ನವದೆಹಲಿ: ವಿಶ್ವ ಪ್ರಾಣಿಗಳ ದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮನೆಯ ಹೊಸ ನಾಯಿಮರಿ ನೂರಿಯನ್ನು ಪರಿಚಯಿಸಿದ್ದರು. ಗೋವಾ ಪ್ರವಾಸದಿಂದ ಬರುವಾಗ ಗೋವಾದ ವಿಶೇಷ ತಳಿಯ ನಾಯಿಮರಿಯನ್ನು ರಾಹುಲ್ ತಮ್ಮ ತಾಯಿ ಸೋನಿಯಾ ಗಾಂಧಿಗೆ ಸರ್ಪ್ರೈಸ್ ಉಡುಗೊರೆಯಾಗಿ ತಂದಿದ್ದರು. ಆದರೆ, ಆ ನಾಯಿಮರಿಗೆ ನೂರಿ ಎಂದು ಹೆಸರಿಟ್ಟಿದ್ದಕ್ಕೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖಂಡ ಮೊಹಮ್ಮದ್ ಫರ್ಹಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಿಮರಿಗೆ ನೂರಿ ಎಂದು ಹೆಸರಿಡುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಗೋವಾದ ವಿಶೇಷ ತಳಿಯಾದ 3 ತಿಂಗಳ ವಯಸ್ಸಿನ ಜಾಕ್ ರಸೆಲ್ ಟೆರಿಯರ್ ನಾಯಿಮರಿಯನ್ನು ರಾಹುಲ್ ಗಾಂಧಿ ತಮ್ಮ ಮನೆಗೆ ತಂದಿದ್ದರು. ಈ ‘ನೂರಿ’ಯನ್ನು ನೋಡಿ ಸೋನಿಯಾ ಗಾಂಧಿ ಕೂಡ ಅಚ್ಚರಿಯಿಂದ, ಎತ್ತಿ ಮುದ್ದಾಡಿದ ವಿಡಿಯೋವನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದರು.
A little surprise for Maa, RG’s Li’l pup Noorie! Thanks our leader @RahulGandhi <3
World Animal Welfare Day: Our street dogs struggle daily for food. Street dogs suffer negligence from society and face abuse from all corners. Let’s join our hands and provide them with a… pic.twitter.com/BzLxFM3TRX
— Annie Thakur (she/her) (@GoneGirlAnnie) October 4, 2023
ಇದನ್ನೂ ಓದಿ: ಸೋನಿಯಾ ಗಾಂಧಿಗೆ ಕ್ಯೂಟ್ ಗಿಫ್ಟ್; ಕುಟುಂಬದ ಹೊಸ ಸದಸ್ಯೆಯನ್ನು ಪರಿಚಯಿಸಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ ತಮ್ಮ ಮನೆಯ ನಾಯಿಮರಿಗೆ ‘ನೂರಿ’ ಎಂದು ಹೆಸರಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಐಎಂಐಎಂ ನಾಯಕ ಮೊಹಮ್ಮದ್ ಫರ್ಹಾನ್, ‘ರಾಹುಲ್ ಗಾಂಧಿ ತಮ್ಮ ಮುದ್ದಿನ ನಾಯಿಗೆ ‘ನೂರಿ’ ಎಂದು ಹೆಸರಿಟ್ಟಿರುವುದು ಸರಿಯಲ್ಲ. ರಾಹುಲ್ ಗಾಂಧಿ ಕ್ರಮ ಖಂಡನೀಯ ಮತ್ತು ನಾಚಿಕೆಗೇಡಿನ ಸಂಗತಿ. ಅದೇ ಹೆಸರನ್ನು ಹೊಂದಿರುವ ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾಡಿದ ಅವಮಾನವಿದು. ಇದು ಮುಸ್ಲಿಂ ಹೆಣ್ಣುಮಕ್ಕಳು ಮತ್ತು ಮುಸ್ಲಿಂ ಸಮುದಾಯದ ಬಗ್ಗೆ ಗಾಂಧಿ ಕುಟುಂಬ ಯಾವ ರೀತಿಯ ಗೌರವ ಹೊಂದಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ