ಪ್ರತಿಭಟನೆ ನಿರತ ರೈತರಿಗೆ ಬೆಂಬಲ ಸೂಚಿಸಿದ ಪಾಪ್ ತಾರೆ ರಿಹಾನ್ನಾ, ಪರಿಸರ ಹೋರಾಟಗಾರ್ತಿ ಗ್ರೇಟಾ ಥುನ್​ಬರ್ಗ್

| Updated By: ಸಾಧು ಶ್ರೀನಾಥ್​

Updated on: Feb 03, 2021 | 12:14 PM

ರಿಹಾನ್ನಾ ಟ್ವೀಟಿಗೆ ಉತ್ತರಿಸಿದ ನಟಿ ಕಂಗನಾ ರನೌತ್, ಅವರು ರೈತರಲ್ಲ, ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರು ಎಂದು ತಿರುಗೇಟು ನೀಡಿದ್ದಾರೆ.

ಪ್ರತಿಭಟನೆ ನಿರತ ರೈತರಿಗೆ ಬೆಂಬಲ ಸೂಚಿಸಿದ ಪಾಪ್ ತಾರೆ ರಿಹಾನ್ನಾ, ಪರಿಸರ ಹೋರಾಟಗಾರ್ತಿ ಗ್ರೇಟಾ ಥುನ್​ಬರ್ಗ್
ರಿಹಾನ್ನಾ - ಗ್ರೇಟಾ ಥುನ್​​ಬರ್ಗ್
Follow us on

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಸುದ್ದಿಯನ್ನು ಟ್ವೀಟ್ ಮಾಡಿರುವ ಅಂತರರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ, ನಾವು ಈ ಬಗ್ಗೆ ಯಾಕೆ ಚರ್ಚಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರತಿಭಟನೆ ನಿರತ ರೈತರು ಮತ್ತು ಪೊಲೀಸರ ನಡುವೆ ಸಂಘರ್ಷವೇರ್ಪಟ್ಟ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂಬ ಸಿಎನ್ಎನ್ ಸುದ್ದಿಯನ್ನು ಟ್ವೀಟಿಸಿ ರಿಹಾನ್ನಾ #FarmersProtest ಎಂಬ ಹ್ಯಾಷ್​​ಟ್ಯಾಗ್ ನೊಂದಿಗೆ ಈ ಪ್ರಶ್ನೆಯೆತ್ತಿದ್ದಾರೆ.

ಈ ಟ್ವೀಟ್ ಗೆ ಉತ್ತರಿಸಿದ ಕ್ರಿಕೆಟಿಗ ಪ್ರಗ್ಯಾನ್ ಓಜಾ, ನಮ್ಮ ದೇಶ ರೈತರ ಬಗ್ಗೆ ಹೆಮ್ಮೆ ಪಡುತ್ತಿದೆ ಮತ್ತು ಅವರು ಎಷ್ಟು ಮುಖ್ಯ ಎಂಬುದು ಗೊತ್ತಿದೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಲಿದೆ ಎಂಬುದು ನನ್ನ ನಂಬಿಕೆ. ನಮ್ಮ ಆಂತರಿಕ ವಿಷಯಗಳಲ್ಲಿ ಹೊರಗಿನವರು ಮೂಗು ತೂರಿಸುವ ಅಗತ್ಯವಿಲ್ಲ ಎಂದಿದ್ದಾರೆ.

ರಿಹಾನ್ನಾ ಟ್ವೀಟ್

ರಿಹಾನ್ನಾ ಟ್ವೀಟಿಗೆ ಉತ್ತರಿಸಿದ ನಟಿ ಕಂಗನಾ ರನೌತ್, ಅವರು ರೈತರಲ್ಲ, ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರು. ದೇಶ ವಿಭಜನೆಗೊಂಡರೆ ಚೀನಾಕ್ಕೆ ಅಧಿಪತ್ಯ ಸ್ಥಾಪಿಸಿ ಅಮೆರಿಕದಂತೆ ಚೀನಾದ ಕಾಲೊನಿಗಳನ್ನು ನಿರ್ಮಿಸಲು ಸುಲಭವಾಗಲಿದೆ. ಹಾಗಾಗಿ ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನೀವು ಸುಮ್ಮನಿರಿ, ನಿಮ್ಮಂತೆ ನಾವು ನಮ್ಮ ದೇಶವನ್ನು ಮಾರಲ್ಲ ಎಂದಿದ್ದಾರೆ.

ಕಂಗನಾ ಟ್ವೀಟ್

ರಿಹಾನ್ನಾ ಟ್ವೀಟ್ ಬಗ್ಗೆ ಪರ- ವಿರೋಧ ಚರ್ಚೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಸ್ವೀಡನ್​ನ ಪರಿಸರ ಹೋರಾಟಗಾರ್ತಿ ಗ್ರೇಟಾ ಥುನ್​ಬರ್ಗ್ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ನಮ್ಮ ಬೆಂಬಲವಿದೆ ಎಂದು ಗ್ರೇಟಾ ಟ್ವೀಟ್ ಮಾಡಿದ್ದಾರೆ.

ಗ್ರೇಟಾ ಟ್ವೀಟ್

ಗ್ರೇಟಾ ಮತ್ತು ರಿಹಾನ್ನಾ ಅವರ ಟ್ವೀಟ್​ಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ- ವಿರೋಧ ಚರ್ಚೆಗಳು ನಡೆಯುತ್ತಿವೆ.  ಈ ಪೈಕಿ ಲೇಖಕ, ಪತ್ರಕರ್ತ ಸಂದೀಪನ್ ದೇಬ್ ಫೇಸ್​ಬುಕ್​ನಲ್ಲಿ  ಬರೆದ ಬರಹದ ಸಾರ ಇಲ್ಲಿದೆ.

ಸಂದೀಪನ್ ದೇಬ್ ಫೇಸ್​ಬುಕ್ ಪೋಸ್ಟ್

ಗ್ರೇಟಾ ಥುನ್ ಬರ್ಗ್ ಮತ್ತು ರಿಹಾನ್ನಾ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.
‘ನಾವು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ?’ ಎಂದು ಹೇಳುವ ರಿಹಾನ್ನಾ ಅವರಿಗೆ: ಖಂಡಿತ. ನಿಮ್ಮ ಸ್ವಂತ ಖರ್ಚಿನಲ್ಲಿ ನೀವು ಭಾರತಕ್ಕೆ ಏಕೆ ಬರುವುದಿಲ್ಲ ಮತ್ತು ಉನ್ನತ ದರ್ಜೆಯ ಟ್ರಾಕ್ಟರುಗಳನ್ನು ಹೊಂದಿರುವ ಮತ್ತು ಪ್ರತಿಭಟಿಸುವಾಗ ಪಿಜ್ಜಾಗಳನ್ನು ತಿನ್ನುವ ಮತ್ತು ದಣಿದಿದ್ದಾಗ ಕಾಲು ಮಸಾಜ್ ಮಾಡುವ ಯಂತ್ರಗಳನ್ನು ಹೊಂದಿರುವ ಬಡ ರೈತರಿಗೆ ಆರು ನಗರಗಳಲ್ಲಿ ಚಾರಿಟಿ ಶೋಗಳನ್ನು ಏಕೆ ಮಾಡಬಾರದು?

ನಾವು ಭಾರತೀಯ ರೈತರಿಗೆ ಬೆಂಬಲ ಸೂಚಿಸುತ್ತೇವೆ ಎಂದು ಹೇಳುವ ಗ್ರೇಟಾಗೆ: ನಾವು ಭಾರತೀಯರು ಸ್ವೀಡಿಷ್ ಬಾಂಬ್ ದಾಳಿಯ ಸಂತ್ರಸ್ತರಿಗೆ ಬೆಂಬಲವಾಗಿ ನಿಲ್ಲುತ್ತೇವೆ. ನಿಮ್ಮ ದೇಶದಲ್ಲಿ 2019 ರಲ್ಲಿ 257 ಬಾಂಬ್ ದಾಳಿಗಳು ನಡೆದಿದೆ. 2018 ರಲ್ಲಿ 162 ಬಾರಿ ಬಾಂಬ್ ದಾಳಿ ನಡೆದಿತ್ತು. ಈ ಬಾಂಬ್ ದಾಳಿಗಳನ್ನು ಅಪರಾಧ ವಿಭಾಗದಲ್ಲಿ ಪಟ್ಟಿ ಮಾಡಲಾಗಿಲ್ಲ! ನಿಮಗೆ ಹತ್ತಿರವಿರುವ ಜನರ ಬಗ್ಗೆ ಕಾಳಜಿ ವಹಿಸಿ. ನಾವು ನಮ್ಮನ್ನು ನೋಡಿಕೊಳ್ಳುತ್ತೇವೆ ಧನ್ಯವಾದಗಳು ಎಂದಿದ್ದಾರೆ.

‘ರಾಷ್ಟ್ರಧ್ವಜ ಗೌರವಿಸುವ ಬಗ್ಗೆ ಬಿಜೆಪಿ ಪಾಠ ಬೇಕಿಲ್ಲ; ಪ್ರತಿಭಟನೆಯಲ್ಲಿರುವ ರೈತರ ಮಕ್ಕಳೂ ಗಡಿ ಕಾಯುತ್ತಿದ್ದಾರೆ’