ಪಾಕಿಸ್ತಾನದ ಯುವತಿ ಜತೆ ಜೋಧ್​ಪುರದ ವ್ಯಕ್ತಿ ಆನ್​ಲೈನ್ ಮದುವೆ

ಪಾಕಿಸ್ತಾನದಿಂದ ನೇಪಾಳದ ಮೂಲಕ ಭಾರತಕ್ಕೆ ಬಂದ ಸೀಮಾ ಹೈದರ್ ಮತ್ತು ಭಾರತದಿಂದ ಪಾಕಿಸ್ತಾನಕ್ಕೆ ಹೋದ ಅಂಜು ವಿಷಯ ನಿಮ್ಮೆಲ್ಲರಿಗೂ ತಿಳಿದೇ ಇದೆ.

ಪಾಕಿಸ್ತಾನದ ಯುವತಿ ಜತೆ ಜೋಧ್​ಪುರದ ವ್ಯಕ್ತಿ ಆನ್​ಲೈನ್ ಮದುವೆ
ಮದುವೆImage Credit source: NDTV
Follow us
|

Updated on: Aug 06, 2023 | 10:18 AM

ಪಾಕಿಸ್ತಾನದಿಂದ ನೇಪಾಳದ ಮೂಲಕ ಭಾರತಕ್ಕೆ ಬಂದ ಸೀಮಾ ಹೈದರ್ ಮತ್ತು ಭಾರತದಿಂದ ಪಾಕಿಸ್ತಾನಕ್ಕೆ ಹೋದ ಅಂಜು ವಿಷಯ ನಿಮ್ಮೆಲ್ಲರಿಗೂ ತಿಳಿದೇ ಇದೆ. ಆದರೆ ಈ ಜೋಡಿ ಮತ್ತೊಂದು ಹೆಜ್ಜೆ ಮುಂದಕ್ಕೆ ಸಾಗಿದೆ. ಇವರು ಒಬ್ಬರನ್ನೊಬ್ಬರು ಇಷ್ಟ ಪಟ್ಟ ಬಳಿಕ ಬೇರೆ ದೇಶಕ್ಕೇನೂ ಹೋಗಿಲ್ಲ ಬದಲಾಗಿ ಮನೆಯವರ ಸಮ್ಮುಖದಲ್ಲಿ ಆನ್​ಲೈನ್​ನಲ್ಲಿ ಮದುವೆಯಾಗಿದ್ದಾರೆ. ರಾಜಸ್ಥಾನದ ಜೋಧ್​ಪುರದ ವ್ಯಕ್ತಿಯೊಬ್ಬ ಪಾಕಿಸ್ತಾನದ ಮಹಿಳೆಯನ್ನು ಆನ್​ಲೈನ್​ನಲ್ಲಿ ಮದುವೆಯಾಗಿರುವ ಘಟನೆ ನಡೆದಿದೆ.

ಕರಾಚಿಯ ನಿವಾಸಿಯಾದ ಅಮೀನಾ, ಜೋಧ್‌ಪುರದ ನಿವಾಸಿಯಾದ ಅರ್ಬಾಜ್ ಅವರನ್ನು ಆನ್​ಲೈನ್​ ಮೂಲಕ ವಿವಾಹವಾಗಿದ್ದಾರೆ, ಅಮೀನಾ ಭಾರತಕ್ಕೆ ಬರಲು ವೀಸಾ ಪಡೆಯಲು ವಿಫಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ, ನಂತರ ಅರ್ಬಾಜ್ ಮತ್ತು ಅಮೀನಾ ಆನ್​ಲೈನ್​ನಲ್ಲಿಯೇ ಮದುವೆಯಾಗಲು ನಿರ್ಧರಿಸಿದರು.

ಮತ್ತಷ್ಟು ಓದಿ: ಅಂಜು ಇಸ್ಲಾಂಗೆ ಮತಾಂತರಗೊಂಡಿದ್ದಕ್ಕಾಗಿ ಪಾಕ್ ಉದ್ಯಮಿಯಿಂದ ಭರ್ಜರಿ ಉಡುಗೊರೆ

ಮಾಧ್ಯಮ ವರದಿಗಳ ಪ್ರಕಾರ, ಜೋಧ್‌ಪುರದಲ್ಲಿ ವಾಸಿಸುವ ಅರ್ಬಾಜ್ ಕುಟುಂಬವು ಪಾಕಿಸ್ತಾನದಲ್ಲಿರುವ ಅಮಿನಾ ಕುಟುಂಬದೊಂದಿಗೆ ಈ ಮೊದಲೇ ನಂಟು ಹೊಂದಿತ್ತು. ಅವರ ಕುಟುಂಬದಲ್ಲಿ ಈಗಾಗಲೇ ಬೇರೆ ದೇಶದವರನ್ನು ಮದುವೆಯಾಗಿರುವ ಘಟನೆ ನಡೆದಿದೆ.

ನನ್ನ ಮೊಮ್ಮಗನೊಬ್ಬ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಈ ಹಿಂದೆ ಪಾಕಿಸ್ತಾನದ ಹುಡುಗಿಯನ್ನು ಮದುವೆಯಾಗಿದ್ದ ಎಂದು ಅರ್ಬಾಜ್ ತಂದೆ ಮೊಹಮ್ಮದ್ ಅಫ್ಜಲ್ ತಿಳಿಸಿದ್ದಾರೆ. ಅವರಿಬ್ಬರ ಖುಷಿಯನ್ನು ನೋಡಿದ ಅಮಿನಾ ಮನೆಯವರು ನಮ್ಮ ಮಗನಿಗೆ ಮದುವೆ ಮಾಡಿಕೊಡುವಂತೆ ಕೇಳಿದರು, ಅದನ್ನು ನಾವು ಒಪ್ಪಿಕೊಂಡೆವು.

ವರದಿಗಳ ಪ್ರಕಾರ, ಅರ್ಬಾಜ್ ತನ್ನ ಕುಟುಂಬದವರೊಂದಿಗೆ ಜೋಧ್‌ಪುರದ ಓಸ್ವಾಲ್ ಸಮಾಜ ಭವನವನ್ನು ತಲುಪಿದ್ದರು, ಅಲ್ಲಿ ಅವರು ತನ್ನ ವಧು ಅಮೀನಳೊಂದಿಗೆ ಆನ್​ಲೈನ್​ ಮೂಲಕ ವಿವಾಹವಾದರು. ವೃತ್ತಿಯಲ್ಲಿ ಡಿಟಿಪಿ ಆಪರೇಟರ್ ಆಗಿರುವ ಅರ್ಬಾಜ್, ಮದುವೆಯ ನಂತರ ಅಮೀನಾ ವೀಸಾಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ನಾನು ಪಾಕಿಸ್ತಾನದಲ್ಲಿ ಮದುವೆಯಾಗಲಿಲ್ಲ ಏಕೆಂದರೆ ನಾವು ಭಾರತಕ್ಕೆ ಬಂದಾಗ ಮತ್ತೆ ಮದುವೆಯಾಗಬೇಕಾಗುತ್ತದೆ.

ಹಾಗಾಗಿ ಆನ್‌ಲೈನ್‌ನಲ್ಲಿ ಮದುವೆಯಾಗಿ ಮೌಲ್ವಿಯವರಿಂದ ಕಾನೂನುಬದ್ಧ ಪ್ರಮಾಣ ಪತ್ರ ಪಡೆದಿದ್ದೇವೆ. ಕೆಲವು ತಿಂಗಳ ಹಿಂದೆ ಭಾರತ ಮತ್ತು ಪಾಕಿಸ್ತಾನದ ಗಡಿಯಾಚೆಗಿನ ಎರಡು ಕಥೆಗಳು ಎಲ್ಲರ ಗಮನ ಸೆಳೆದಿದ್ದರಿಂದ ಅಮೀನಾ ಮತ್ತು ಅರ್ಬಾಜ್ ಮದುವೆಯ ಚರ್ಚೆ ಇದೀಗ ಎಲ್ಲೆಡೆ ಹರಡಿದೆ.

ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಗ್ರೇಟರ್ ನೋಯ್ಡಾದಲ್ಲಿ ತನ್ನ ಗೆಳೆಯ ಸಚಿನ್ ಮೀನಾರೊಂದಿಗೆ ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ.

ಅದೇ ಸಮಯದಲ್ಲಿ, 35 ವರ್ಷದ ಅಂಜು ತನ್ನ ಪಾಕಿಸ್ತಾನಿ ಪ್ರೇಮಿ ನಸ್ರುಲ್ಲಾಳನ್ನು ಭೇಟಿಯಾಗಲು ಪಾಕಿಸ್ತಾನದ ಖೈಬರ್ ಪಖ್ತುಂಕ್ವಾಗೆ ಹೋಗಿರುವ ಘಟನೆ ಬೆಳಕಿಗೆ ಬಂದಿತ್ತು,  ಆಕೆ ಅಲ್ಲಿ ಫಾತಿಮಾಳಾಗಿ ಮತಾಂತರಗೊಂಡು ತನ್ನ ಪ್ರೇಮಿಯನ್ನು ಮದುವೆಯಾದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು
ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು
ಜೈಲಿಂದ ಆಚೆ ಬರುವ ಮೊದಲು ದರ್ಶನ್ ಟಿ-ಶರ್ಟ್ ಬದಲಾಯಿಸಿದರು
ಜೈಲಿಂದ ಆಚೆ ಬರುವ ಮೊದಲು ದರ್ಶನ್ ಟಿ-ಶರ್ಟ್ ಬದಲಾಯಿಸಿದರು
ಯಶ್-ರಾಧಿಕಾ ದಂಪತಿಯ ಪುತ್ರ ಯಥರ್ವ್​ಗೆ 5ನೇ ವರ್ಷದ ಹುಟ್ಟುಹಬ್ಬ
ಯಶ್-ರಾಧಿಕಾ ದಂಪತಿಯ ಪುತ್ರ ಯಥರ್ವ್​ಗೆ 5ನೇ ವರ್ಷದ ಹುಟ್ಟುಹಬ್ಬ
ದರ್ಶನ್ ನಿಜವಾದ ಅಭಿಮಾನಿಗಳು ಜೈಲು ಮುಂದೆ ನೆರೆದು ನಟನಿಗಾಗಿ ಕಾಯ್ತಿದ್ದಾರೆ
ದರ್ಶನ್ ನಿಜವಾದ ಅಭಿಮಾನಿಗಳು ಜೈಲು ಮುಂದೆ ನೆರೆದು ನಟನಿಗಾಗಿ ಕಾಯ್ತಿದ್ದಾರೆ
ದರ್ಶನ್ ಜಾಮೀನು ಪಡೆದ ಬಳಿಕ ಬಳ್ಳಾರಿ ದುರ್ಗಾದೇವಿಗೆ ವಿಜಯಲಕ್ಷ್ಮಿ ಪೂಜೆ
ದರ್ಶನ್ ಜಾಮೀನು ಪಡೆದ ಬಳಿಕ ಬಳ್ಳಾರಿ ದುರ್ಗಾದೇವಿಗೆ ವಿಜಯಲಕ್ಷ್ಮಿ ಪೂಜೆ
ಬೆಂಗಳೂರು ನಗರದ ಹಲವೆಡೆ ಮತ್ತೆ ಧಾರಾಕಾರ ಮಳೆ, ಟ್ರಾಫಿಕ್​ ಜಾಮ್​
ಬೆಂಗಳೂರು ನಗರದ ಹಲವೆಡೆ ಮತ್ತೆ ಧಾರಾಕಾರ ಮಳೆ, ಟ್ರಾಫಿಕ್​ ಜಾಮ್​
ಜೈಲು ರಸ್ತೆಯನ್ನು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡಿಂಗ್ ಮಾಡಿದ ಪೊಲೀಸ್
ಜೈಲು ರಸ್ತೆಯನ್ನು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡಿಂಗ್ ಮಾಡಿದ ಪೊಲೀಸ್
ದರ್ಶನ್ ಮಿತ್ರನಾದರೂ ಜಾಮೀನು ಸಿಕ್ಕಿರುವುದಕ್ಕೆ ಪ್ರತಿಕ್ರಿಯಿಸಲೊಲ್ಲದ ಜಮೀರ್
ದರ್ಶನ್ ಮಿತ್ರನಾದರೂ ಜಾಮೀನು ಸಿಕ್ಕಿರುವುದಕ್ಕೆ ಪ್ರತಿಕ್ರಿಯಿಸಲೊಲ್ಲದ ಜಮೀರ್
ಚಾಮರಾಜನಗರ: ಸಾಲ ತೀರಿಸದ ರೈತರ ವಿರುದ್ಧ ದೂರು ದಾಖಲಿಸಲು ಮುಂದಾದ ಸರ್ಕಾರ
ಚಾಮರಾಜನಗರ: ಸಾಲ ತೀರಿಸದ ರೈತರ ವಿರುದ್ಧ ದೂರು ದಾಖಲಿಸಲು ಮುಂದಾದ ಸರ್ಕಾರ
ನನ್ನ ಕೆಲಸಗಳ ಆಧಾರದಲ್ಲಿ ಚನ್ನಪಟ್ಟಣ ಜನರ ಮತ ಯಾಚಿಸುವೆ: ಕುಮಾರಸ್ವಾಮಿ
ನನ್ನ ಕೆಲಸಗಳ ಆಧಾರದಲ್ಲಿ ಚನ್ನಪಟ್ಟಣ ಜನರ ಮತ ಯಾಚಿಸುವೆ: ಕುಮಾರಸ್ವಾಮಿ