
ನವದೆಹಲಿ, ಅಕ್ಟೋಬರ್ 19: ದೆಹಲಿಯಿಂದ ನಾಗಾಲ್ಯಾಂಡ್ ರಾಜಧಾನಿ ನಗರಿ ದಿಮಾಪುರ್ಗೆ (Dimapur) ಹೊರಡುತ್ತಿದ್ದ ಇಂಡಿಗೋ ವಿಮಾನದೊಳಗೆ (Indigo flight) ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ಗೆ ಬೆಂಕಿ ತಗುಲಿದ ಘಟನೆ ಬೆಳಕಿಗೆ ಬಂದಿದೆ. ಅದೃಷ್ಟವಶಾತ್, ವಿಮಾನದ ಸಿಬ್ಬಂದಿ ಜಾಗ್ರತೆಯಿಂದ ಪರಿಸ್ಥಿತಿ ನಿಭಾಯಿಸಿ, ದೊಡ್ಡ ಅನಾಹುತವಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದೆಹಲಿಯಿಂದ ದಿಮಾಪುರ್ ಮಾರ್ಗದಲ್ಲಿ ಓಡುವ ಇಂಡಿಗೋ ಏರ್ಲೈನ್ಸ್ನ 6ಇ 2107 ನಂಬರ್ನ ಫ್ಲೈಟ್ನಲ್ಲಿ ಈ ಅವಘಡವಾಗಿದೆ. ಅಂತಿಮವಾಗಿ ವಿಮಾನ ಹಾಗೂ ಅದರಲ್ಲಿರುವ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಏರ್ಲೈನ್ ಸಂಸ್ಥೆಯ ವಕ್ತಾರರೂ ಕೂಡ ಇದನ್ನು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ತೂತುಕುಡಿಯಲ್ಲಿ ಡಿಆರ್ಐ ಕಾರ್ಯಾಚರಣೆ; ಭಾರೀ ಮೊತ್ತದ ಚೀನೀ ಪಟಾಕಿಗಳು ಜಪ್ತಿ; ನಾಲ್ವರ ಬಂಧನ
‘ದೆಹಲಿಯಿಂದ ದಿಮಾಪುರ್ ಮಧ್ಯೆ ಆಪರೇಟ್ ಆಗುವ 6ಇ 2107 ಇಂಡಿಗೋ ಫ್ಲೈಟ್ 2026ರ ಅಕ್ಟೋಬರ್ 19ರಂದು ನಿಲ್ದಾಣಕ್ಕೆ ಮರಳಿ ಬಂದಿದೆ. ವಿಮಮಾನದ ಆನ್ಬೋರ್ಡ್ನ ಸೀಟ್ ಬ್ಯಾಕ್ ಪಾಕೆಟ್ನಲ್ಲಿ ಇರಿಸಲಾಗಿದ್ದ ಪ್ರಯಾಣಿಕರೊಬ್ಬರ ವೈಯಕ್ತಿಕ ಎಲೆಕ್ಟ್ರಾನಿಕ್ ಉಪಕರಣಕ್ಕೆ ಸಣ್ಣದಾಗಿ ಬೆಂಕಿ ತಗುಲಿದ್ದರಿಂದ ಫ್ಲೈಟ್ ಅನ್ನು ಹಿಂದಕ್ಕೆ ತರಲಾಯಿತು’ ಎಂದು ಇಂಡಿಗೋ ಏರ್ಲೈನ್ಸ್ ವಿಮಾನದ ವಕ್ತಾರರು ಹೇಳಿಕೆ ನಿಡಿದ್ದಾರೆ.
ಈ ಇಂಡಿಗೋ ಫ್ಲೈಟ್ ನವದೆಹಲಿಯಿಂದ ದಿಮಾಪುರ್ಗೆ ಹೊರಟಿತ್ತು. ವಿಮಾನ ಟೇಕಾಫ್ ಆಗುತ್ತಿರುವಂತೆಯೇ ಪವರ್ ಬ್ಯಾಂಕ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. ವಿಮಾನದ ಸಿಬ್ಬಂದಿ ಬಹಳ ಕ್ಷಿಪ್ರವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಪ್ರಮಾಣಿತ ಆಪರೇಟಿಂಗ್ ಕ್ರಮಗಳನ್ನು ಅನುಸರಿಸಿ, ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿಯನ್ನು ತಹಬದಿಗೆ ಬಂದಿದ್ದಾರೆ ಎಂದು ವಿಮಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ‘ನಮಕ್ ಹರಾಮ್’ಗಳ ಮತಗಳು ಬೇಕಿಲ್ಲ: ಬಿಹಾರದಲ್ಲಿ ಗಿರಿರಾಜ್ ಸಿಂಗ್ ಗುಡುಗು; ಮುಸ್ಲಿಮರನ್ನು ಕುಟುಕಿದ ಮಾಡಿದ ಕೇಂದ್ರ ಸಚಿವ
‘ಘಟೆನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲದಿರುವುದು ತಿಳಿದುಬಂದಿದೆ. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯವರು ಸುರಕ್ಷಿತವಾಗಿದ್ದಾರೆ. ವಿಮಾನದಲ್ಲಿ ಎಲ್ಲಾ ಅಗತ್ಯ ತಪಾಸಣೆ ನಡೆಸಿದ ಬಳಿಕ ವಿಮಾನ ಹಾರಾಟಕ್ಕೆ ಅನುಮತಿಸಲಾಯಿತು’ ಎಂದು ಸಂಸ್ಥೆಯು ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ