Sign In

By signing in or creating an account, you agree with Associated Broadcasting Company's Terms & Conditions and Privacy Policy.

ISRO SSLV: ವಿದ್ಯಾರ್ಥಿಗಳು ರೂಪಿಸಿರುವ ಉಪಗ್ರಹಗಳನ್ನು ಹೊತ್ತ ಎಸ್​ಎಸ್​ಎಲ್​ವಿ ಉಡ್ಡಯನಕ್ಕೆ ಕ್ಷಣಗಣನೆ ಆರಂಭ

SSLV: ಇಸ್ರೋ ಮಾರ್ಗದರ್ಶನದಲ್ಲಿ ದೇಶದ ವಿವಿಧೆಡೆಯ ಗ್ರಾಮೀಣ ವಿದ್ಯಾರ್ಥಿನಿಯರು ಈ ಪೇಲೋಡ್​ಗಳನ್ನು ರೂಪಿಸಿದ್ದಾರೆ.

ISRO SSLV: ವಿದ್ಯಾರ್ಥಿಗಳು ರೂಪಿಸಿರುವ ಉಪಗ್ರಹಗಳನ್ನು ಹೊತ್ತ ಎಸ್​ಎಸ್​ಎಲ್​ವಿ ಉಡ್ಡಯನಕ್ಕೆ ಕ್ಷಣಗಣನೆ ಆರಂಭ
ಉಡ್ಡಯನಕ್ಕೆ ಸಿದ್ಧವಿರುವ ಇಸ್ರೋ ಎಸ್​ಎಸ್​ಎಲ್​ವಿ ಉಪಗ್ರಹ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 07, 2022 | 8:25 AM

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (Indian Space Research Organisation – ISRO) ಸಣ್ಣ ಉಪಗ್ರಹ ಉಡ್ಡಯನ ವಾಹನದ (Small Satellite Launch Vehicle – SSLV) ಕಾರ್ಯಾರಂಭಕ್ಕೆ ಕ್ಷಣಗಣನೆ (Countdown) ಆರಂಭಿಸಿದೆ. ಎಸ್​​ಎಸ್​ಎಲ್​ವಿ ಮೂಲಕ 500 ಕೆಜಿವರೆಗೆ ತೂಕವಿರುವ ಉಪಗ್ರಹಗಳನ್ನು ಭೂಮಿಯ ಕೆಳ ಹಂತದ ಕಕ್ಷೆಗೆ ಸೇರಿಸುವ ಮಹತ್ವದ ಪ್ರಯತ್ನಕ್ಕೆ ಇಸ್ರೋ ಚಾಲನೆ ನೀಡಿದೆ. ಇಂದು (7ನೇ ಆಗಸ್ಟ್, ಭಾನುವಾರ) ಬೆಳಿಗ್ಗೆ 09:18ಕ್ಕೆ ರಾಕೆಟ್​ ಹಾರಿಸುವ ವಿಧಿಗಳು ಆರಂಭವಾಗುತ್ತವೆ. 08:30ರಿಂದಲೇ ಲೈವ್ ನೋಡಬಹುದಾಗಿದೆ. ಮೊದಲ ಉಡ್ಡಯನದಲ್ಲಿ ಭೂ ನಿಗಾ ಉಪಕರಣವಿರುವ ಉಪಗ್ರಹದೊಂದಿಗೆ ವಿದ್ಯಾರ್ಥಿಗಳು ರೂಪಿಸಿರುವ ಕೆಲ ಉಪಗ್ರಹಗಳನ್ನು ಇಸ್ರೋ ಬಾಹ್ಯಾಕಾಶ ಕಕ್ಷೆಗೆ ಸೇರಿಸಲಿದೆ. ಈ ಮಹತ್ವದ ಬೆಳವಣಿಗೆಗೆ ಸಂಬಂಧಿಸಿದ 10 ಮುಖ್ಯಾಂಶಗಳು ಇಲ್ಲಿದೆ.

  1. SSLV-D1/EOS-02 ಯೋಜನೆಯ ಕೌಂಟ್​ಡೌನ್ 02:26ಕ್ಕೆ ಆರಂಭವಾಗಿದೆ ಎಂದು ಇಸ್ರೋ ತನ್ನ ವೆಬ್​ಸೈಟ್​ನಲ್ಲಿ ಭಾನುವಾರ ಘೋಷಿಸಿದೆ. EOS-02 ಮತ್ತು ಆಜಾದಿಸ್ಯಾಟ್​ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ ಸೇರಿಸುವುದು ಇಸ್ರೋದ ಮುಖ್ಯ ಉದ್ದೇಶವಾಗಿದೆ.
  2. ಮುಂಜಾನೆ 09:18ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (Satish Dhawan Space Centre – SHAR) ಉಪಗ್ರಹ ಹೊತ್ತ ರಾಕೆಟ್​ ನಭಕ್ಕೆ ಚಿಮ್ಮಲಿದೆ.
  3. AzaadiSAT ಮೂಲಕ ತಲಾ 50 ಗ್ರಾಂ ತೂಕದ 75 ಪೇಲೋಡ್​ಗಳನ್ನು (ಸಣ್ಣ ಉಪಗ್ರಹಗಳು) ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ. ಇಸ್ರೋ ಮಾರ್ಗದರ್ಶನದಲ್ಲಿ ದೇಶದ ವಿವಿಧೆಡೆಯ ಗ್ರಾಮೀಣ ವಿದ್ಯಾರ್ಥಿನಿಯರು ಈ ಪೇಲೋಡ್​ಗಳನ್ನು ರೂಪಿಸಿದ್ದಾರೆ.
  4. ಇಸ್ರೋದ ಭೂ-ಕೇಂದ್ರಗಳಲ್ಲಿ ರೂಪಿಸಿರುವ ‘ಸ್ಪೇಸ್ ಕಿಡ್ಸ್ ಇಂಡಿಯಾ’ (Space Kidz India) ವ್ಯವಸ್ಥೆಯ ಈ ಉಪಗ್ರಹಗಳು ರವಾನಿಸುವ ದತ್ತಾಂಶಗಳನ್ನು ಸ್ವೀಕರಿಸಲಿದೆ. ಈ ಸಣ್ಣ ಉಪಗ್ರಹಗಳಲ್ಲಿ ದೂರದ ಸಿಗ್ನಲ್​ಗಳನ್ನು ಗ್ರಹಿಸುವ / ರವಾನಿಸುವ ಪ್ರಬಲ ಟ್ರಾನ್ಸ್​ಪಾಂಡರ್​ ಮತ್ತು ಸೆಲ್ಫಿ ಕ್ಯಾಮೆರಾಗಳಿವೆ.
  5. ಇದೇ ಎಸ್​ಎಸ್​ಎಲ್​ವಿಯಲ್ಲಿ EOS-02 ಭೂ ನಿಗಾ ಉಪಗ್ರಹವೂ ಇದೆ. ಇದು ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆಗೆ ನೆರವಾಗಲಿದೆ.
  6. ಇಸ್ರೋದ ಈ ಪ್ರಯತ್ನ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಸಂಸ್ಥೆಯು 10ರಿಂದ 500 ಕೆಜಿ ತೂಗುವ ಮಿನಿ, ನ್ಯಾನೊ ಮತ್ತು ಮೈಕ್ರೊ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಪ್ರಯತ್ನಗಳನ್ನು ಆರಂಭಿಸಲಿದೆ. ಆರ್ಥಿಕವಾಗಿಯೂ ಇದು ಲಾಭದಾಯಕವಾಗಲಿದೆ.
  7. ಭೂಮಿಯಿಂದ ಚಿಮ್ಮಿದ ನಂತರ ಕಕ್ಷೆ ಸೇರುವ ಅವಧಿಯು ಕಡಿಮೆ. ಹಲವು ಉಪಗ್ರಹಗಳನ್ನು ಏಕಕಾಲಕ್ಕೆ ಕಕ್ಷೆಗೆ ಸೇರಿಸುವ ಅವಕಾಶ, ಬೇಡಿಕೆಗೆ ತಕ್ಕಂತೆ ಉಡ್ಡಯವನ ಸೌಕರ್ಯ, ಉಡ್ಡಯನಕ್ಕೆ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಹಲವು ರೀತಿಯ ಅವಕಾಶಗಳನ್ನು ಎಸ್​ಎಸ್​ಎಲ್​ವಿ ಒದಗಿಸುತ್ತದೆ.
  8. ಈ ಯೋಜನೆಯೊಂದಿಗೆ ಸಣ್ಣ ಉಪಗ್ರಹಗಳ ಮಾರುಕಟ್ಟೆಯಲ್ಲಿ ಇಸ್ರೋ ತನ್ನ ಪಾಲು ಹೆಚ್ಚಿಸಿಕೊಳ್ಳಲು ಮುಂದಾಗಿದೆ.
  9. ಪಿಎಸ್​ಎಲ್​ವಿ ಎಂದೇ ಹೆಸರಾದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ಸ್ (Polar Satellite Launch Vehicles – PSLV) ಈವರೆಗೆ ಇಸ್ರೋದ ವಿಶ್ವಾಸಾರ್ಹ ಉಡ್ಡಯನ ವಾಹನವಾಗಿದೆ.
  10. ಇದು ಈ ವರ್ಷದಲ್ಲಿ ಇಸ್ರೋದ 3ನೇ ಉಡ್ಡಯನವಾಗಿದೆ. ಪಿಎಸ್​ಎಲ್​ವಿ-ಸಿ53 ಯೋಜನೆಯನ್ನು ಜೂನ್ 30ರಂದು ಯೋಶಸ್ವಿಯಾಗಿ ನಿರ್ವಹಿಸಲಾಗಿತ್ತು. PSLV-C52/EOS-04 ಭೂ ನಿಗಾ ಉಪಗ್ರಹ ಯೋಜನೆಗಳನ್ನು ಫೆಬ್ರುವರಿಯಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿತ್ತು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್