Vande Bharat Sleeper: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ವಿಶೇಷತೆ, ಟಿಕೆಟ್ ದರ ಏನು?

ಪ್ರಧಾನಿ ನರೇಂದ್ರ ಮೋದಿ ಇಂದು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಈ ವಂದೇ ಭಾರತ್ ಸ್ಲೀಪರ್ ರೈಲು ಹೌರಾ ಮತ್ತು ಕಾಮಾಕ್ಯದ ನಡುವೆ ಸಂಚರಿಸಲಿದೆ. ಇಂದಿನಿಂದ ಆರಂಭವಾಗಿರುವ ಈ ವಿಶೇಷ ರೈಲಿನ ಟಿಕೆಟ್ ಬೆಲೆ ಎಷ್ಟು? ಬುಕಿಂಗ್ ಹೇಗೆ? ಇದರ ವಿಶೇಷತೆಯೇನು? ಎಂಬಿತ್ಯಾದಿ ವಿವರಗಳು ಇಲ್ಲಿವೆ.

Vande Bharat Sleeper: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ವಿಶೇಷತೆ, ಟಿಕೆಟ್ ದರ ಏನು?
Vande Bharat Sleeper Train

Updated on: Jan 17, 2026 | 5:14 PM

ನವದೆಹಲಿ, ಜನವರಿ 17 ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ (Vande Bharat Sleeper Train) ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಪ್ರಯಾಣಿಕರಿಗೆ ಐಷಾರಾಮಿ ಪ್ರಯಾಣವನ್ನು ನೀಡಲು ವಿನ್ಯಾಸಗೊಳಿಸಲಾದ ಹೊಸ ವಂದೇ ಭಾರತ್ ರೈಲಲ್ಲಿ ವಿಮಾನದ ರೀತಿಯ ವಿನ್ಯಾಸ, ವಿಶೇಷತೆಗಳಿವೆ. ಆದರೆ, ಇದು ವಿಮಾನಕ್ಕಿಂತ ಕಡಿಮೆ ದರದಲ್ಲಿ ವಿಮಾನದ ರೀತಿಯದ್ದೇ ಸೇವೆ ನೀಡಲಿದೆ. ಇದು ತನ್ನ ಪ್ರಯಾಣಿಕರಿಗೆ ದೀರ್ಘ ಪ್ರಯಾಣವನ್ನು ಸುಲಭಗೊಳಿಸುವ ಪ್ರಮುಖ ಸೌಲಭ್ಯಗಳನ್ನು ಒಳಗೊಂಡಿದೆ.

ಈ ರೈಲು ಹೌರಾ-ಗುವಾಹಟಿ (ಕಾಮಾಕ್ಯ) ಮಾರ್ಗದಲ್ಲಿ ಸುಮಾರು ಎರಡೂವರೆ ಗಂಟೆಗಳ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಈ ರೈಲು ಧಾರ್ಮಿಕ ಪ್ರಯಾಣ ಮತ್ತು ಪ್ರವಾಸೋದ್ಯಮಕ್ಕೂ ಪ್ರಮುಖ ಉತ್ತೇಜನ ನೀಡುತ್ತದೆ. ರಾತ್ರಿಯ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ ಬರ್ತ್‌ಗಳು, ಸುರಕ್ಷಿತ ಮತ್ತು ಸುಲಭವಾದ ಮೇಲಿನ ಬರ್ತ್ ಪ್ರವೇಶಕ್ಕಾಗಿ ಪ್ರಯಾಣಿಕ ಸ್ನೇಹಿ ಏಣಿಗಳು, ಆಧುನಿಕ ವಿನ್ಯಾಸದ ಶೌಚಾಲಯಗಳು ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರೀಕೃತ ಮೇಲ್ವಿಚಾರಣೆ ಮತ್ತು ಸಿಸಿಟಿವಿಗಳು ಇರದಲ್ಲಿ ಇರಲಿದೆ.


ಪ್ರಧಾನಿ ನರೇಂದ್ರ ಮೋದಿ ಅವರು ಹೌರಾ ಮತ್ತು ಗುವಾಹಟಿ (ಕಾಮಾಕ್ಯ) ನಡುವೆ ಸಂಚರಿಸುವ ಈಶಾನ್ಯ ಗಡಿನಾಡು ರೈಲ್ವೆ (NFR) ವಲಯದಿಂದ ನಿರ್ವಹಿಸಲ್ಪಡುವ ಹೊಸ ಪ್ರೀಮಿಯಂ ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಈ ರೈಲಿನ ಮಾರ್ಗ, ಪ್ರಮುಖ ವೈಶಿಷ್ಟ್ಯಗಳು, ಟಿಕೆಟ್ ಬೆಲೆ, ಇತರ ವಿವರಗಳ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:Vande Bharat Sleeper Train: ಬಂಗಾಳದ ಮಾಲ್ಡಾದಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಭಾರತದಲ್ಲಿ ವಿನ್ಯಾಸಗೊಳಿಸಿ ತಯಾರಿಸಲಾದ ವಂದೇ ಭಾರತ್ ಸ್ಲೀಪರ್ ರೈಲು 16 ಬೋಗಿಗಳನ್ನು ಹೊಂದಿದೆ. ಇದು 823 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಈ ಪ್ರೀಮಿಯಂ ರೈಲು 11 ಮೂರು ಹಂತದ AC ಕೋಚ್‌ಗಳು, 4 ಎರಡು ಹಂತದ AC ಕೋಚ್‌ಗಳು ಮತ್ತು 1ನೇ ದರ್ಜೆಯ AC ಕೋಚ್ ಅನ್ನು ಒಳಗೊಂಡಿದೆ.


ರೈಲಿನ ಟಿಕೆಟ್ ಬೆಲೆ:

ಹೌರಾ ಮತ್ತು ಕಾಮಾಕ್ಯ ನಡುವಿನ ವಂದೇ ಭಾರತ್ ಸ್ಲೀಪರ್ ರೈಲಿನ 3ನೇ ಎಸಿ ಟಿಕೆಟ್‌ನ ಬೆಲೆ ಸುಮಾರು 2,300 ರೂ. ಆಗಿರುತ್ತದೆ. 2ನೇ ಎಸಿ ಟಿಕೆಟ್ ದರ ಸುಮಾರು 3,000 ರೂ. ಮತ್ತು 1ನೇ ಎಸಿ ಟಿಕೆಟ್‌ನ ಬೆಲೆ ಸುಮಾರು 3,600 ರೂ. ಇರಲಿದೆ. ಈ ರೈಲು ಗಂಟೆಗೆ 180 ಕಿ.ಮೀ. ವೇಗವನ್ನು ತಲುಪಲು ನಿರ್ಮಿಸಲಾಗಿದ್ದರೂ, ಇದು ಗಂಟೆಗೆ ಗರಿಷ್ಠ 120-130 ಕಿ.ಮೀ. ವೇಗದಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: Vande Bharat Sleeper Train: ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ

ಮೆಟ್ರೋ ರೈಲುಗಳಂತೆಯೇ ಪ್ರಯಾಣದ ಉದ್ದಕ್ಕೂ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು ಮುಚ್ಚಲ್ಪಟ್ಟಿರುವಂತೆ ಪ್ರೋಗ್ರಾಮ್ ಮಾಡಲಾಗಿದೆ. ರೈಲು ನಿಲ್ದಾಣಕ್ಕೆ ಬಂದಾಗ ಮಾತ್ರ ಬಾಗಿಲು ತೆರೆಯುತ್ತದೆ. ಈ ರೈಲುಗಳು ಸಂಪೂರ್ಣ ಎಸಿ (ಹವಾನಿಯಂತ್ರಿತ)ಯನ್ನು ಒಳಗೊಂಡಿರುತ್ತದೆ.


ವೇಗ, ನೈರ್ಮಲ್ಯ ಮತ್ತು ಸುರಕ್ಷತೆಯ ಜೊತೆಗೆ, ಈ ರೈಲು ತನ್ನ ಪ್ರಯಾಣಿಕರಿಗೆ ಪ್ರೀಮಿಯಂ ವಿಮಾನಯಾನ ಸೇವೆಗಳಂತೆಯೇ ಸ್ಥಳೀಯ ಆಹಾರವನ್ನು ನೀಡುತ್ತದೆ. ಟಿಕೆಟ್ ಬೆಲೆಯಲ್ಲಿ ಆಹಾರವನ್ನು ಕೂಡ ಸೇರಿಸಲಾಗಿರುತ್ತದೆ. ಸ್ಥಳೀಯ ಆಹಾರವನ್ನು ಪ್ರಯಾಣಿಕರಿಗೆ ನೀಡುವ ಉದ್ದೇಶದಿಂದ ಕಾಮಾಕ್ಯದಿಂದ ಹೌರಾಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅಸ್ಸಾಮಿ ಆಹಾರವನ್ನು ನೀಡಲಾಗುತ್ತದೆ. ಹೌರಾದಿಂದ ಕಾಮಾಕ್ಯಕ್ಕೆ ಹಿಂದಿರುಗುವ ಪ್ರಯಾಣದಲ್ಲಿರುವವರು ಬಂಗಾಳಿ ಆಹಾರವನ್ನು ಸವಿಯಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ