ಇಸ್ರೋ ಮುಡಿಗೆ ಮತ್ತೊಂದು ಗರಿ: ಸೆ. 4 ರಂದು ನಭಕ್ಕೆ ಜಿಗಿಯಲಿದೆ ಜಿಎಸ್‌ಎಲ್‌ವಿ-ಎಫ್17 ರಾಕೆಟ್

ಇಸ್ರೋ ಸೆಪ್ಟೆಂಬರ್ 4 ರಂದು ಜಿಎಸ್​ಎಲ್​ವಿ-ಎಫ್17 ರಾಕೆಟ್ ಮೂಲಕ EOS-05 ಭೂ ವೀಕ್ಷಣಾ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಿದೆ. ಸಾರ್ವಜನಿಕರು ಲಾಂಚ್ ವ್ಯೂ ಗ್ಯಾಲರಿ ಅಥವಾ ಆನ್‌ಲೈನ್‌ನಲ್ಲಿ ಈ ರೋಮಾಂಚಕ ಕ್ಷಣವನ್ನು ಲೈವ್ ವೀಕ್ಷಿಸಬಹುದು. EOS-05 ನೈಸರ್ಗಿಕ ವಿಪತ್ತು ನಿರ್ವಹಣೆ, ಮೀನುಗಾರಿಕೆ ಮತ್ತು ಕೃಷಿಗೆ ಸಹಾಯಕವಾಗಿದ್ದು, ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇಸ್ರೋ ಮುಡಿಗೆ ಮತ್ತೊಂದು ಗರಿ: ಸೆ. 4 ರಂದು ನಭಕ್ಕೆ ಜಿಗಿಯಲಿದೆ ಜಿಎಸ್‌ಎಲ್‌ವಿ-ಎಫ್17 ರಾಕೆಟ್
ರಾಕೆಟ್
Image Credit source: ISRO

Updated on: Sep 03, 2026 | 10:53 AM

ಶ್ರೀಹರಿಕೋಟ, ಸೆಪ್ಟೆಂಬರ್ 03: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೆಪ್ಟೆಂಬರ್ 4 ರಂದು ಮುಂಜಾನೆ 2.55 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಪ್ಯಾಡ್‌ನಿಂದ ತನ್ನ ಜಿಎಸ್‌ಎಲ್‌ವಿ-ಎಫ್17  ರಾಕೆಟ್ ಅನ್ನು ಉಡಾವಣೆ ಮಾಡಲು ಸರ್ವಸನ್ನದ್ಧವಾಗಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನಭಕ್ಕೆ ಚಿಮ್ಮಲಿರುವ ಈ ರಾಕೆಟ್, ದೇಶದ ಗಡಿ ಕಣ್ಗಾವಲು ಹಾಗೂ ಹವಾಮಾನ ಮೇಲ್ವಿಚಾರಣೆಗೆ ನೆರವಾಗುವ 2,367 ಕೆಜಿ ತೂಕದ ‘ಇಒಎಸ್-೦5’ (EOS-05) ಭೂ ವೀಕ್ಷಣಾ ಉಪಗ್ರಹವನ್ನು ಹೊತ್ತೊಯ್ಯಲಿದೆ. ಸಾರ್ವಜನಿಕರು ಈ ರೋಮಾಂಚಕ ಕ್ಷಣವನ್ನು ಶ್ರೀಹರಿಕೋಟಾದ ಲಾಂಚ್ ವ್ಯೂ ಗ್ಯಾಲರಿಯಲ್ಲಿ ಕುಳಿತು ನೇರವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಸರ್ಕಾರಿ ಗುರುತಿನ ಚೀಟಿಯೊಂದಿಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ದೂರದಲ್ಲಿರುವ ವೀಕ್ಷಕರಿಗಾಗಿ ಇಸ್ರೋದ ಅಧಿಕೃತ ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್‌ನಲ್ಲಿ ಮುಂಜಾನೆ 2.25ರಿಂದಲೇ ಲೈವ್ ಸ್ಟ್ರೀಮಿಂಗ್ ಪ್ರಸಾರವಾಗಲಿದೆ. ಭಾರತದ ಸ್ವದೇಶಿ ಕ್ರಯೋಜೆನಿಕ್ ಎಂಜಿನ್ ಒಳಗೊಂಡಿರುವ ಜಿಎಸ್‌ಎಲ್‌ವಿ ಸರಣಿಯ 19 ನೇ ಯಶಸ್ವಿ ಹಾರಾಟ ಇದಾಗಲಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ.

ಮತ್ತಷ್ಟು ಓದಿ:
ಚಂದ್ರನಲ್ಲಿ ಮಾನವನ ವಸಾಹತು; ಅಮೆರಿಕದ ಮೂನ್ ಬೇಸ್ ಯೋಜನೆಗೆ ನಾಸಾ ಜೊತೆ ಕೈಜೋಡಿಸಲು ಇಸ್ರೋಗೆ ಆಹ್ವಾನ

ಚಂಡಮಾರುತ, ದಿಢೀರ್ ಪ್ರವಾಹ, ಕಾಡ್ಗಿಚ್ಚು ಮತ್ತು ಮೇಘಸ್ಫೋಟಗಳಂತಹ ನೈಸರ್ಗಿಕ ವಿಕೋಪಗಳ ಮುನ್ಸೂಚನೆಯನ್ನು ಕ್ಷಣಕ್ಷಣಕ್ಕೂ ಗ್ರಹಿಸಿ ವಿಪತ್ತು ನಿರ್ವಹಣಾ ತಂಡಗಳಿಗೆ ರವಾನಿಸುತ್ತದೆ. ಸಮುದ್ರದಲ್ಲಿ ಮೀನುಗಳ ಸಾಂದ್ರತೆ ಹೆಚ್ಚಿರುವ ವಲಯಗಳನ್ನು ಗುರುತಿಸಿ ಮೀನುಗಾರರಿಗೆ ಮಾರ್ಗದರ್ಶನ ಮಾಡುತ್ತದೆ ಹಾಗೂ ಕೃಷಿ ಮತ್ತು ಅರಣ್ಯ ಸಮೀಕ್ಷೆಗೆ ಉಪಯುಕ್ತ ದತ್ತಾಂಶ ನೀಡುತ್ತದೆ.

19 ನೇ ಹಾರಾಟ: ಇದು ಜಿಎಸ್‌ಎಲ್‌ವಿ ಸರಣಿಯ 19 ನೇ ಉಡಾವಣೆಯಾಗಿದ್ದು, ಸುಮಾರು 51.7 ಮೀಟರ್ ಎತ್ತರ ಮತ್ತು 420 ಟನ್ ತೂಕ ಹೊಂದಿದೆ.

ಪೋಸ್ಟ್​

3 ಹಂತದ ಎಂಜಿನ್: ಘನ, ದ್ರವ ಮತ್ತು ಭಾರತದ್ದೇ ಆದ ಸ್ವದೇಶಿ ಮೂರನೇ ಕ್ರಯೋಜೆನಿಕ್ ಹಂತವನ್ನು ಒಳಗೊಂಡಿದೆ. ಉಪಗ್ರಹವನ್ನು ನಿಗದಿತ ಎತ್ತರಕ್ಕೆ ಕೊಂಡೊಯ್ಯಲು 27 ಗಂಟೆಗಳ ಮುಂಚಿತವಾಗಿ ಕೌಂಟ್‌ಡೌನ್ ಪ್ರಕ್ರಿಯೆ ಆರಂಭವಾಗಲಿದೆ.

ಲಾಂಚ್ ವ್ಯೂ ಗ್ಯಾಲರಿ (LVG): ಸಾರ್ವಜನಿಕರು ಶ್ರೀಹರಿಕೋಟಾದಲ್ಲಿರುವ ಲಾಂಚ್ ವ್ಯೂ ಗ್ಯಾಲರಿಯಲ್ಲಿ ಕುಳಿತು ರಾಕೆಟ್ ಆಕಾಶಕ್ಕೆ ಚಿಮ್ಮುವ ನೇರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ನೋಂದಣಿ ದಾಖಲೆಗಳು: ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡುವಾಗ ಆಧಾರ್ ಕಾರ್ಡ್/ಚಾಲನಾ ಪರವಾನಗಿ, ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ವಿವರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.

ಶ್ರೀಹರಿಕೋಟಾದಲ್ಲಿ ಬೃಹತ್ ಸ್ಪೇಸ್ ಥೀಮ್ ಪಾರ್ಕ್ ನಿರ್ಮಿಸುತ್ತಿದ್ದು, ಭಾರತದ ಬಾಹ್ಯಾಕಾಶ ಇತಿಹಾಸ ಸಾರುವ ಸ್ಪೇಸ್ ಮ್ಯೂಸಿಯಂ ಹಾಗೂ ರಾಕೆಟ್ ಗಾರ್ಡನ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸದ್ಯಕ್ಕೆ ಲಾಂಚ್ ವ್ಯೂ ಗ್ಯಾಲರಿ ಮಾತ್ರ ಸಂದರ್ಶಕರಿಗೆ ಮುಕ್ತವಾಗಿದೆ.

ಈ ಹಿಂದೆ 2021 ರಲ್ಲಿ ಜಿಐಸ್ಯಾಟ್-1  ಉಪಗ್ರಹವನ್ನು ಹೊತ್ತೊಯ್ದ ಜಿಎಸ್‌ಎಲ್‌ವಿ ರಾಕೆಟ್‌ನ ಕ್ರಯೋಜೆನಿಕ್ ಹಂತದಲ್ಲಿ ದೋಷ ಕಾಣಿಸಿಕೊಂಡು ವಿಫಲವಾಗಿತ್ತು. ಇದೀಗ ಎಲ್ಲಾ ತಾಂತ್ರಿಕ ಸವಾಲುಗಳನ್ನು ಪರಿಹರಿಸಿ ಅದೇ ಮಾದರಿಯ EOS-05 ಅನ್ನು ಇಸ್ರೋ ಉಡಾವಣೆ ಮಾಡುತ್ತಿರುವುದು ವಿಜ್ಞಾನಿಗಳಲ್ಲಿ ಹೆಚ್ಚಿನ ವಿಶ್ವಾಸ ತಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Loading...
Unable to load recommendations.
Follow Us