AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಮಹಿಳೆಯರಿಗೊಂದು ಸಂತೋಷದ ಸಂಗತಿ, ಅವರ ಸಂಖ್ಯೆ ಹೆಚ್ಚಲಿದೆ!

ಮಹಿಳೆಯರಿಗೆ ಖುಷಿ ಹಾಗೂ ನೆಮ್ಮದಿ ಒದಗಿಸುವಂಥ ವಿಷುವೊಂದನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಬರುವ ರಾಷ್ರೀಯ ಜನಸಂಖ್ಯಾ ಆಯೋಗ ಬಹಿರಂಗಪಡಿಸಿದೆ. ಈ ಆಯೋಗದ ಅಂದಾಜಿನ ಪ್ರಕಾರ 2036ರ ಹೊತ್ತಿಗೆ ಅಂದರೆ ಇಂದುನಿಂದ 15 ವರ್ಷಗಳ ನಂತರ ಭಾರತದಲ್ಲಿ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ. ನಮ್ಮೆಲ್ಲರಿಗೂ ಗೊತ್ತಿರುವಂತೆ ಭಾರತದಲ್ಲಿ ಲಿಂಗಾನುಪಾತ ಕಳವಳಕಾರಿಯಾಗಿದೆ. 2011ರ ಜನಗಣತಿಯ ಪ್ರಕಾರ, ನಮ್ಮ ದೇಶದಲ್ಲಿ 1000 ಪುರುಷರಿಗೆ ಕೇವಲ 943 ಮಹಿಳೆಯರು ಮಾತ್ರ ಇದ್ದರು. ನಮ್ಮದು ಕೇವಲ ಪುರುಷ ಪ್ರಧಾನ ಸಮಾಜವಷ್ಟೇ […]

ಭಾರತೀಯ ಮಹಿಳೆಯರಿಗೊಂದು ಸಂತೋಷದ ಸಂಗತಿ, ಅವರ ಸಂಖ್ಯೆ ಹೆಚ್ಚಲಿದೆ!
ಅರುಣ್​ ಕುಮಾರ್​ ಬೆಳ್ಳಿ
|

Updated on:Aug 20, 2020 | 6:00 PM

Share

ಮಹಿಳೆಯರಿಗೆ ಖುಷಿ ಹಾಗೂ ನೆಮ್ಮದಿ ಒದಗಿಸುವಂಥ ವಿಷುವೊಂದನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಬರುವ ರಾಷ್ರೀಯ ಜನಸಂಖ್ಯಾ ಆಯೋಗ ಬಹಿರಂಗಪಡಿಸಿದೆ. ಈ ಆಯೋಗದ ಅಂದಾಜಿನ ಪ್ರಕಾರ 2036ರ ಹೊತ್ತಿಗೆ ಅಂದರೆ ಇಂದುನಿಂದ 15 ವರ್ಷಗಳ ನಂತರ ಭಾರತದಲ್ಲಿ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ.

ನಮ್ಮೆಲ್ಲರಿಗೂ ಗೊತ್ತಿರುವಂತೆ ಭಾರತದಲ್ಲಿ ಲಿಂಗಾನುಪಾತ ಕಳವಳಕಾರಿಯಾಗಿದೆ. 2011ರ ಜನಗಣತಿಯ ಪ್ರಕಾರ, ನಮ್ಮ ದೇಶದಲ್ಲಿ 1000 ಪುರುಷರಿಗೆ ಕೇವಲ 943 ಮಹಿಳೆಯರು ಮಾತ್ರ ಇದ್ದರು. ನಮ್ಮದು ಕೇವಲ ಪುರುಷ ಪ್ರಧಾನ ಸಮಾಜವಷ್ಟೇ ಅಲ್ಲ, ಮಹಿಳೆಯರ ಹುಟ್ಟನ್ನು ಸಹ ಸೀಮಿತಗೊಳಿಸುವ ಅಥವಾ ಬಹುತೇಕವಾಗಿ ಬಯಸದಿರುವ ಮನಸ್ಥಿತಿ ನಮ್ಮದು ಎನ್ನುವುದನ್ನು ಈ ಅಂಕಿಅಂಶ ಸಾಬೀತುಪಡಿಸುತ್ತದೆ.

ಆದರೆ, ಮುಂದಿನ 15 ವರ್ಷಗಳಲ್ಲಿ ಸದರಿ ಚಿತ್ರಣ ಬದಲಾಗಲಿದೆಯೆಂದು ಆಯೋಗದ ಸಮೀಕ್ಷಾ ವರದಿ ತಿಳಿಸುತ್ತದೆ. ಅಂದರೆ 2036 ರಲ್ಲಿ ಮಹಿಳೆಯರ ಸಂಖ್ಯೆ ಪ್ರತಿ 1000 ಪುರುಷರಿಗೆ 957 ಆಗಲಿದೆ. ವರದಿಯ ಪ್ರಕಾರ, 2011 ಕ್ಕೆ ಹೋಲಿಸಿದರೆ, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ ಮುಂತಾದವುಗಳನ್ನು ಹೊರತುಪಡಿಸಿ, 18 ರಾಜ್ಯಗಳಲ್ಲಿ ಮಹಿಳೆಯರ ಸಂಖ್ಯೆ ಬಹಳಷ್ಟು ಜಾಸ್ತಿಯಾಗಲಿದೆ.

ವರದಿಯಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ 2036 ಹೊತ್ತಿಗೆ ಮಹಿಳೆಯರ ಸಂಖ್ಯೆ ದಿಗಿಲು ಹುಟ್ಟಿಸುವಷ್ಟು ಅಂದರೆ 1,000 ಪುರುಷರಿಗೆ ಕೇವಲ 899 ಮಹಿಳೆಯರಷ್ಟು ಇಳಿಮುಖಗೊಳ್ಳಲಿದೆ. ಅದೇ ತೆರನಾಗಿ, ಗುಜರಾತ ಮತ್ತು ಹರಿಯಾಣದಲ್ಲಿ ಮಹಿಳೆಯರ ಸಂಖ್ಯೆ ಅನುಕ್ರಮವಾಗಿ 900 ಹಾಗೂ 908ರಷ್ಟು ಇಳಿಮುಖ ಕಾಣಲಿದೆ.

ಭಾರತದಲ್ಲಿ ಗಂಡು ಸಂತಾನಕ್ಕಾಗಿ ಹಂಬಲಿಸುವ ದಂಪತಿಯರಿಂದಾಗೇ ಲಿಂಗಾನುಪಾತದಲ್ಲಿ ಇಂಥ ಘೋರ ತಾರತಮ್ಯ ಎದುರಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ.

Published On - 3:07 pm, Thu, 20 August 20