TV9 Live ರಾಮ ಮಂದಿರ ಭೂಮಿ ಪೂಜೆಗೆ ಪ್ರಧಾನಿ ಮೋದಿ ಆಗಮನ, ಹನುಮನಿಗೆ ಪ್ರಥಮ ನಮನ
[lazy-load-videos-and-sticky-control id=”jdJoOhqCipA”] ರಾಮ ಮಂದಿರದ ನಿರ್ಮಾಣ ಆರಂಭಗೊಳ್ಳುವ ಶುಭ ಘಳಿಗೆ ಬಂದೇ ಬಿಟ್ಟಿತು. ಭೂಮಿ ಪೂಜೆ ನೆರವೇರಿಸಲು ಇಂದು ದೆಹಲಿಯಿಂದ ಅಯೋಧ್ಯೆಗೆ ಆಗಮಿಸಿದ ಪ್ರಧಾನಿ ಮೋದಿ ಮೊದಲು ಇತಿಹಾಸ ಪ್ರಸಿದ್ಧ ಹನುಮಾನ್ ಗಢಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದಾದ ಬಳಿಕೆ ಪ್ರಧಾನಿಗೆ ದೇವಸ್ಥಾನದ ಪ್ರಧಾನ ಅರ್ಚಕರು ಬೆಳ್ಳಿ ಮುಕುಟ ಪ್ರದಾನ ಮಾಡಿದರು. 10ನೇ ಶತಮಾನದ ಈ ಪುರಾತನ ದೇಗುಲದಲ್ಲಿ ರಾಮ ಬಂಟನಿಗೆ ವಂದನೆ ಸಲ್ಲಿಸಿದ ನಂತರ ಪ್ರಧಾನಿ ಪೂಜಾ ಸ್ಥಳಕ್ಕೆ ತೆರಳಿದರು. ಇನ್ನು ಪೂಜಾ ಸ್ಥಳದಲ್ಲಿ ದೇಶದ […]
[lazy-load-videos-and-sticky-control id=”jdJoOhqCipA”]
ರಾಮ ಮಂದಿರದ ನಿರ್ಮಾಣ ಆರಂಭಗೊಳ್ಳುವ ಶುಭ ಘಳಿಗೆ ಬಂದೇ ಬಿಟ್ಟಿತು.
ಭೂಮಿ ಪೂಜೆ ನೆರವೇರಿಸಲು ಇಂದು ದೆಹಲಿಯಿಂದ ಅಯೋಧ್ಯೆಗೆ ಆಗಮಿಸಿದ ಪ್ರಧಾನಿ ಮೋದಿ ಮೊದಲು ಇತಿಹಾಸ ಪ್ರಸಿದ್ಧ ಹನುಮಾನ್ ಗಢಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದಾದ ಬಳಿಕೆ ಪ್ರಧಾನಿಗೆ ದೇವಸ್ಥಾನದ ಪ್ರಧಾನ ಅರ್ಚಕರು ಬೆಳ್ಳಿ ಮುಕುಟ ಪ್ರದಾನ ಮಾಡಿದರು.
10ನೇ ಶತಮಾನದ ಈ ಪುರಾತನ ದೇಗುಲದಲ್ಲಿ ರಾಮ ಬಂಟನಿಗೆ ವಂದನೆ ಸಲ್ಲಿಸಿದ ನಂತರ ಪ್ರಧಾನಿ ಪೂಜಾ ಸ್ಥಳಕ್ಕೆ ತೆರಳಿದರು. ಇನ್ನು ಪೂಜಾ ಸ್ಥಳದಲ್ಲಿ ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಾಧು, ಸಂತರು ಹಾಗೂ ಸ್ವಾಮೀಜಿಗಳು ಸಹ ಉಪಸ್ಥಿತರಿದ್ದರು. ಅದರಲ್ಲಿ ರಾಜ್ಯದ ಪ್ರತಿಷ್ಠಿತ ಆದಿಚುಂಚನಗಿರಿ ಮಠದ ಮಠಾಧೀಶರಾದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಸಹ ಉಪಸ್ಥಿತರಿದ್ದರು.
Published On - 11:49 am, Wed, 5 August 20