ಮಾಜಿ ಪ್ರಧಾನಿ ಜವಾಹರ್​ ಲಾಲ್​ ನೆಹರೂ ಜನ್ಮಜಯಂತಿ; ಒಂದೇ ಸಾಲಿನಲ್ಲಿ ಟ್ವೀಟ್​ ಮಾಡಿ ಸ್ಮರಿಸಿದ ಪ್ರಧಾನಿ ಮೋದಿ

ನೆಹರೂ ಅವರನ್ನು ಮಕ್ಕಳು ಪ್ರೀತಿಯಿಂದ ಚಾಚಾ ನೆಹರೂ ಎಂದೇ ಕರೆಯುತ್ತಿದ್ದರು. ಅವರಿಗೂ ಮಕ್ಕಳೆಂದರೆ ತುಂಬ ಅಚ್ಚುಮೆಚ್ಚಾಗಿತ್ತು. ಇದೇ ಕಾರಣಕ್ಕೆ ಅವರ ಜನ್ಮದಿನವನ್ನು ಭಾರತದಲ್ಲಿ ಬಾಲ ದಿವಸ್​ ಅಥವಾ ಮಕ್ಕಳ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ.

ಮಾಜಿ ಪ್ರಧಾನಿ ಜವಾಹರ್​ ಲಾಲ್​ ನೆಹರೂ ಜನ್ಮಜಯಂತಿ; ಒಂದೇ ಸಾಲಿನಲ್ಲಿ ಟ್ವೀಟ್​ ಮಾಡಿ ಸ್ಮರಿಸಿದ ಪ್ರಧಾನಿ ಮೋದಿ
ಜವಾಹರ್​ಲಾಲ್​ ನೆಹರೂರನ್ನು ಸ್ಮರಿಸಿದ ಪ್ರಧಾನಿ ಮೋದಿ
Follow us
TV9 Web
| Updated By: Lakshmi Hegde

Updated on: Nov 14, 2021 | 12:31 PM

ದೆಹಲಿ: ಇಂದು ನವೆಂಬರ್​ 14. ಸ್ವತಂತ್ರ ಭಾರತದ ಮೊದಲ, ಮಾಜಿ ಪ್ರಧಾನಿ ಜವಾಹರ್​ಲಾಲ್​ ನೆಹರೂ (Jawaharlal Nehru) ಅವರ ಜನ್ಮದಿನದ ನಿಮಿತ್ತ ರಾಷ್ಟ್ರಾದ್ಯಂತ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ಈ ಬಾರಿ ಜವಾಹರ್​ಲಾಲ್​ ನೆಹರೂ ಅವರ 132ನೇ ಜನ್ಮಜಯಂತಿ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ನೆಹರೂ ಅವರನ್ನು ಸ್ಮರಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಮಂತ್ರಿ, ಪಂಡಿತ್​ ಜವಾಹರ್​ಲಾಲ್​ ನೆಹರೂ ಜನ್ಮದಿನದಂದು ಅವರಿಗೆ ನಮನಗಳು ಎಂದು ಹೇಳಿದ್ದಾರೆ.   

ನೆಹರೂ ಅವರನ್ನು ಮಕ್ಕಳು ಪ್ರೀತಿಯಿಂದ ಚಾಚಾ ನೆಹರೂ ಎಂದೇ ಕರೆಯುತ್ತಿದ್ದರು. ಅವರಿಗೂ ಮಕ್ಕಳೆಂದರೆ ತುಂಬ ಅಚ್ಚುಮೆಚ್ಚಾಗಿತ್ತು. ಇದೇ ಕಾರಣಕ್ಕೆ ಅವರ ಜನ್ಮದಿನವನ್ನು ಭಾರತದಲ್ಲಿ ಬಾಲ ದಿವಸ್​ ಅಥವಾ ಮಕ್ಕಳ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಇಂದು ಅವರ ಜನ್ಮದಿನದಂದು ಕಾಂಗ್ರೆಸ್ ಅಧ್ಯಕ್ಷೆ ದೆಹಲಿಯಲ್ಲಿರುವ ಶಾಂತಿವನದಲ್ಲಿ ನೆಹರೂ ಅವರಿಗೆ ಪುಷ್ಪನಮನ ಸಲ್ಲಿಸಿದರು. ಹಲವು ಕಾಂಗ್ರೆಸ್ ಮುಖಂಡರೂ ಕೂಡ ನೆಹರೂರವರನ್ನು ಸ್ಮರಿಸಿದ್ದಾರೆ. ಜವಾಹರ್​ ಲಾಲ್​ ನೆಹರೂ ಸ್ವತಂತ್ರ ಭಾರತದ ಮೊದಲ ಪ್ರಧಾನಿ. 1889ರ ನವೆಂಬರ್​ 14ರಂದು ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಜನಿಸಿದ್ದಾರೆ.  1947ರ ಅಗಸ್ಟ್​ 15ರಂದು ಪ್ರಧಾನಿ ಹುದ್ದೆಗೆ ಏರಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, 1964ರ ಮೇ 27ರಂದು ಮೃತಪಟ್ಟಿದ್ದಾರೆ.

1954ರಲ್ಲಿ ವಿಶ್ವಸಂಸ್ಥೆ ನವೆಂಬರ್​ 20ರಂದು ವಿಶ್ವ ಮಕ್ಕಳ ದಿನವನ್ನಾಗಿ ಆಚರಿಸಲಾಗುವುದು ಎಂದು ಘೋಷಿಸಿತು. ಅದರಂತೆ ಭಾರತದಲ್ಲೂ 1964ರವರೆಗೆ ಪ್ರತಿವರ್ಷ ನವೆಂಬರ್​ 20ರಂದು ಮಕ್ಕಳ ದಿನ ಆಚರಿಸಲಾಗುತ್ತಿತ್ತು. ಆದರೆ ನೆಹರೂ ಮೃತರಾದ ಬಳಿಕ ಅಂದರೆ 1964ರ ನಂತರ, ಅವರ ಜನ್ಮದಿನದಂದೇ ಭಾರತದಲ್ಲಿ ಮಕ್ಕಳ ದಿನ ಆಚರಿಸಲು ಸಂಸತ್ತಿನಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಇದನ್ನೂ ಓದಿ: ಫಿಟ್ನೆಸ್​ ಹೇಳಿಕೊಡ್ತೀವಿ ಅಂತ 1.5 ಕೋಟಿ ರೂ. ಮೋಸ ಮಾಡಿದ ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ? ಕೇಸ್​ ದಾಖಲು