ಪಂಜಾಬ್ನ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ತಮಗೆ ಇಂಡಿಗೋ(IndiGo) ವಿಮಾನದಲ್ಲಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.
ಅವರು ಚಂಡೀಗಢದಿಂದ ಜೈಪುರಕ್ಕೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದಾರೆ, ವಿಮಾನದಲ್ಲಿ ಎಸಿ ಇರಲಿಲ್ಲ, ವಿಮಾನ ಸಿಬ್ಬಂದಿ ಬೆವರು ಒರೆಸಿಕೊಳ್ಳಲು ಪ್ರಯಾಣಿಕರಿಗೆ ಟಿಶ್ಯೂ ನೀಡಿದ್ದರು ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಈ 90 ನಿಮಿಷಗಳ ಪ್ರಯಾಣ ಅತ್ಯಂತ ಭಯಾನಕವಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ ದೂರಿದ ಕಾಂಗ್ರೆಸ್ ಮುಖಂಡರು, ಮೊದಲು ಪ್ರಯಾಣಿಕರನ್ನು ಬಿಸಿಲಿನ ತಾಪದಲ್ಲಿ ಸುಮಾರು 10-15 ನಿಮಿಷಗಳ ಕಾಲ ಸರದಿಯಲ್ಲಿ ಕಾಯುವಂತೆ ಮಾಡಲಾಯಿತು ಮತ್ತು ನಂತರ ಎಸಿಗಳು ಆನ್ ಮಾಡದೆಯೇ ವಿಮಾನ ಟೇಕ್ ಆಫ್ ಆಯಿತು ಎಂದು ಹೇಳಿದರು. ಟೇಕ್‌ಆಫ್‌ನಿಂದ ಲ್ಯಾಂಡಿಂಗ್‌ವರೆಗೆ, AC ಗಳು ಆಫ್ ಆಗಿದ್ದವು ಮತ್ತು ಎಲ್ಲಾ ಪ್ರಯಾಣಿಕರು ಕಷ್ಟ ಪಡುವಂತಾಗಿತ್ತು.
ಮತ್ತಷ್ಟು ಓದಿ: IndiGO Flight: ಪಾಟ್ನಾದಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ
ವೀಡಿಯೋದಲ್ಲಿ ಪ್ರಯಾಣಿಕರಿಗೆ ಟಿಶ್ಯೂ ಪೇಪರ್ ಕೊಡುತ್ತಿರುವುದನ್ನು ಕಾಣಬಹುದು. ಸಿಂಗ್ ಅವರು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹಾಗೂ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವನ್ನು ಟ್ಯಾಗ್ ಮಾಡಿ, ವಿಮಾನಯಾನ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಾರದಲ್ಲಿ ಎರಡನೇ ಬಾರಿ ಇಂತಹ ಘಟನೆ ನಡೆದಿದೆ, ದೆಹಲಿಗೆ ಹಾರುತ್ತಿದ್ದ ಇಂಡಿಗೋ ವಿಮಾನದ ಇಂಜಿನ್‌ನಲ್ಲಿ ದೋಷ ಕಾಣಿಸಿಕೊಂಡ ಕಾರಣ ಶುಕ್ರವಾರ ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ವಿಮಾನ ಟೇಕ್ ಆಫ್ ಆದ ಕೇವಲ ಮೂರು ನಿಮಿಷಗಳ ನಂತರ ಈ ಘಟನೆ ಸಂಭವಿಸಿದೆ. ಪಾಟ್ನಾದ ಜಯಪ್ರಕಾಶ್ ನಾರಾಯಣ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 9.11ರ ಸುಮಾರಿಗೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ