INS Arihant ಐಎನ್‌ಎಸ್ ಅರಿಹಂತ್‌ನಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ
ಕ್ಷಿಪಣಿಯನ್ನು ಪೂರ್ವನಿರ್ಧರಿತ ವ್ಯಾಪ್ತಿಯೊಂದಿಗೆ ಪರೀಕ್ಷಿಸಲಾಯಿತು. ಹೆಚ್ಚಿನ ನಿಖರತೆಯೊಂದಿಗೆ ಬಂಗಾಳ ಕೊಲ್ಲಿಯಲ್ಲಿರುವ ಗುರಿ ತಲುಪಿದೆ.
ಭಾರತದ ಸ್ಟ್ರಾಟೆಜಿಕ್ ಸ್ಟ್ರೈಕ್ ಪರಮಾಣು ಜಲಾಂತರ್ಗಾಮಿ ಐಎನ್‌ಎಸ್ ಅರಿಹಂತ್ (INS Arihant) ಬ್ಯಾಲಿಸ್ಟಿಕ್ ಕ್ಷಿಪಣಿಯಾದ ಸಬ್‌ಮರೀನ್ ಲಾಂಚ್ಡ್ ಬ್ಯಾಲಿಸ್ಟಿಕ್ ಮಿಸೈಲ್ (SLBM) ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಶಸ್ತ್ರಾಸ್ತ್ರ ವ್ಯವಸ್ಥೆಯ ಕಾರ್ಯಾಚರಣೆ ಮತ್ತು ತಾಂತ್ರಿಕ ನಿಯತಾಂಕಗಳನ್ನು ಮೌಲ್ಯೀಕರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಕ್ಷಿಪಣಿಯನ್ನು ಪೂರ್ವನಿರ್ಧರಿತ ವ್ಯಾಪ್ತಿಯೊಂದಿಗೆ ಪರೀಕ್ಷಿಸಲಾಯಿತು. ಹೆಚ್ಚಿನ ನಿಖರತೆಯೊಂದಿಗೆ ಬಂಗಾಳ ಕೊಲ್ಲಿಯಲ್ಲಿರುವ ಗುರಿ ತಲುಪಿದೆ. ಯಶಸ್ವಿ ಉಡಾವಣೆಯು ಭಾರತದ ಪರಮಾಣು ನಿರೋಧಕ ಸಾಮರ್ಥ್ಯದ ನಿರ್ಣಾಯಕ ಅಂಶವಾಗಿರುವ ಎಸ್‌ಎಸ್‌ಬಿಎನ್ ಯೋಜನೆ ಮತ್ತು ಸಿಬ್ಬಂದಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಸಚಿವಾಲಯ ಹೇಳಿದೆ. “ಕ್ಷಿಪಣಿಯನ್ನು ಇಂದು (ಶುಕ್ರವಾರ) ಪೂರ್ವನಿರ್ಧರಿತ ವ್ಯಾಪ್ತಿಯಲ್ಲಿ ಪರೀಕ್ಷಿಸಲಾಯಿತು ಮತ್ತು ಇದು ಹೆಚ್ಚಿನ ನಿಖರತೆಯೊಂದಿಗೆ ಬಂಗಾಳ ಕೊಲ್ಲಿಯಲ್ಲಿ ಗುರಿ ತಲುಪಿತು ಎಂದು ಹೇಳಿಕೆಯಲ್ಲಿ ತಿಳಿಸಿದೆ.
“ಐಎನ್‌ಎಸ್ ಅರಿಹಂತ್‌ನಿಂದ ಎಸ್‌ಎಲ್‌ಬಿಎಂನ ಯಶಸ್ವಿ ಉಡಾವಣೆಯು ಸಿಬ್ಬಂದಿ ಸಾಮರ್ಥ್ಯವನ್ನು ಸಾಬೀತುಪಡಿಸಲು ಮತ್ತು SSBN ಕಾರ್ಯಕ್ರಮವನ್ನು ಮೌಲ್ಯೀಕರಿಸಲು ಮಹತ್ವದ್ದಾಗಿದೆ. ಇದು ಭಾರತದ ಪರಮಾಣು ನಿರೋಧಕ ಸಾಮರ್ಥ್ಯದ ಪ್ರಮುಖ ಅಂಶವಾಗಿದೆ ಎಂದು ಹೇಳಿಕೆ ತಿಳಿಸಿದೆ.
Submarine Launched Ballistic Missile by nuclear submarine INS Arihant successful. The missile was today tested to a predetermined range & it impacted the target area in the Bay of Bengal with high accuracy, validating all operational and technological parameters: Defence Ministry pic.twitter.com/rleg4Q4ehJ
— ANI (@ANI) October 14, 2022
ಸಚಿವಾಲಯದ ಪ್ರಕಾರ, ಉಡಾವಣೆಯು “ವಿಶ್ವಾಸಾರ್ಹ ಕನಿಷ್ಠ ತಡೆ”ಯನ್ನು ಹೊಂದಿದೆ, ಇದು ಭಾರತದ “ನೋ ಫಸ್ಟ್ ಯೂಸ್” ನೀತಿಗೆ ಅನುಗುಣವಾಗಿದೆ.
ಐಎನ್ಎಸ್ ಅರಿಹಂತ್ ಭಾರತದ ಮೊದಲ ಸ್ವದೇಶಿ ಪರಮಾಣು ಜಲಾಂತರ್ಗಾಮಿಯಾಗಿದೆ. ಇದು ಅರಿಹಂತ್-ವರ್ಗದ ಪರಮಾಣು-ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳಲ್ಲಿ ಪ್ರಮುಖವಾಗಿದ್ದು, ಇದನ್ನು 2009 ರಲ್ಲಿ ಪ್ರಾರಂಭಿಸಲಾಯಿತು. ಇದು ರಷ್ಯಾದ ಅಕುಲಾ-1 ವರ್ಗದ ಜಲಾಂತರ್ಗಾಮಿ ನೌಕೆಯನ್ನು ಆಧರಿಸಿದೆ. ಅರಿಹಂತ್ ಭಾರತೀಯ ನೌಕಾಪಡೆಗಾಗಿ ಅಭಿವೃದ್ಧಿಪಡಿಸಿದ ಪರಮಾಣು-ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳ ಒಂದು ವರ್ಗವಾಗಿದೆ. ಸಮುದ್ರ ಪ್ರಯೋಗಗಳ ಸರಣಿಯ ನಂತರ ಇದನ್ನು 2016 ರಲ್ಲಿ ನಿಯೋಜಿಸಲಾಯಿತು. . ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯ ರಾಷ್ಟ್ರಗಳಲ್ಲಿರದ ದೇಶವೊಂದು ನಿರ್ಮಿಸಿದ ಮೊದಲ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆ ಆಗಿದೆ ಅರಿಹಂತ್.