Bengaluru News: ಇಂಡಿಗೋ ವಿಮಾನದ ಫೋಟೋ ವೈರಲ್; ಕಾರಣ ಇಲ್ಲಿದೆ
ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಬಾರಿ ವಿಚಿತ್ರವಾದ ಮತ್ತು ಆಶ್ಚರ್ಯಕರ ಭಾವಚಿತ್ರಗಳು ವೈರಲ್ ಆಗುತ್ತಿರುತ್ತವೆ. ಅಂದರಂತೆ ಇದೀಗ ಇಂಡಿಗೋ ವಿಮಾನದ ಫೋಟೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ (Social Media) ಕೆಲವೊಂದು ಬಾರಿ ವಿಚಿತ್ರವಾದ ಮತ್ತು ಆಶ್ಚರ್ಯಕರ ಭಾವಚಿತ್ರಗಳು (Photos) ವೈರಲ್ ಆಗುತ್ತಿರುತ್ತವೆ. ಈ ವೈರಲ್ ಫೋಟೋಗಳಿಗೆ ಜಾಲತಾಣಗಳಲ್ಲಿ ಮಿಶ್ರ ಪ್ರತಿಕೆಯೆ ಬರುತ್ತವೆ. ಅದರಂತೆ ಇದೀಗ ಇಂಡಿಗೋ ಏರ್‌ಲೈನ್ಸ್ (Indigo Airlines) ಚಿತ್ರವು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದು ವಿಮಾನಯಾನ ಪ್ರಯಾಣಿಕರನ್ನು ಚಕಿತಗೊಳಿಸಿದೆ. ಅದು ಬ್ಯುಸಿನೆಸ್ ಕ್ಲಾಸ್ ಸೀಟ್‌ಗಳನ್ನು ಹೊಂದಿರದ ಇಂಡಿಗೋ ವಿಮಾನ ರಾಂಪ್ ಮೇಲೆ (Common ramp for founders and their funders) ಸ್ಥಾಪಕರು ಮತ್ತು ಅದರ ಹೂಡಿಕೆದಾರರಿಗೂ ಸಾಮಾನ್ಯ ರಾಂಪ್ ಎಂದು ಬರೆದಿರುವ ಫೋಟೋ ಟ್ವಿಟರ್ನಲ್ಲಿ (Twitter) ಸಾಕಷ್ಟು ವೈರಲ್ ಆಗಿದೆ. ತನ್ನ ಪ್ರಯಾಣಿಕರಲ್ಲಿ ಯಾವುದೇ ವರ್ಗ ವ್ಯತ್ಯಾಸವಿಲ್ಲ ಎಂಬ ಅರ್ಥ ನೀಡುವ ಸಂದೇಶ ಬರೆದಿದೆ.
ಇದನ್ನೂ ಓದಿ: Brand Bengaluru: ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಹೊಸ ಪ್ಲ್ಯಾನ್: ಸುರಂಗ ಮಾರ್ಗ ನಿರ್ಮಿಸಲು ಚಿಂತನೆ
ಈ ಚಿತ್ರವನ್ನು ಮೂಲತಃ ಟ್ವಿಟ್ಟರ್‌ನಲ್ಲಿ ಪೂಜಾ ಸಿಂಗ್ ಎಂಬವರು ಪೋಸ್ಟ್ ಮಾಡಿದ್ದಾರೆ. “peak Bengaluru moment spot the difference” ಪೀಕ್ ಬೆಂಗಳೂರು ಕ್ಷಣ. ಚಿತ್ರದಲ್ಲಿನ ವ್ಯತ್ಯಾಸವನ್ನು ಗುರುತಿಸಿ ಎಂದು ಟ್ವೀಟ್ ಮಾಡಿದ್ದಾರೆ. ಪೋಸ್ಟ್ ಅನ್ನು 41 ಸಾವಿರ ಜನ ನೋಡಿದ್ದು, 455 ಲೈಕ್‌ಗಳನ್ನು ಪಡೆದುಕೊಂಡಿದೆ.
ಈ ಚಿತ್ರಕ್ಕೆ ಹಲವು ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಅನೇಕರು ಸರಿಯಾದ ಪ್ರತಿಕ್ರೆಯೆ ನೀಡಿದರೇ ಇನ್ನು ಕೆಲವರು ಆಶ್ಚರ್ಯ ಮತ್ತು ನಗುವಿನ ಎಂಓಜಿ ಕಾಮೆಂಟ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ