ, ಆಕೆಯ ಆಕೆಯ ಆರ್​ಟಿ-ಪಿಸಿಆರ್ ಟೆಸ್ಟ್​​ ಪಾಸಿಟಿವ್ ಬಂದಿದೆ ಮತ್ತು ಆಂಟಿಜೆನ್ ನೆಗೆಟಿವ್ ಇದೆ. ಆಕೆ ಎಸಿಂಪ್ಟೋಮ್ಯಾಟಿಕ್ ಆಗಿದ್ದಾಳೆ,’ ಎಂದು ಡಾ ರೀನಾ ಸುದ್ದಿಸಂಸ್ಥೆಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ವಿದ್ಯಾಭ್ಯಾಸಕ್ಕೋಸ್ಕರ ದೆಹಲಿಗೆ ಹೋಗುವ ತಯಾರಿ ನಡೆಸಿದ್ದರಿಂದ ಆಕೆಯ ಸ್ಯಾಂಪಲ್​ಗಳನ್ನು ಟೆಸ್ಟ್ ಮಾಡಲಾಗಿತ್ತು. ಆದರೆ ಆಕೆಯ ಆರ್​ಟಿ-ಪಿಸಿಆರ್ ಟೆಸ್ಟ್ ರಿಸಲ್ಟ್ ಪಾಸಿಟಿವ್ ಬಂದಿದೆ, ಸದ್ಯಕ್ಕೆ ಆಕೆ ಮನೆಯಲ್ಲೇ ಇದ್ದಾಳೆ, ಯಾವುದೇ ಸಮಸ್ಯೆಯಿಲ್ಲ,’ ಎಂದು ಡಾ ರೀನಾ ಹೇಳಿದ್ದಾರೆ.

ಜನೆವರಿ 30, 2020ರಂದು ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣದ ಮೂರನೇ ವರ್ಷದ ವ್ಯಾಸಂಗದಲ್ಲಿ ತೊಡಗಿದ್ದ ವಿದ್ಯಾರ್ಥಿನಿಯು ಸೆಮಿಸ್ಟರ್ ರಜೆಗೋಸ್ಕರ ಭಾರತಕ್ಕೆ ಮರಳಿ ಕೆಲ ದಿನಗಳ ಬಳಿಕ ಕೊರೋನಾವೈರಸ್​ನಿಂದ ಸೋಂಕಿತಳಾಗಿದ್ದು ಪತ್ತೆಯಾಗಿತ್ತು. ಆಕೆಯೇ ಭಾರತದ ಮೊಟ್ಟಮೊದಲ ಕೋವಿಡ್​-19 ರೋಗಿ ಎನ್ನಲಾಗಿದೆ.

ಅದಾದ ನಂತರ ಆಕೆಯನ್ನು ತ್ರಿಶೂರ್ ಮೆಡಿಕಲ್ ಕಾಲೇಜ್ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಪೂರ್ಣಗೊಂಡ ಬಳಿಕ ಎರಡು ಬಾರಿ ಸ್ಯಾಂಪಲ್​ಗಳನ್ನು ಟೆಸ್ಟ್ ಮಾಡಿ ನೆಗೆಟಿವ್ ಅನ್ನೋದು ಖಾತ್ರಿಯಾದ ನಂತರವೇ ಆಕೆಯನ್ನು ಫೆಬ್ರವರಿ 20, 2020 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

ಆದರೆ, ರೋಗದಿಂದ ಗುಣಮುಕ್ತಳಾದ ಒಂದೂವರೆ ವರ್ಷದ ನಂತರ ಆಕೆಗೆ ಪುನಃ ಸೋಂಕು ತಾಕಿದೆ.

ಇದನ್ನೂ ಓದಿ: ಕೇರಳದಿಂದ ಕರ್ನಾಟಕ ಪ್ರವೇಶಿಸುವವರಿಗೆ 72 ಗಂಟೆಗಳ ಒಳಗಿನ ನೆಗೆಟಿವ್ ರಿಪೋರ್ಟ್ ಕಡ್ಡಾಯ; ದಕ್ಷಿಣ ಕನ್ನಡ ಅನ್​ಲಾಕ್ ಕೆಟಗೆರಿ 1ರ ಪಟ್ಟಿಗೆ ಸೇರ್ಪಡೆ