AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ಕಾನ್ ಕಟುಕರಿಗೆ ಹಸುಗಳನ್ನು ಮಾರುತ್ತಿದೆ ಎನ್ನುವ ಮೇನಕಾ ಗಾಂಧಿ ಆರೋಪಕ್ಕೆ ಇಸ್ಕಾನ್ ಪ್ರತಿಕ್ರಿಯೆ

ಬಿಜೆಪಿ ಸಂಸದೆ ಮೇನಕಾ ಗಾಂಧಿ ಇಸ್ಕಾನ್ ಬಗ್ಗೆ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇಸ್ಕಾನ್ ಕಟುಕರಿಗೆ ಹಸುಗಳನ್ನು ಮಾರುತ್ತಿದೆ ಎಂದು ಮೇನಕಾ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು, ಇದೀಗ ಈ ವಿಚಾರ ಕುರಿತು ತನಿಖೆ ನಡೆಸುವಂತೆ ಒತ್ತಡ ಕೇಳಿಬರುತ್ತಿದೆ. ಇಸ್ಕಾನ್​ನಲ್ಲಿ ಹಾಲು ಕೊಡುವ ಹಸುಗಳನ್ನು ಮಾತ್ರ ಇರಿಸಲಾಗಿದೆ, ದನದ ಕೊಟ್ಟಿಗೆಯಲ್ಲಿ ಒಂದು ಕರು ಕೂಡ ಇಲ್ಲ.

ಇಸ್ಕಾನ್ ಕಟುಕರಿಗೆ ಹಸುಗಳನ್ನು ಮಾರುತ್ತಿದೆ ಎನ್ನುವ ಮೇನಕಾ ಗಾಂಧಿ ಆರೋಪಕ್ಕೆ ಇಸ್ಕಾನ್ ಪ್ರತಿಕ್ರಿಯೆ
ಮನೇಕಾ ಗಾಂಧಿImage Credit source: Mint
ನಯನಾ ರಾಜೀವ್
|

Updated on: Sep 27, 2023 | 11:08 AM

Share

ಬಿಜೆಪಿ ಸಂಸದೆ ಮೇನಕಾ ಗಾಂಧಿ ಇಸ್ಕಾನ್(ISKON) ಬಗ್ಗೆ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇಸ್ಕಾನ್ ಕಟುಕರಿಗೆ ಹಸುಗಳನ್ನು ಮಾರುತ್ತಿದೆ ಎಂದು ಮೇನಕಾ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು, ಇದೀಗ ಈ ವಿಚಾರ ಕುರಿತು ತನಿಖೆ ನಡೆಸುವಂತೆ ಒತ್ತಡ ಕೇಳಿಬರುತ್ತಿದೆ. ಇಸ್ಕಾನ್​ನಲ್ಲಿ ಹಾಲು ಕೊಡುವ ಹಸುಗಳನ್ನು ಮಾತ್ರ ಇರಿಸಲಾಗಿದೆ, ದನದ ಕೊಟ್ಟಿಗೆಯಲ್ಲಿ ಒಂದು ಕರು ಕೂಡ ಇಲ್ಲ.

ಅವರು ಗೋಶಾಲೆಗಳನ್ನು ನಿರ್ಮಿಸುತ್ತಾರೆ ಮತ್ತು ಗೋಶಾಲೆಗಳನ್ನು ನಡೆಸುವುದಕ್ಕಾಗಿ ಸರ್ಕಾರದಿಂದ ವಿಶ್ವಾದ್ಯಂತ ಪ್ರಯೋಜನಗಳನ್ನು ಪಡೆಯುತ್ತಾರೆ. ಅವರ ಅನಂತಪುರ ಗೋಶಾಲೆಗೆ ಹೋಗಿದ್ದೆ ಒಂದೇ ಒಂದು ವಯಸ್ಸಾದ ಹಸು ಇರಲಿಲ್ಲ, ಕರುಗಳು ಕೂಡ ಇರಲಿಲ್ಲ, ಸಂಪೂರ್ಣ ಹೈನುಗಾರಿಕೆ. ಇಸ್ಕಾನ್ ಎಲ್ಲಾ ಹಸುಗಳನ್ನು ಕಟುಕರಿಗೆ ಮಾರುತ್ತಿದೆ. ಇಸ್ಕಾನ್ ಕಟುಕರಿಗೆ ಮಾರಿದಷ್ಟು ಹಸುಗಳನ್ನು ಇನ್ಯಾರೂ ಮಾರಿಲ್ಲ ಎಂದು ಹೇಳಿದ್ದಾರೆ.

ಇಸ್ಕಾನ್ ಪ್ರತಿಕ್ರಿಯೆ ಮನೇಕಾ ಅವರ ಆರೋಪಗಳಿಗೆ ಇಸ್ಕಾನ್ ಪ್ರತಿಕ್ರಿಯೆ ನೀಡಿದ್ದು, ಅವುಗಳನ್ನು ಆಧಾರ ರಹಿತ ಎಂದು ಬಣ್ಣಿಸಿದೆ. ಇಸ್ಕಾನ್​ನ ರಾಷ್ಟ್ರೀಯ ವಕ್ತಾರ ಯುಧಿಷ್ಠಿರ್ ಗೋವಿಂದ್ ದಾಸ್ ಮಾತನಾಡಿ, ಗೋವುಗಳು ಹಾಗೂ ಗೂಳಿಗಳ ಸಂರಕ್ಷಣೆಗಾಗಿ ಭಾರತ ಮಾತ್ರವಲ್ಲದೆ ವಿಶ್ವಾದ್ಯಂತ ಕೆಲಸ ಮಾಡುತ್ತಿದೆ. ಹಸುಗಳು ಮತ್ತು ಗೂಳಿಗಳು ಇಸ್ಕಾನ್​ನ ಗೋಶಾಲೆಯಲ್ಲಿ ಬದುಕಿರುವವರೆಗೂ ಇರುತ್ತವೆ ಒಂದೇ ಒಂದು ಹಸು, ಎತ್ತು ಅಥವಾ ಕರುವನ್ನು ಕಟುಕರಿಗೆ ಮಾರುವುದಿಲ್ಲ.

ಮತ್ತಷ್ಟು ಓದಿ: ಇಸ್ಕಾನ್ ಗೆ ಶ್ರೀರಂಗಪಟ್ಟಣದಲ್ಲಿ ಜಮೀನು ಮಂಜೂರು: ಹರಾಜಿನ ಬದಲು ಮಂಜೂರಾತಿ ಹೇಗೆ ಮಾಡುತ್ತೀರಿ -ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಒಂದು ತಿಂಗಳ ಹಿಂದೆ ನಡೆದ ಸಂದರ್ಶನದ ಒಂದು ತುಣುಕು ಮೇನಕಾ ಗಾಂಧಿ ಒಂದು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ಈಗ ವೈರಲ್ ಆಗುತ್ತಿದೆ. ಪ್ರಶಾಂತ್ ಕನೋಜಿಯಾ ತಮ್ಮ ಎಕ್ಸ್​ ಪೋಸ್ಟ್​ ಮಾಡಿದ್ದು, ಭಾರತದಲ್ಲಿ ಅತಿ ಹೆಚ್ಚು ಬೋಗಸ್ ಮತ್ತು ಮೋಸ ಮಾಡುವ ಸಂಸ್ಥೆ ಇದ್ದರೆ ಅದು ಇಸ್ಕಾನ್ ಎಂದು ಹಲವು ವರ್ಷಗಳಿಂದ ಹೇಳುತ್ತಿದ್ದೇನೆ. ಈಗ ಬಿಜೆಪಿಯ ಹಿರಿಯ ನಾಯಕಿ ಮೇನಕಾ ಗಾಂಧಿ ಕೂಡ ಅದೇ ಮಾತನಾಡಿದ್ದಾರೆ ಎಂದರು. ಬೀದಿಯಲ್ಲಿ ಹರೇ ಕೃಷ್ಣ ಎಂದು ಕೂಗುತ್ತಾರೆ ಆದರೆ ಒಳಗೆ ದೊಡ್ಡ ಅಜೆಂಡಾವಿದೆ. ಇಸ್ಕಾನ್ ಕೂಡ ಆಳವಾದ ಜಾತಿವಾತಿ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ