IRCTC ಶೀಘ್ರದಲ್ಲೇ ಕೆಲವು ರೈಲುಗಳಲ್ಲಿ ಸಸ್ಯಾಹಾರಿ ಆಹಾರ ಮಾತ್ರ ನೀಡಲಿದೆ ಭಾರತೀಯ ರೈಲ್ವೆ, ಏನಿದು ಸಾತ್ವಿಕ್ ಪ್ರಮಾಣಪತ್ರ?

| Updated By: ರಶ್ಮಿ ಕಲ್ಲಕಟ್ಟ

Updated on: Nov 14, 2021 | 10:56 AM

sattvik certification ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ ಸಸ್ಯಾಹಾರಿಗಳ ಅಗತ್ಯಗಳಿಗೆ ಸರಿಹೊಂದುವ ಮತ್ತು ಪವಿತ್ರ ಸ್ಥಳಗಳಿಗೆ ಸಸ್ಯಾಹಾರಿ ಪ್ರಯಾಣವನ್ನು ಉತ್ತೇಜಿಸುವ ಸೇವೆಗಳನ್ನು ಪರಿಚಯಿಸಲು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದೊಂದಿಗೆ (IRCTC) ಒಪ್ಪಂದ ಮಾಡಿಕೊಂಡಿದೆ.

IRCTC ಶೀಘ್ರದಲ್ಲೇ ಕೆಲವು ರೈಲುಗಳಲ್ಲಿ ಸಸ್ಯಾಹಾರಿ ಆಹಾರ ಮಾತ್ರ ನೀಡಲಿದೆ ಭಾರತೀಯ ರೈಲ್ವೆ, ಏನಿದು ಸಾತ್ವಿಕ್ ಪ್ರಮಾಣಪತ್ರ?
ವಂದೇ ಭಾರತ್ ಎಕ್ಸ್​​ಪ್ರೆಸ್
Follow us on

ದೆಹಲಿ: ಐಆರ್‌ಸಿಟಿಸಿಯು (IRCTC) ಕೆಲವು ರೈಲುಗಳಲ್ಲಿ “ಸಾತ್ವಿಕ್ ಪ್ರಮಾಣಪತ್ರ” (sattvik certified) ಪಡೆಯುವ ಮೂಲಕ “ಸಸ್ಯಾಹಾರಿ-ಸ್ನೇಹಿ ಪ್ರಯಾಣ”ವನ್ನು ಉತ್ತೇಜಿಸುತ್ತದೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಓಡುವ ರೈಲುಗಳು ಈ ಪ್ರಮಾಣಪತ್ರ ಪಡೆಯುವ ಉದ್ದೇಶ ಹೊಂದಿದೆ ಎಂದು ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾದ(Sattvik Council of India) ಹೇಳಿಕೆಯೊಂದು ತಿಳಿಸಿದೆ. ಭಾರತೀಯ ರೈಲ್ವೆಯ ಅಡುಗೆ ಮತ್ತು ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಇಂಡಿಯಾ ಡಾಟ್ ಕಾಂ ವರದಿ ಮಾಡಿದೆ. ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ ಸಸ್ಯಾಹಾರಿಗಳ ಅಗತ್ಯಗಳಿಗೆ ಸರಿಹೊಂದುವ ಮತ್ತು ಪವಿತ್ರ ಸ್ಥಳಗಳಿಗೆ ಸಸ್ಯಾಹಾರಿ ಪ್ರಯಾಣವನ್ನು ಉತ್ತೇಜಿಸುವ ಸೇವೆಗಳನ್ನು ಪರಿಚಯಿಸಲು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದೊಂದಿಗೆ (IRCTC) ಒಪ್ಪಂದ ಮಾಡಿಕೊಂಡಿದೆ. ದೆಹಲಿಯಿದ ಕಟರಾಗೆ ಪ್ರಯಾಣಿಸುವ ಐಆರ್‌ಸಿಟಿಸಿಯ ವಂದೇ ಭಾರತ್ ಎಕ್ಸ್‌ಪ್ರೆಸ್​​ಗೆ (Vande Bharat Express) ‘ಸಾತ್ವಿಕ’ ಎಂದು ಪ್ರಮಾಣೀಕರಿಸಲಾಗುವುದು ಎಂದು ಅದು ಹೇಳಿದೆ. ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾ ಸೋಮವಾರ ಐಆರ್‌ಸಿಟಿಸಿಯೊಂದಿಗೆ ‘ಸಾತ್ವಿಕ್’ ಪ್ರಮಾಣೀಕರಣ ಯೋಜನೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ. ಇದು ಐಆರ್‌ಸಿಟಿಸಿಯೊಂದಿಗೆ ಜಂಟಿಯಾಗಿ ಸಸ್ಯಾಹಾರಿ ಅಡುಗೆಮನೆಯ ಕೈಪಿಡಿಯನ್ನು ಸಿದ್ಧಪಡಿಸುತ್ತದೆ.

ಐಆರ್‌ಸಿಟಿಸಿ ಜತೆ ಸಾತ್ವಿಕ್ ಕೌನ್ಸಿಲ್ ಒಪ್ಪಂದ ಮಾಡಿದ್ದು ವೈಷ್ಣೋ ದೇವಿ ದೇವಸ್ಥಾನಕ್ಕೆ ಅಂತಿಮ ನಿಲ್ದಾಣವಾದ ಕಟರಾಕ್ಕೆ ಹೋಗುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತಹ ಯಾತ್ರಾ ಸ್ಥಳಗಳಿಗೆ ಹೋಗುವ ಕೆಲವು ರೈಲುಗಳಿಗೆ “ಪ್ರಮಾಣೀಕರಣ” ಪಡೆಯಲು ನಿರ್ಧರಿಸಿದೆ ಎಂದು ಅದು ಹೇಳಿದೆ.ಈ ಸೂತ್ರವನ್ನು ಸುಮಾರು 18 ರೈಲುಗಳಲ್ಲಿ ಪುನರಾವರ್ತಿಸುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.

“ಐಆರ್‌ಸಿಟಿಸಿ ಬೇಸ್ ಕಿಚನ್‌ಗಳು, ಎಕ್ಸಿಕ್ಯೂಟಿವ್ ಲಾಂಜ್‌ಗಳು, ಬಜೆಟ್ ಹೋಟೆಲ್‌ಗಳು, ಫುಡ್ ಪ್ಲಾಜಾಗಳು, ಟ್ರಾವೆಲ್ ಮತ್ತು ಟೂರ್ ಪ್ಯಾಕೇಜ್‌ಗಳು, ರೈಲ್ ನೀರ್ ಪ್ಲಾಂಟ್‌ಗಳು “ಸಸ್ಯಾಹಾರಿ ಸ್ನೇಹಿ ಪ್ರಯಾಣ” ವನ್ನು ಖಚಿತಪಡಿಸಿಕೊಳ್ಳಲು ‘ಸಾತ್ವಿಕ್’ ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: ಹಸುಗಳ ಸಗಣಿ, ಮೂತ್ರದಿಂದ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ: ಶಿವರಾಜ್​ ಸಿಂಗ್​ ಚೌಹಾಣ್​