ತಿರುಪತಿಯ ವಕುಳಾಮಾತೆ ದೇಗುಲದಲ್ಲಿ ಎಂದೂ ಸಿಗದ ಚಾರಿತ್ರಿಕ ಶಾಸನ ಪತ್ತೆ
ತಿರುಪತಿ: ಇಲ್ಲಿನ ಪೇರೂರು ವಕುಳಾಮಾತ ದೇವಾಲಯದಲ್ಲಿ ಪುರಾತನ ಕಾಲದ ಐತಿಹಾಸಿಕ ಶಾಸನ ಪತ್ತೆಯಾಗಿದೆ. ಸಿಕ್ಕಿರೋ ಶಾಸನ ಸುಮಾರು 1101ನೇ ಇಸ್ವಿಯಷ್ಟು ಪುರಾತನವಾದದ್ದು ಎಂದು ಪುರಾತತ್ವ ಇಲಾಖೆ ಗುರುತಿಸಿದೆ. ವಿಷ್ಣು ಮೂರ್ತಿ ದೇವಾಲಯ, ದೇವಿಯ ದೇವಾಲಯ ಇಲ್ಲಿ ಇರೋದಾಗಿ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆಯಂತೆ. ಟಿಟಿಡಿಗೆ ಇಲ್ಲಿಯವರೆಗೆ ವಕುಳಾಮಾತ ದೇವಾಲಯಕ್ಕೆ ಸಂಬಂಧಿಸಿ ಎಂದೂ ಸಿಗದ ಚಾರಿತ್ರಿಕ ಆಧಾರ ಈ ಶಾಸನ ಎನ್ನಲಾಗುತ್ತಿದೆ. ಬಂಡಗಲ್ಲಿನ ಮೇಲೆ ದೇವಾಲಯದ ಕೆಲ ಸಂಗತಿಗಳ ಬಗ್ಗೆ ಬರೆಯಲಾಗಿರೋ ಶಾಸನ ಇದಾಗಿದ್ದು, ಶಾಸನದ ಬಗ್ಗೆ ಪುರಾತತ್ವ ಇಲಾಖೆ […]
Follow us on
ತಿರುಪತಿ: ಇಲ್ಲಿನ ಪೇರೂರು ವಕುಳಾಮಾತ ದೇವಾಲಯದಲ್ಲಿ ಪುರಾತನ ಕಾಲದ ಐತಿಹಾಸಿಕ ಶಾಸನ ಪತ್ತೆಯಾಗಿದೆ. ಸಿಕ್ಕಿರೋ ಶಾಸನ ಸುಮಾರು 1101ನೇ ಇಸ್ವಿಯಷ್ಟು ಪುರಾತನವಾದದ್ದು ಎಂದು ಪುರಾತತ್ವ ಇಲಾಖೆ ಗುರುತಿಸಿದೆ.
ವಿಷ್ಣು ಮೂರ್ತಿ ದೇವಾಲಯ, ದೇವಿಯ ದೇವಾಲಯ ಇಲ್ಲಿ ಇರೋದಾಗಿ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆಯಂತೆ. ಟಿಟಿಡಿಗೆ ಇಲ್ಲಿಯವರೆಗೆ ವಕುಳಾಮಾತ ದೇವಾಲಯಕ್ಕೆ ಸಂಬಂಧಿಸಿ ಎಂದೂ ಸಿಗದ ಚಾರಿತ್ರಿಕ ಆಧಾರ ಈ ಶಾಸನ ಎನ್ನಲಾಗುತ್ತಿದೆ. ಬಂಡಗಲ್ಲಿನ ಮೇಲೆ ದೇವಾಲಯದ ಕೆಲ ಸಂಗತಿಗಳ ಬಗ್ಗೆ ಬರೆಯಲಾಗಿರೋ ಶಾಸನ ಇದಾಗಿದ್ದು, ಶಾಸನದ ಬಗ್ಗೆ ಪುರಾತತ್ವ ಇಲಾಖೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದೆ.