Dharwad: ಅನುಮಾನದ ಗಂಡ: ಬೇಸತ್ತ ಹೆಂಡತಿ ಮಕ್ಕಳು ಆತ್ಮಹತ್ಯೆ

ಜಿಲ್ಲೆಯ ಬ್ಯಾಹಟ್ಟಿ ಗ್ರಾಮದಲ್ಲಿ ಗಂಡನ ಅನುಮಾನಕ್ಕೆ ಬೇಸತ್ತು ತಾಯಿ ಮಗಳು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಅನುಮಾನಕ್ಕೆ ಎರಡು ಜೀವಗಳು ಬಲಿಯಾಗಿವೆ.

Dharwad: ಅನುಮಾನದ ಗಂಡ: ಬೇಸತ್ತ ಹೆಂಡತಿ ಮಕ್ಕಳು ಆತ್ಮಹತ್ಯೆ
ಸಂಬಂಧಿಕರ ಆಕ್ರಂಧನ, ಗಂಡ ಮಾಬುಸಾಬ್
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 07, 2023 | 11:38 AM

ಧಾರವಾಡ: ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಕೆರೆಯಲ್ಲಿ ತಾಯಿ ಮಕ್ತುಂಬಿ (38),ಮಗಳು ಸೈನಾಜ್ ( 16) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು(ಜ.6) ಕೆರೆಯಲ್ಲಿ ಶವ ಪತ್ತೆಯಾಗಿವೆ. ಶವ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ತಾಯಿ ಮಗಳನ್ನ ಕಳೆದುಕೊಂಡು‌ ಸಂಭಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇಬ್ಬರ ಸಾವಿಗೆ ಮಕ್ತುಂಬಿ ಗಂಡನೇ ಕಾರಣ, ಯಾವಾಗಲೂ ಅನುಮಾನ ಪಡುತ್ತಿದ್ದ, ಅವನೇ ಕೊಲೆ ಮಾಡಿ ಕೆರೆಗೆ ಬೀಸಾಕಿದ್ದಾನೆ ಎಂದು ಮಕ್ತುಂಬಿ ಸಂಭಂದಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಬುಸಾಬ್ ಹಾಗೂ ಮಕ್ತುಂಬಿ ಕಳೆದ 20 ವರ್ಷಗಳ ಹಿಂದೆಯೇ ಮದುವೆಯಾಗಿದ್ದರು. ಮದುವೆ ಆದ ದಿನದಿಂದಲೇ ಮಾಬುಸಾಬ್ ತನ್ನ ಹೆಂಡತಿ ಮೇಲೆ ಅನುಮಾನ ಪಡುತಿದ್ದನಂತೆ. ಹೆಂಡತಿ ಅಷ್ಟೆ ಅಲ್ಲ ತನ್ನ ಮಕ್ಕಳ ಮೇಲೂ ಆತನಿಗೆ ಅನುಮಾನ.ಎಲ್ಲಾದರೂ ಹೋದರೆ ನಿತ್ಯ ಕಿರಿಕಿರಿ ನೀಡುತ್ತಿದ್ದ. ಹೊಲದಲ್ಲಿ ಕೆಲಸ‌ ಮಾಡಕೊಂಡಿದ್ದ ಮಾಬುಸಾಬ್ ತನ್ನ ಹೆಂಡತಿ ಮಕ್ಕಳು ಮನೆಯಿಂದ ಹೊರಹೋದರು ಅನುಮಾನದ ದೃಷ್ಟಿಯಿಂದ ನೋಡಿ ಒಂದಲ್ಲ ಒಂದು ಖ್ಯಾತೆ ತಗೆದು ನಿತ್ಯವೂ ಮನೆಯಲ್ಲಿ ಜಗಳ ಮಾಡುತ್ತಿದ್ದನಂತೆ‌. ಇದು ವಿಕೋಪಕ್ಕೆ ಹೋಗಿ ಕಳೆದ ಮೂರು ದಿನಗಳ ಹಿಂದೆ ಮನೆಯಲ್ಲಿ ದೊಡ್ಡ ಗಲಾಟೆಯಾಗಿದೆ. ಇದರಿಂದ ಬೇಸತ್ತು ತಾಯಿ ಹಾಗೂ ಮಗಳು ಸೈನಾಜ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಒಂದೇ ಹಗ್ಗದಲ್ಲಿ ಕುತ್ತಿಗೆ ಕಟ್ಟಿಕೊಂಡು ಗ್ರಾಮದ ಹೊರವಲಯದಲ್ಲಿರುವ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯರು ಇಂದು ಶವ ನೋಡಿದ ನಂತರವೇ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಕಳೆದ‌‌‌ ಮೂರು ದಿನಗಳಿಂದ ಗಂಡ ಮಾಬುಸಾಬ್ ಹೆಂಡತಿ‌‌ ಮಕ್ಕಳನ್ನ ಹುಡಕಾಡಿದ್ದಾನೆ. ಪೊಲೀಸರಿಗೂ ಮೌಖಿಕವಾಗಿ ತಿಳಿಸಿದ್ದಾನೆ. ಇಂದು‌ ಸ್ಥಳೀಯರು ಮಾಹಿತಿ ನೀಡಿದ ಬಳಿಕ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಹೋಗಿ ಶವ ಹೊರ ತಗಿದಿದ್ದಾರೆ. ಬ್ಯಾಹಟ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಮಕ್ತುಂಬಿ ಸಂಬಂಧಿಕರು ಗಂಡ ಮಾಬುಸಾಬ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಬಿ ರಿಪೋರ್ಟ್​ನಲ್ಲಿ ಉಲ್ಲೇಖಿಸಿರುವ ಸಾಕ್ಷ್ಯಗಳ ಹಾಜರಿಗೆ ಕೋರ್ಟ್ ಸೂಚನೆ

ಒಟ್ಟಾರೆ ಅನುಮಾನ ಎನ್ನುವ ಭೂತಕ್ಕೆ ಎರಡು ಜೀವಗಳು ಬಲಿಯಾಗಿವೆ. ಹೆಂಡತಿ ಅಲ್ಲದೆ ಮಗಳ‌‌ ಮೇಲೂ ಅನುಮಾನ ಪಡುತ್ತಿದ್ದವ, ಇದೀಗ ಎಲ್ಲರೂ ಸರಿ‌ ಇದ್ವಿ ಎನ್ನುವ ನಾಟಕ ಮಾಡುತ್ತಿದ್ದಾನೆ. ಮೃತ ಮಕ್ತುಂಬಿ ಸಂಭಂಧಿಕರು ಇದಕ್ಕೆಲ್ಲ ಗಂಡನೇ ಕಾರಣ ಎನ್ನುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವೇ ತಾಯಿ ಮಗಳ ಸಾವಿನ ಅಸಲಿ ಸತ್ಯ ಬಯಲಾಗಬೇಕಾಗಿದೆ.

ವರದಿ: ಶಿವಕುಮಾರ್ ಪತ್ತಾರ ಟಿವಿ9 ಹುಬ್ಬಳ್ಳಿ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ  ಮಾಡಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು