ಪಂಚರಾಜ್ಯ ಚುನಾವಣೆಗೇ ಅಂತ್ಯವಾಗುತ್ತಿರುವ ರಾಹುಲ್‌-ಅಖಿಲೇಶ್‌ ಸ್ನೇಹ

ಲೋಕಸಭಾ ಚುನಾವಣೆಗೆ ಪೂರಕವಾಗಿ ಪ್ರತಿಪಕ್ಷಗಳೆಲ್ಲಾ ಸೇರಿ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ‘INDIA’ ಎನ್ನುವ ಒಕ್ಕೂಟವನ್ನು ಸ್ಥಾಪಿಸಿದ್ದವು. ಬಳಿಕ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್​ ಯಾದವ್ ಕಾಂಗ್ರೆಸ್​ ಪಕ್ಷದ ಬಗ್ಗೆ ಅಪಸ್ವರ ಎತ್ತಿದ್ದರು. ಕಾಂಗ್ರೆಸ್​ ಹಾಗೂ ಬಿಜೆಪಿ ಭಾಷೆ ಎರಡೂ ಒಂದೆ, ಸಮಾಜವಾದಿಗಳ ಹೋರಾಟವೇ ಬೇರೆ, ಇದು ಕಾಂಗ್ರೆಸ್​ ಹಾಗೂ ಬಿಜೆಪಿ ಜನರ ನಡುವಿನ ಹೋರಾಟ ಈ ಎರಡೂ ಪಕ್ಷಗಳ ತತ್ವಗಳು, ನಿರ್ಧಾರಗಳು ಒಂದೇ ಆಗಿವೆ. ಬಿಜೆಪಿಯಲ್ಲಿದ್ದವರು ಕಾಂಗ್ರೆಸ್​ಗೆ ಸೇರಿದರು, ಕಾಂಗ್ರೆಸ್​ನಲ್ಲಿದ್ದವರು ಬಿಜೆಪಿಗೆ ಸೇರಿದರು. ಹೀಗಾಗಿ ಈ ಎರಡೂ ಪಕ್ಷಗಳಲ್ಲಿ ತುಂಬಾ ವ್ಯತ್ಯಾಸಗಳೇನೂ ಇಲ್ಲ ಎಂದಿದ್ದರು.

ಪಂಚರಾಜ್ಯ ಚುನಾವಣೆಗೇ ಅಂತ್ಯವಾಗುತ್ತಿರುವ ರಾಹುಲ್‌-ಅಖಿಲೇಶ್‌ ಸ್ನೇಹ
ರಾಹುಲ್ ಗಾಂಧಿಮ ಅಖಿಲೇಶ್​
Image Credit source: NDTV

Updated on: Nov 06, 2023 | 2:55 PM

ಲೋಕಸಭಾ ಚುನಾವಣೆಗೆ ಪೂರಕವಾಗಿ ಪ್ರತಿಪಕ್ಷಗಳೆಲ್ಲಾ ಸೇರಿ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ‘INDIA’ ಎನ್ನುವ ಒಕ್ಕೂಟವನ್ನು ಸ್ಥಾಪಿಸಿದ್ದವು. ಆದರೆ ಆ ಸ್ನೇಹ ಪಂಚರಾಜ್ಯ ಚುನಾವಣೆಗೇ ಅಂತ್ಯಗೊಳ್ಳಬಹುದೇ ಎನ್ನುವ ಅನುಮಾನ ಮೂಡಿದೆ.  ಬಳಿಕ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್​ ಯಾದವ್(Akhilesh Yadav) ಕಾಂಗ್ರೆಸ್​ ಪಕ್ಷದ ಬಗ್ಗೆ ಅಪಸ್ವರ ಎತ್ತಿದ್ದರು. ಕಾಂಗ್ರೆಸ್​ ಹಾಗೂ ಬಿಜೆಪಿ ಭಾಷೆ ಎರಡೂ ಒಂದೆ, ಸಮಾಜವಾದಿಗಳ ಹೋರಾಟವೇ ಬೇರೆ, ಇದು ಕಾಂಗ್ರೆಸ್​ ಹಾಗೂ ಬಿಜೆಪಿ ಜನರ ನಡುವಿನ ಹೋರಾಟ ಈ ಎರಡೂ ಪಕ್ಷಗಳ ತತ್ವಗಳು, ನಿರ್ಧಾರಗಳು ಒಂದೇ ಆಗಿವೆ. ಬಿಜೆಪಿಯಲ್ಲಿದ್ದವರು ಕಾಂಗ್ರೆಸ್​ಗೆ ಸೇರಿದರು, ಕಾಂಗ್ರೆಸ್​ನಲ್ಲಿದ್ದವರು ಬಿಜೆಪಿಗೆ ಸೇರಿದರು. ಹೀಗಾಗಿ ಈ ಎರಡೂ ಪಕ್ಷಗಳಲ್ಲಿ ತುಂಬಾ ವ್ಯತ್ಯಾಸಗಳೇನೂ ಇಲ್ಲ ಎಂದಿದ್ದರು.

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್​ ಜತೆಗಿನ ಮೈತ್ರಿಗಿಂತ ಪಿಡಿಎ ಬಗೆಗೆ ಹೆಚ್ಚಿನ ಆಸಕ್ತಿ ತೋರಿದ್ದರು. ಹಾಗಿದ್ದರೆ ಅಖಿಲೇಷ್ ಹಾಗೂ ರಾಹುಲ್ ಗಾಂಧಿ ಸ್ನೇಹ ಇಲ್ಲಿಗೆ ಕೊನೆಗೊಳ್ಳುವುದೇ ಎನ್ನುವ ಅನುಮಾನ ಶುರುವಾಗಿದೆ.

ಮತ್ತಷ್ಟು ಓದಿ: ಕಾಂಗ್ರೆಸ್​ ಹಾಗೂ ಬಿಜೆಪಿ ಒಂದೇ ಸ್ವರದಲ್ಲಿ ಮಾತನಾಡುತ್ತವೆ: ಅಖಿಲೇಶ್​ ಯಾದವ್

ಅಖಿಲೇಶ್ ಯಾದವ್ ಸಮಯ ಸಿಕ್ಕಾಗಲೆಲ್ಲಾ ಕಾಂಗ್ರೆಸ್​ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್​ ಯಾದವ್ ಹಾಗೂ ಪ್ರಿಯಾಂಕಾ ಗಾಂಧಿ ಬೆಂಬಲಿಗರು ಮುಖಾಮುಖಿಯಾಗಿದ್ದಾರೆ.

ಅಖಿಲೇಶ್ ಯಾದವ್ ಅವರಿಗೆ ಸಂಸದ ಸ್ಥಾನವನ್ನು ಕಮಲನಾಥ್ ಬಿಟ್ಟುಕೊಡಲಿಲ್ಲ ಎಂದು ದೂರುತ್ತಿದ್ದಾರೆ, ಜತೆಗೆ
ಪರಸ್ಪರ ಪಕ್ಷದ ನಾಯಕರನ್ನು ಒಡೆಯಲು ಎರಡೂ ಕಡೆಯಿಂದ ತಯಾರಿ ನಡೆದಿದೆ. ಸಮಾಜವಾದಿ ಪಕ್ಷ ತನ್ನದೇ ಆದ ದೂರುಗಳನ್ನು ಹೊಂದಿದೆ, ಕಾಂಗ್ರೆಸ್​ ತನ್ನದೇ ಆದ ದೂರುಗಳನ್ನು ಹೊಂದಿದೆ.

ಸಮಾಜವಾದಿ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ರವಿ ಪ್ರಕಾಶ್ ವರ್ಮಾ ಅವರ ಫೋಟೋ ಹೊರಬಿದ್ದಿದ್ದು, ಅದರಲ್ಲಿ ಪೂರ್ವಿ ವರ್ಮಾ ಕೂಡ ಕಾಣಿಸಿಕೊಂಡಿದ್ದಾರೆ. ಅವರು ಪೂರ್ವ ಸಮಾಜವಾದಿ ಪಕ್ಷದ ನಾಲ್ಕು ಬಾರಿ ಸಂಸದರಾಗಿರುವ ರವಿ ವರ್ಮಾ ಅವರ ಪುತ್ರಿಯಾಗಿದ್ದು, ಕಳೆದ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವೂ ಟಿಕೆಟ್ ನೀಡಿತ್ತು. ತಂದೆ ಮತ್ತು ಮಗಳು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.ನಾಲ್ಕು ದಿನಗಳ ಹಿಂದೆ ಸಮಾಜವಾದಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ನಂತರ ಲಖಿಂಪುರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದರು.

ಖರ್ಗೆ ಭೇಟಿ ಬಳಿಕ ರವಿಪ್ರಕಾಶ್ ವರ್ಮಾ ಅವರು, ಅಖಿಲೇಶ್ ಯಾದವ್ ಅವರಿಗೆ ನಾಯಕತ್ವದ ಸಾಮರ್ಥ್ಯ ಇಲ್ಲ. ಅವರು ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಅವರ ರಾಜಕೀಯವನ್ನು ಮರೆತಿದ್ದಾರೆ. ಈಗ ರಾಹುಲ್ ಗಾಂಧಿ ದೇಶದ ಭವಿಷ್ಯ ಎಂದಿದ್ದಾರೆ.

ಸಮಾಜವಾದಿ ಪಕ್ಷ ತೊರೆದ ನಂತರ ರವಿ ವರ್ಮಾ ಇದೀಗ ರಾಹುಲ್ ಗಾಂಧಿಯನ್ನು ಹೊಗಳುತ್ತಿದ್ದಾರೆ. ಬಿಎಸ್ಪಿ ತೊರೆದ ನಂತರ ಇಮ್ರಾನ್ ಮಸೂದ್ ಕೂಡ ಅದನ್ನೇ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಾಗೆಯೇ ಲೋಕಸಭಾ ಚುನಾವಣೆಗೆಂದು ಶುರುವಾದ ಸ್ನೇಹ ಪಂಚರಾಜ್ಯ ಚುನಾವಣೆಗೂ ಮುನ್ನವೇ ಅಂತ್ಯವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

 

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us