ಮೊದಲಿಗಿಂತ ಕಡಿಮೆ ಸೀಟುಗಳನ್ನು ಪಡೆದರೂ ವ್ಯಕ್ತಿಗತವಾಗಿ ನಿತೀಶ್ ಕುಮಾರ್ ಎಂದರೆ ಬಿಹಾರಿಗರಿಗೆ ತುಂಬಾ ಇಷ್ಟ. ರಾಷ್ಟ್ರ ರಾಜಕೀಯದಲ್ಲೂ ದೊಡ್ಡ ಹೆಸರು ಮಾಡಿದ ಅವರನ್ನು ಪ್ರೀತಿಯಿಂದ ಮುನ್ನಾ ಎಂದೇ ಕರೆಯುತ್ತಾರೆ. ಒಂದು ಕಾಲಕ್ಕೆ ಡಕಾಯಿತರಿಂದಲೇ ತುಂಬಿದ್ದ ರಾಜ್ಯ ಎಂದು ಅಪಖ್ಯಾತಿ ಹೊಂದಿದ್ದ ಬಿಹಾರವನ್ನು ಹೊಸ ಹಾದಿಗೆ ತಂದ ನಿತೀಶ್, ಬಿಹಾರ ಜನತೆಯ ಸುಶಾಸನ್ ಬಾಬು!
ಮುನ್ನಾ ನಿತೀಶ್.. ಸುಶಾಸನ್ ಬಾಬು!
ತಮ್ಮ 20ಯ ವಯಸ್ಸಿಗೇ ರಾಜಕೀಯದ ಅಂಗಳದಲ್ಲಿ ರಂಗವಲ್ಲಿ ಹಾಕಲು ಆರಂಭಿಸಿದ ನಿತೀಶ್ ಕುಮಾರ್ ಗೆ ರಾಮ್ ಮನೋಹರ್ ಲೋಹಿಯಾ ಅವರು ರೂಪಿಸಿದ ಲೋಹಿಯಾ ಚಳುವಳಿ ಭದ್ರ ಅಡಿಪಾಯವನ್ನೇ ಒದಗಿಸಿತ್ತು. ಲೋಹಿಯಾ ಚಳುವಳಿಯ ಯುವ ಘಟಕದ ಸದಸ್ಯರಾಗಿ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು.
ಅವರ ತಂದೆ ಕಬಿರಾಜ್ ರಾಮ್ ಲಖನ್ ಸ್ವಾತಂತ್ರ್ಯ ಚಳುವಳಿಯ ಹಿನ್ನೆಲೆಯಿತ್ತು. ಅಲ್ಲದೇ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸದಸ್ಯರಾಗಿದ್ದರು. ನಂತರ ಕಾಂಗ್ರೆಸ್ ಪಕ್ಷವು ಟಿಕೆಟ್ ನಿರಾಕರಿಸದ ಕಾರಣ ಜನತಾ ದಳದ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಜೆಪಿ ಚಳುವಳಿಯಲ್ಲೂ ಇದ್ದರು ನಿತೀಶ್:
ನಿತೀಶ್ ಕುಮಾರ್ ರಾಜಕೀಯವಾಗಿ ಪ್ರಬುದ್ಧರಾಗಲು ಇನ್ನೊಂದು ಕಾರಣ ಜಯಪ್ರಕಾಶ್ ನಾರಾಯಣ ಅವರ ಚಳುವಳಿಗಳು. 1971ರಲ್ಲಿ ಆರಂಭವಾದ ಈ ಚಳುವಳಿಯ ಕಾವು ದೇಶದಾದ್ಯಂತ ಯುವಕರನ್ನು ತನ್ನೆಡೆಗೆ ಸೆಳೆಯುತ್ತಿತ್ತು. ನಿರುದ್ಯೋಗ, ಬಡತನ, ಕಾಂಗ್ರೆಸ್ ಸರ್ಕಾರ ತಂದ ಅರಾಜಕತೆ ಮುಂತಾದವುಗಳನ್ನು ಮುನ್ನೆಲೆಯಲ್ಲಿಟ್ಟುಕೊಂಡ ಜಯಪ್ರಕಾಶ್ ನಾರಾಯಣ, ಜನತಾ ದಳದ ಮುಂದಾಳತ್ವದಲ್ಲಿ ಸರ್ಕಾರದ ವಿರುದ್ಧ ಕ್ರಾಂತಿಯ ಕಹಳೆಯನ್ನೇ ಮೊಳಗಿಸಿದರು. ಇಲ್ಲಿ ಸಕ್ರಿಯವಾಗಿ ಪಾಲ್ಗೊಂಡ ನಿತೀಶ್ ಅವರಿಗೆ ರಾಜಕೀಯವಾಗಿ ಬೆಳೆಯಲು ಈ ಚಳುವಳಿ ಪ್ರಮುಖ ಮೆಟ್ಟಿಲಾಯಿತು.
ಮನೆಯಲ್ಲೇ ಮಾಡಿದ ಅಡುಗೆ ನಿತೀಶ್ಗೆ ಪಂಚಪ್ರಾಣ:
ರಾಜ್ಯದ ಆರ್ಥಿಕ ಅಭಿವೃದ್ಧಿ, ವಿದ್ಯಾರ್ಥಿನಿಯರ ಶಿಕ್ಷಣ ಮುಂತಾದ ಯೋಜನೆಗಳಿಗೆ ಅವರು ಬಹಳ ಒತ್ತು ನೀಡಿದ್ದರು. 69ರ ಹರೆಯದ ಅವರು ಮದ್ಯಪಾನ ಮತ್ತು ಧೂಮಪಾನಗಳಿಂದ ದೂರವೇ ಇದ್ದಾರೆ. ಅವರ ಏಕೈಕ ಮಗ ನಿಶಾಂತ್.
ನಿತೀಶ್ ಮಗನಿಗೆ ರಾಜಕೀಯ ಇಷ್ಟವಿಲ್ಲ!
Published On - 3:14 pm, Wed, 11 November 20