ಸೋನಿಯಾ ಗಾಂಧಿಗೆ ಕ್ಯೂಟ್ ಗಿಫ್ಟ್; ಕುಟುಂಬದ ಹೊಸ ಸದಸ್ಯೆಯನ್ನು ಪರಿಚಯಿಸಿದ ರಾಹುಲ್ ಗಾಂಧಿ

Rahul Gandhi: ಇದು ನಮ್ಮ ಅಮ್ಮ ಸೋನಿಯಾ ಗಾಂಧಿಗೆ(Sonia Gandhi) ಉಡುಗೊರೆ, ಇದು ಗೋವಾದಿಂದ ವಿಮಾನದಲ್ಲಿ ಇಲ್ಲಿಗೆ ಬಂದಿದೆ ಎಂದು ರಾಹುಲ್ ಹೇಳಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ  ರಾಹುಲ್ ಗಾಂಧಿ ಅವರು ತಮ್ಮ ಇತ್ತೀಚಿನ ಗೋವಾ ಪ್ರವಾಸವನ್ನು ಹಂಚಿಕೊಂಡಿದ್ದಾರೆ.ಲ್ಲಿ ಅವರು ನೂರಿಯನ್ನು ಪಡೆದ ಗೋವಾ ಕುಟುಂಬವನ್ನು ಭೇಟಿಯಾದರು.

ಸೋನಿಯಾ ಗಾಂಧಿಗೆ ಕ್ಯೂಟ್ ಗಿಫ್ಟ್; ಕುಟುಂಬದ ಹೊಸ ಸದಸ್ಯೆಯನ್ನು ಪರಿಚಯಿಸಿದ ರಾಹುಲ್ ಗಾಂಧಿ
ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ ರಾಹುಲ್ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on: Oct 04, 2023 | 12:44 PM

ದೆಹಲಿ ಅಕ್ಟೋಬರ್ 04: ವಿಶ್ವ ಪ್ರಾಣಿ ದಿನದ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಬುಧವಾರ ತಮ್ಮ ಹೊಸ ಕುಟುಂಬದ ಸದಸ್ಯರನ್ನು ಪರಿಚಯಿಸಿದ್ದಾರೆ. ಆ ಹೊಸ ಸದಸ್ಯೆ ಹೆಸರು ನೂರಿ (Noorie),ಮುದ್ದಾಗಿರುವ ನಾಯಿಮರಿ. ಇದು ನಮ್ಮ ಅಮ್ಮ ಸೋನಿಯಾ ಗಾಂಧಿಗೆ(Sonia Gandhi) ಉಡುಗೊರೆ, ಇದು ಗೋವಾದಿಂದ ವಿಮಾನದಲ್ಲಿ ಇಲ್ಲಿಗೆ ಬಂದಿದೆ ಎಂದು ರಾಹುಲ್ ಹೇಳಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ  ರಾಹುಲ್ ಗಾಂಧಿ ಅವರು ತಮ್ಮ ಇತ್ತೀಚಿನ ಗೋವಾ ಪ್ರವಾಸವನ್ನು ಹಂಚಿಕೊಂಡಿದ್ದಾರೆ .ಅಲ್ಲಿ ಅವರು ನೂರಿಯನ್ನು ಪಡೆದ ಗೋವಾ ಕುಟುಂಬವನ್ನು ಭೇಟಿಯಾದರು. ನಂತರ ಅವರು ನವದೆಹಲಿಯಲ್ಲಿರುವ ಅವರ ಮನೆಗೆ ಬಂದಿದ್ದು ಸೋನಿಯಾ ಗಾಂಧಿಯವರಿಗೆ ಉಡುಗೊರೆಯನ್ನು ನೀಡಿ ಅಚ್ಚರಿಗೊಳಿಸಿದರು. ದಾರಿಯಲ್ಲಿ ಮೆಟ್ರೋ ರೈಡ್ ಕೂಡ ಮಾಡಿದ್ದು ವಿಡಿಯೊದಲ್ಲಿ ಕಾಣುತ್ತಿದೆ.

ಗೋವಾ ಪ್ರವಾಸವು ಆಗಸ್ಟ್‌ನಲ್ಲಿ ನಡೆದಿತ್ತು. ಈ ವೇಳೆ ರಾಹುಲ್ ಗಾಂಧಿಗೆ ಜ್ಯಾಕ್ ರಸೆಲ್ ಟೆರಿಯರ್‌ನ ಸೊಗಸಾದ ತಳಿ ಸಿಕ್ಕಿದೆ ಎಂದು ವರದಿಯಾಗಿದೆ. ಗೋವಾ ಮೂಲದ ನಾಯಿ ಸಾಕಣೆದಾರರಾದ ಶರ್ವಾಣಿ ಪಿತ್ರೆ ಮತ್ತು ಪತಿ ಸ್ಟಾನ್ಲಿ ಬ್ರಗಾಂಕಾ ಅವರನ್ನು ರಾಹುಲ್ ಗಾಂಧಿ ಭೇಟಿಯಾಗಿದ್ದರು. ಜಾಕ್ ರಸ್ಸೆಲ್ ಟೆರಿಯರ್‌ಗಳ ಲಭ್ಯತೆಯ ಬಗ್ಗೆ ವಿಚಾರಿಸಲು ರಾಹುಲ್ ಗಾಂಧಿಯವರ ಕಚೇರಿಯಿಂದ ತಮಗೆ ಕರೆ ಬಂದಿತ್ತು ಎಂದು ಅವರು ಈ ಹಿಂದೆ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ತಮ್ಮ ಮೆಟ್ರೋ ರೈಡ್‌ನಲ್ಲಿ, ರಾಹುಲ್ ಗಾಂಧಿಯವರು ಸಹ ಪ್ರಯಾಣಿಕರಾದ ಮಹಿಳೆಯೊಂದಿಗೆ ಮಾತನಾಡಿದ್ದು, ಆಕೆ  ವಿಡಿಯೊ ಕರೆ ಮೂಲಕ ಸ್ನೇಹಿತೆ ಜತೆ ಮಾತನಾಡಿದಾಗ, ರಾಹುಲ್ ಕೂಡಾ ಅವರೊಂದಿಗೆ ಸಂವಹನ ನಡೆಸುತ್ತಿರುವುದು ಕಾಣುತ್ತದೆ.

ಇದನ್ನೂ ಓದಿ: ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ ರಾಹುಲ್ ಗಾಂಧಿ; ಪ್ರಾರ್ಥನೆ ಸಲ್ಲಿಸಿ ಲಂಗರ್ ಸೇವೆ ಮಾಡಿದ ಕಾಂಗ್ರೆಸ್ ಸಂಸದ

ಇದಾದ ನಂತರ ರಾಹುಲ್ ಗಾಂಧಿ ಮನೆಗೆ ತಲುಪುತ್ತಿದ್ದಂತೆ, ನೂರಿಯನ್ನು ಹೊರಗೆ ಇರಿಸಿ ಉಡುಗೊರೆಯನ್ನು ನೋಡಲು ತಮ್ಮ ತಾಯಿ ಸೋನಿಯಾ ಗಾಂಧಿಯನ್ನು ಕೇಳಿದರು. ನೂರಿ ಎರಡು ಮೂರು ಗಂಟೆ ಪ್ರಯಾಣ ಮಾಡಿ ಬಂದಿದ್ದಾಳೆ ಎಂದು ಸೋನಿಯಾ ಗಾಂಧಿಗೆ ರಾಹುಲ್ ಗಾಂಧಿ ಹೇಳಿದಾಗ ಅಮ್ಮ ಸೋನಿಯಾ ಹೊರಗೆ ಬಂದು ನಾಯಿಮರಿಯನ್ನು ಎತ್ತಿಕೊಂಡಿದ್ದಾರೆ.  ಇದು ಹೆಣ್ಣಾ ಎಂದು ಕೇಳಿದಾಗ ರಾಹುಲ್ ಹೌದು ಎನ್ನುತ್ತಾರೆ. ಆಗ ಸೋನಿಯಾ ತುಂಬಾ ಮುದ್ದಾಗಿದ್ದಾಳೆ. ಉಡುಗೊರೆಗಾಗಿ ಥ್ಯಾಂಕ್ಸ್ ಎಂದು ಮಗನನ್ನು ಅಪ್ಪಿಕೊಂಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ