ಯಶಸ್ವಿ ಪುರುಷನ ಹಿಂದೆ ಮಹಿಳೆ; ಹೆಂಡತಿಯಿಂದ ಹಣ ಪಡೆದು ಸಕ್ಸಸ್ ಕಂಡ ಉದ್ಯಮಿಗಳಿವರು

| Updated By: ಸುಷ್ಮಾ ಚಕ್ರೆ

Updated on: Jan 10, 2023 | 1:30 PM

ಟ್ವಿಟ್ಟರ್​ ಬಳಕೆದಾರರು ಇತ್ತೀಚೆಗೆ ಕೆಲವು ಯಶಸ್ವಿ ಉದ್ಯಮಿಗಳನ್ನು ಹೈಲೈಟ್ ಮಾಡಿದ್ದಾರೆ. ಅವರು ತಮ್ಮ ಹೆಂಡತಿಯಿಂದ ಹಣವನ್ನು ತೆಗೆದುಕೊಂಡು ಆ ಹಣವನ್ನು ಹೂಡಿಕೆ ಮಾಡಿ, ಕೋಟ್ಯಧಿಪತಿಯಾಗಿದ್ದಾರೆ.

ಯಶಸ್ವಿ ಪುರುಷನ ಹಿಂದೆ ಮಹಿಳೆ; ಹೆಂಡತಿಯಿಂದ ಹಣ ಪಡೆದು ಸಕ್ಸಸ್ ಕಂಡ ಉದ್ಯಮಿಗಳಿವರು
ಇನ್ಫೋಸಿಸ್ ನಾರಾಯಣಮೂರ್ತಿ- ಓಲಾ ಸಂಸ್ಥೆಯ ಭವಿಷ್ ಅಗರ್​ವಾಲ್
Follow us on

ಓರ್ವ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬುದು ಹಳೆಯ ಕಾಲದಿಂದಲೂ ರೂಢಿಯಲ್ಲಿರುವ ಮಾತು. ಆದರೆ, ಅನಾದಿ ಕಾಲದಿಂದಲೂ ಪಿತೃಪ್ರಭುತ್ವ ಮತ್ತು ಪೂರ್ವಾಗ್ರಹಗಳಿಂದಾಗಿ ಮಹಿಳೆಯರ ಬಳಿ ಹಣಕಾಸಿನ ವಹಿವಾಟು ನಡೆಯುತ್ತಿರಲಿಲ್ಲ. ಪುರುಷ ಮನೆಯನ್ನು ನಡೆಸಬೇಕು, ಹೆಂಡತಿಗಿಂತ ಹೆಚ್ಚು ಸಂಪಾದಿಸಬೇಕು, ಹೆಂಡತಿ ಮನೆಯ ಕೆಲಸಗಳನ್ನು ನೋಡಿಕೊಳ್ಳಬೇಕು ಎಂಬುದು ಅಲಿಖಿತ ನಿಯಮವಾಗಿತ್ತು. ಆದರೆ, ಹೆಂಡತಿಯಿಂದ ಆರ್ಥಿಕ ಸಹಾಯ ಪಡೆದು, ಯಶಸ್ವಿ ಉದ್ಯಮಿಗಳಾಗಿರುವವರ (Successful Businessman) ಕತೆ ಇಲ್ಲಿದೆ.

ಇಂದಿನ ಆಧುನಿಕ ಯುಗದಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿಯುತ್ತಿದ್ದಾರೆ. ಕೆಲವೊಂದು ಕುಟುಂಬದಲ್ಲಿ ಗಂಡನಿಗಿಂತ ಹೆಂಡತಿಯೇ ಹೆಚ್ಚು ಹಣ ಸಂಪಾದಿಸುತ್ತಾಳೆ. ಇದೀಗ ಟ್ವಿಟ್ಟರ್​ ಬಳಕೆದಾರರು ಇತ್ತೀಚೆಗೆ ಕೆಲವು ಯಶಸ್ವಿ ಉದ್ಯಮಿಗಳನ್ನು ಹೈಲೈಟ್ ಮಾಡಿದ್ದಾರೆ. ಅವರು ತಮ್ಮ ಹೆಂಡತಿಯಿಂದ ಹಣವನ್ನು ತೆಗೆದುಕೊಂಡು ಆ ಹಣವನ್ನು ಹೂಡಿಕೆ ಮಾಡಿ, ಕೋಟ್ಯಧಿಪತಿಯಾಗಿದ್ದಾರೆ.


ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 2ರ ಸ್ಪರ್ಧಿ ಗಣೇಶ್ ಬಾಲಕೃಷ್ಣನ್ ಅವರ ಬಗ್ಗೆ ಟ್ವಿಟ್ಟರ್ ಬಳಕೆದಾರರಾದ ರಿಚಾ ಸಿಂಗ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ನೀವು ನಿಮ್ಮ ಹೆಂಡತಿಯ ಸಂಬಳದಿಂದ ಬದುಕುವುದನ್ನು ಸಮಾಜದಲ್ಲಿ ಹೇಗೆ ಕೀಳಾಗಿ ನೋಡಲಾಗುತ್ತದೆ ಎಂದು ಪ್ರಸ್ತಾಪಿಸಿದ್ದಾರೆ. ಫ್ಲಾಟ್‌ಹೆಡ್ಸ್‌ನ ಸಹ-ಸಂಸ್ಥಾಪಕರಾಗಿರುವ ಬಾಲಕೃಷ್ಣನ್ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ನನ್ನ ಪತ್ನಿ ಸಂಪಾದಿಸುತ್ತಾರೆ, ನಾನು ಆ ಹಣವನ್ನು ಖರ್ಚು ಮಾಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Rishi Sunak: ಹೆಮ್ಮೆಯಾಗುತ್ತಿದೆ; ಅಳಿಯ ರಿಷಿ ಸುನಕ್​ರನ್ನು ಅಭಿನಂದಿಸಿದ ನಾರಾಯಣ ಮೂರ್ತಿ

ಟ್ವಿಟರ್ ಬಳಕೆದಾರರು ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿ ತಮ್ಮ ಪತ್ನಿಯರಿಂದ ಹಣಕಾಸಿನ ನೆರವು ಪಡೆದ ಇಬ್ಬರು ಯಶಸ್ವಿ ಉದ್ಯಮಿಗಳಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಓಲಾ ಸಂಸ್ಥಾಪಕ ಭವಿಶ್ ಅಗರ್ವಾಲ್ ತಮ್ಮ ಹೆಂಡತಿಯಿಂದ ಆರ್ಥಿಕ ಸಹಾಯ ಪಡೆದು ಯಶಸ್ವಿ ಉದ್ಯಮಿಗಳಾದವರು.

ಎನ್​ಆರ್​ ನಾರಾಯಣ ಮೂರ್ತಿ ತಮ್ಮ ಮೊದಲ ಉದ್ಯಮ ವಿಫಲವಾದ ನಂತರ ತಮ್ಮ ಪತ್ನಿ ಸುಧಾ ಮೂರ್ತಿ ಅವರು ನೀಡಿದ ಅಲ್ಪ ಬಂಡವಾಳದಿಂದ ಇನ್ಫೋಸಿಸ್ ಆರಂಭಿಸಿದರು. ಇನ್ಫೋಸಿಸ್ ಆರಂಭಿಸಲು ಸುಧಾ ಮೂರ್ತಿ ಅವರು 1981ರಲ್ಲಿ ಪತಿಗೆ 10,000 ರೂ. ನೀಡಿದ್ದರು.

ಮಾಧ್ಯಮ ವರದಿಗಳ ಪ್ರಕಾರ, ಸುಧಾ ಮೂರ್ತಿ ಅವರು ನಾರಾಯಣ ಮೂರ್ತಿ ಅವರಿಗೆ 10,000 ರೂ. ಸಾಲ ನೀಡಲು ನಿರ್ಧರಿಸಿದ್ದರ ಬಗ್ಗೆ ಯಾವುದೇ ವಿಷಾದವನ್ನಾಗಲಿ, ಪಶ್ಚಾತ್ತಾಪವನ್ನಾಗಲಿ ಹೊಂದಿರಲಿಲ್ಲ. ನನ್ನ ಗಂಡ ವಿಫಲವಾದರೆ ಪರವಾಗಿಲ್ಲ. ಅವರು ಅದನ್ನು ಒಪ್ಪಿಕೊಂಡು ತಿದ್ದಿಕೊಳ್ಳಬಹುದು. ಆದರೆ, ನಾನೂ ಮಾಡಿದ್ದರೆ ಯಶಸ್ವಿಯಾಗುತ್ತಿದ್ದೆ ಎಂದು ವಿಷಾದಿಸುವುದು ಮತ್ತು ಪ್ರಯತ್ನವನ್ನೇ ಮಾಡದಿರುವುದು ದೊಡ್ಡ ತಪ್ಪು ಎಂದು ಸುಧಾ ಮೂರ್ತಿ ಮನಿ ಕಂಟ್ರೋಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ: ಯಾರೂ ಕರೆಯದ ಹೆಸರಲ್ಲಿ ಪುನೀತ್ ಅವರನ್ನು ಕರೀತಿದ್ರು ಸುಧಾ ಮೂರ್ತಿ; ಏನದು?

ಹಾಗೇ, ಓಲಾ ಸಂಸ್ಥಾಪಕ ಭವಿಶ್ ಅಗರ್​ವಾಲ್ ತಮ್ಮ ಪತ್ನಿ ರಾಜಲಕ್ಷ್ಮಿ ತಮ್ಮ ಆರಂಭಿಕ ದಿನಗಳಿಂದಲೂ ಆರ್ಥಿಕವಾಗಿ ಬೆಂಬಲ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಭವಿಷ್ ಅವರ ಪತ್ನಿ ಆರಂಭಿಕ ದಿನಗಳಿಂದಲೂ ಅವರಿಗೆ ಆರ್ಥಿಕವಾಗಿ ಬೆಂಬಲ ನೀಡಿದ್ದಾರೆ. ಓಲಾ ಇನ್ನೂ ಯುವ ಸ್ಟಾರ್ಟ್ಅಪ್ ಆಗಿದ್ದಾಗ ಕ್ಯಾಬ್ ಸರ್ವಿಸ್ ನೀಡಲು ಅವರು ತಮ್ಮ ಕಾರನ್ನು ಗಂಡನಿಗೆ ನೀಡುತ್ತಿದ್ದರು ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ.

ಹಿಂದಿ ಚಲನಚಿತ್ರ ನಟ ಪಂಕಜ್ ತ್ರಿಪಾಠಿ ಕೂಡ ತಮ್ಮ ಕೆರಿಯರ್​​ನಲ್ಲಿ ಯಶಸ್ವಿಯಾಗದೆ ಹೆಣಗಾಡುತ್ತಿರುವ ಸಮಯದಲ್ಲಿ ತಮ್ಮ ಪತ್ನಿ ಮೃದುಲಾ ಮನೆಯ ಆರ್ಥಿಕತೆಯನ್ನು ಹೇಗೆ ನೋಡಿಕೊಂಡರು ಎಂಬುದರ ಕುರಿತು ಬಹಿರಂಗವಾಗಿ ಮಾತನಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ